Viral Video : ‘ನಮ್ಮ ಗ್ರಾಮಭಾರತದ ಅವಸ್ಥೆ’ ವಿದ್ಯುತ್ ಬದಲಾಗಿ ಎತ್ತುಗಳ ಬಳಕೆ
Jugaad : ‘ಗ್ರಾಮಭಾರತದ ಅನ್ವೇಷಣೆ’ ಅದ್ಭುತ! ಎಂದು ಐಎಎಸ್ ಅಧಿಕಾರಿ ಶರಣ್ ಅವನೀಶ್ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಇದು ಪ್ರಾಣಿಹಿಂಸೆಯನ್ನು ಉತ್ತೇಜಿಸುವಂತಿದೆ ಎಂದು ಟೀಕಿಸಿದ್ದಾರೆ ನೆಟ್ಟಿಗರು.
Viral Video : ಈ ವಿಡಿಯೋದಲ್ಲಿ ಟ್ರೆಡ್ಮಿಲ್ನಂತಹ ಯಂತ್ರದ ಮೇಲೆ ಎತ್ತು ಸತತವಾಗಿ ನಡೆಯುತ್ತಿದೆ. ಇದಕ್ಕೆ ನೀರಿನ ಪಂಪ್ ಅನ್ನು ಜೋಡಿಸಲಾಗಿದೆ. ಎತ್ತು ಉತ್ಪಾದಿಸುವ ಶಕ್ತಿಯಿಂದ ಹೊಲಕ್ಕೆ ನೀರು ಸಿಂಪರಣೆಗೊಳ್ಳುತ್ತದೆ. ಈ ಚಮತ್ಕಾರಿಕ ದೃಶ್ಯ ಇಲ್ಲಿಗೇ ಮುಗಿಯುವುದಿಲ್ಲ. ಕ್ಯಾಮೆರಾ ಪ್ಯಾನ್ ಆಗುತ್ತಿದ್ದಂತೆ ಹೀಗೆ ಸಾಲಾಗಿಟ್ಟ ಟ್ರೆಡ್ಮಿಲ್ನಂಥ ಯಂತ್ರಗಳ ಮೇಲೆ ಮತ್ತಷ್ಟು ಎತ್ತುಗಳು ನಡೆಯುತ್ತಿರುತ್ತಲೇ ಇರುತ್ತವೆ. ಈ ವಿಡಿಯೋ ಅನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಾಗಿದೆ. ನೋಡಿದ ತಕ್ಷಣ ಭಾರತೀಯರು ಇಂಥ ತಂತ್ರಕೌಶಲಗಳನ್ನು ರೂಪಿಸುವಲ್ಲಿ ಸದಾ ಮುಂದು ಎಂದು ಅಚ್ಚರಿ ಉಂಟಾಗುತ್ತದೆ.
RURAL INDIA Innovation. It’s Amazing!! pic.twitter.com/rJAaGNpQh5
ಇದನ್ನೂ ಓದಿ— Awanish Sharan (@AwanishSharan) September 23, 2022
‘ಗ್ರಾಮಭಾರತದ ಅನ್ವೇಷಣೆ’ ಅದ್ಭುತ! ಎಂದು ಈ ವಿಡಿಯೋಗೆ ಶೀರ್ಷಿಕೆ ಕೊಟ್ಟು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ ನಿಜ. ಆದರೆ ನೆಟ್ಟಿಗರು, ಈ ತಂತ್ರದ ಮೂಲಕ ಪ್ರಾಣಿಹಿಂಸೆಯನ್ನು ಪ್ರೋತ್ಸಾಹಿಸುವಂತಿದೆ ಎಂದು ಕಿಡಿಕಾರಿದ್ದಾರೆ. ವಿದ್ಯುತ್ ಬದಲಾಗಿ ಪ್ರಾಣಿಗಳನ್ನು ಬಳಸಿಕೊಂಡಿರುವುದರ ಬಗ್ಗೆ ತೀವ್ರವಾಗಿ ಟೀಕಿಸಿದ್ದಾರೆ. ಈ ವಿಡಿಯೋ ಅನ್ನು 52,000 ಜನರು ವೀಕ್ಷಿಸಿದ್ದಾರೆ.
ಹಿಂಡಿನಲ್ಲಿ ಸಾಗುವುದು ನಮಗೆ ಅಭ್ಯಾಸವಾಗಿದೆ. ಆದರೆ, ಆಗಾಗ ನೆಟ್ಟಿಗರು ಹೀಗೆ ಪರಾಮರ್ಶೆ ಮಾಡುವುದು ಒಳ್ಳೆಯದು. ಮಾನವೀಯತೆ ಇನ್ನೂ ಬದುಕಿದೆ ಎನ್ನುವುದನ್ನು ಇದು ತೋರಿಸುತ್ತದೆ.
ಮತ್ತಷ್ಟು ವೈರಲ್ ವಿಡಿಯೋಗಾಗಲಿ ಕ್ಲಿಕ್ ಮಾಡಿ
Published On - 11:14 am, Sat, 24 September 22