ಗೋಣಿಚೀಲದ ಪಲಾಝೋಗೆ ರೂ. 60,000! ಹೊಗ್ಗೋ ಮಾರಾಯಾ ನಾ ಫ್ರೀ ಕೊಡ್ತೀನಿ ಬಾ

| Updated By: ಶ್ರೀದೇವಿ ಕಳಸದ

Updated on: Feb 18, 2023 | 2:33 PM

Palazzo : ಅಕಸ್ಮಾತ್ ಜಾರಿ ನೆಲಕ್ಕೆ ಬಿದ್ದರೆ ಜನ ಇದಕ್ಕೆ ಕಾಲೊರೆಸುತ್ತ ದಾಟಿ ಹೋಗುವುದು ಗ್ಯಾರಂಟಿ ಎಂದು ಒಬ್ಬರು. ಇದಕ್ಕೆ ರೂ. 60 ಇರಬೇಕು ನೋಡಿ ಎಂದು ಇನ್ನೊಬ್ಬರು. ಈ ವಿಡಿಯೋ ನೋಡಿದ ಮೇಲೆ ನೀವೇನಂತೀರಿ?

ಗೋಣಿಚೀಲದ ಪಲಾಝೋಗೆ ರೂ. 60,000! ಹೊಗ್ಗೋ ಮಾರಾಯಾ ನಾ ಫ್ರೀ ಕೊಡ್ತೀನಿ ಬಾ
ಸೆಣಬಿನಿಂದ ಮಾಡಿದ ಪಲಾಝೋ. ಇದರ ಬೆಲೆ ಕೇವಲ ರೂ. 60,000
Follow us on

Viral Video : ಗೋಧಿ, ಅಕ್ಕಿ, ಜೋಳ, ರಾಗಿ ಹೀಗೆ ಮುಂತಾದ ಕಾಳುಕಡಿ ಹಾಕಿ ಸಾಗಿಸಲು ಮತ್ತು ಸಂಗ್ರಹಿಸಲು ಗೋಣಿಚೀಲವನ್ನು ಬಳಸುತ್ತಾರೆ. ಅಲ್ಲದೆ ಹಳ್ಳಿಗಳ ಕಡೆ ಕಾಲೊರೆಸಲು ಈ ಗೋಣಿತಾಟನ್ನು ಉಪಯೋಗಿಸುತ್ತಾರೆ. ಈ ಗೋಣಿಯನ್ನು ಸೆಣಬಿನಿಂದ ತಯಾರಿಸುತ್ತಾರೆ ಇಂತೆಲ್ಲ ಪ್ರಾಥಮಿಕ ತಿಳಿವಳಿಕೆಗಳು ನಿಮಗೆ ಗೊತ್ತಿವೆ. ಆದರೆ  ಆದರೆ ಈ ಗೋಣಿಚೀಲ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತ ಇಡೀ ವಿಶ್ವವನ್ನು ಸುತ್ತುತ್ತಿದೆ ಎಂಬ ವಿಷಯ ಗೊತ್ತೆ? ಗೊತ್ತಾದರೆ, ಈ ಕಾಲೊರೆಸುವ ಚೀಲಕ್ಕೆ ಅಲ್ಲಲ್ಲ  ಪಲಾಝೋಗೆ ರೂ. 60,000!

ಅಯ್ಯೋ ಶಿವನೇ, ನಮ್ಮ ಹಳ್ಳಿ ಮನೆಗೆ ಬನ್ನಿ, ಒಂದಲ್ಲ ಹತ್ತು ಚೀಲಗಳನ್ನು ಫ್ರೀಯಾಗಿ ಕೊಡ್ತೀನಿ. ಪಲಾಝೋ ಅಷ್ಟೇ ಯಾಕೆ? ಸೀರೆ ರವಿಕೇನೂ ಮಾಡ್ಕೋಬಹುದು ಅಂತೀರಿ ಅಲ್ಲವೆ? ನೆಟ್ಟಿಗರು ಈ ವಿಡಿಯೋ ನೋಡಿ ಅಚ್ಚರಿಪಟ್ಟಿದ್ದಾರೆ. ಬಿದ್ದು ಬಿದ್ದು ನಗುತ್ತಿದ್ದಾರೆ. ಆ ಪಲಾಝೋ ಮೇಲೆ ಪ್ರಿಂಟ್ ಮಾಡಿರುವ ಅಕ್ಷರಗಳನ್ನು ಓದುವಲ್ಲಿ ಉತ್ಸಾಹ ತೋರುತ್ತಿದ್ಧಾರೆ.

ಇದನ್ನೂ ಓದಿ : 67 ವರ್ಷದ ಅಜ್ಜಿ ಸೀರೆಯುಟ್ಟು ರೋಪ್​ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್

ಇದೇನಾದರೂ ಜಾರಿ ನೆಲಕ್ಕೆ ಬಿದ್ದರೆ ಜನ ಇದಕ್ಕೆ ಕಾಲೊರೆಸುತ್ತ ದಾಟಿ ಹೋಗುತ್ತಾರೆ ಎಂದಿದ್ದಾರೆ ಒಬ್ಬರು. ಇದಕ್ಕೆ ರೂ. 60 ಇರಬೇಕು ನೋಡಿ ಎಂದಿದ್ದಾರೆ ಮತ್ತೊಬ್ಬರು. ಇದು ನಿಜವಾದ ರೀಸೈಕ್ಲಿಂಗ್ ಎಂದು ಮಗದೊಬ್ಬರು ಹೇಳುತ್ತಿದ್ದಾರೆ. ಈ ಅಂಗಡಿಯ ಓನರ್ ಉರ್ಫೀ ಜಾವೇದ್? ಎಂದು ಕೇಳಿದ್ದಾರೆ ಇನ್ನೂ ಒಬ್ಬರು. ಉರ್ಫೀ ಕಣ್ಣಿನಿಂದ ಇದು ದೂರವಿರಲಿ ಎಂದಿದ್ದಾರೆ ಮತ್ತೊಬ್ಬರು. ಇದು ನನ್ನ ಹೊಸ ಬಿಝಿನೆಸ್​. ಸಪೋರ್ಟ್​ ಮಾಡಿ ಎಂದು ತಮಗೆ ತಾವೇ ಒಬ್ಬರು ಕಾಲೆಳೆದುಕೊಂಡಿದ್ದಾರೆ ಒಬ್ಬರು.

ಇದನ್ನೂ ಓದಿ : ‘ಎಂಬಿಎ ಚಾಯ್​ವಾಲಾ’ ರೂ. 90 ಲಕ್ಷದ ಮರ್ಸಿಡೀಝ್​ ಕಾರು ಖರೀದಿಸಿದ ವಿಡಿಯೋ ವೈರಲ್

ಈ ತನಕ ಈ ವಿಡಿಯೋ ಅನ್ನು ಸುಮಾರು 8 ಮಿಲಿಯನ್ ಜನರು ನೋಡಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ನೋಡಿ ಮತ್ತೆ ನೀವೇನಾದೂ ಹೊಸ ಉದ್ಯಮ ಶುರು ಮಾಡಬೇಕೆಂದುಕೊಂಡಿದ್ದರೆ ಈ ಐಡಿಯಾ ಸೂಕ್ತ ಅನ್ನಿಸಬಹುದೇನೋ, ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ