Viral Video : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಹಂಸಗಳ ಪರೇಡ್

Viral video : ಮಹಿಳೆಯೊಬ್ಬರು ಶಿಳ್ಳೆ ಹೊಡೆಯುತ್ತಾ ಹಂಸ ಮೆರವಣಿಗೆಯನ್ನು ಮುನ್ನಡೆಸುತ್ತಿರುತ್ತಾರೆ. ಮತ್ತು ಅದೇ ಸಮಯದಲ್ಲಿ ಪಕ್ಷಿ ದಳದ ಹಿಂದೆ ಮಹಿಳೆಯೊಬ್ಬರು ಡ್ರಮ್ ಬಾರಿಸುವುದನ್ನು ಕಾಣಬಹುದು.

Viral Video : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಹಂಸಗಳ ಪರೇಡ್
ಹಂಸಗಳ ಪರೇಡ್
Edited By:

Updated on: Apr 07, 2022 | 4:54 PM

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಅದ್ಭುತ ವಿಡಿಯೋಗಳು ವೈರಲ್ ಆಗುತ್ತದೆ. ವೈರಲ್ ವಿಡಿಯೋ ಎನ್ನುವುದು ಒಂದು ವಿಶಿಷ್ಟವಾದ ವಿಷಯವನ್ನು ಹೊಂದಬೇಕು, ಜನರಿಗೆ ಹತ್ತಿರವಾಗುವ ಕೆಲವೊಂದು ವಿಡಿಯೋಗಳು ಹೆಚ್ಚು ಸದ್ದು ಮಾಡುವುದು, ಏಕೆಂದರೆ ಅದರಿಂದ ಹೆಚ್ಚು ಜನರ ಅಚ್ಚರಿಗೆ ಕಾರಣವಾಗುವುದು, ವೈರಲ್ ವಿಡಿಯೋದಲ್ಲಿ ಏನು ಇರಬೇಕು ಮತ್ತು ಅದು ಯಾಕೆ ವೈರಲ್ ಆಗುತ್ತದೆ ಎಂಬ ವಿಚಾರಗಳು ಹೊಂದಿರಬೇಕು.  ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿದ್ದು,  ಈ ವೀಡಿಯೋ ಹೃದಯ ಸ್ಪರ್ಶಿಯಾಗಿದ್ದು, ಈ ವೀಡಿಯೋ ಅನೇಕ ಜನರ ಮನ ಗೆದ್ದಿದೆ. ಈ ವೀಡಿಯೋ ನೋಡುತ್ತಿರುವವರು ಮುದ್ದಾದ ವಿಡಿಯೋ ಎನ್ನುತ್ತಿದ್ದಾರೆ. ಬರ್ಡ್ ಬ್ರಿಗೇಡ್‌ನ ಶಿಸ್ತು ಮತ್ತು ಅದ್ಭುತ ಮೆರವಣಿಗೆಯನ್ನು ವಿಡಿಯೋ ಸಖತ್ ವೈರಲ್ ಆಗುತ್ತಿದೆ.  ಈ ವೈರಲ್ ವಿಡಿಯೋ ಡೆನ್ಮಾರ್ಕ್ ನಿಂದ ಹೇಳಲಾಗುತ್ತಿದೆ.

ಮಹಿಳೆಯೊಬ್ಬರು ಶಿಳ್ಳೆ ಹೊಡೆಯುತ್ತಾ ಹಂಸ ಮೆರವಣಿಗೆಯನ್ನು ಮುನ್ನಡೆಸುತ್ತಿರುತ್ತಾರೆ. ಮತ್ತು ಅದೇ ಸಮಯದಲ್ಲಿ ಪಕ್ಷಿ ದಳದ ಹಿಂದೆ ಮಹಿಳೆಯೊಬ್ಬರು ಡ್ರಮ್ ಬಾರಿಸುವುದನ್ನು ಕಾಣಬಹುದು. ಈ ವೀಡಿಯೋದಲ್ಲಿ ಈ ಪಕ್ಷಿ ದಳ ಸಂಪೂರ್ಣ ಶಿಸ್ತು ಮತ್ತು ಸ್ಥಿರ ಹೆಜ್ಜೆಗಳೊಂದಿಗೆ ಅದ್ಭುತ ಪರೇಡ್ ಮಾಡುವ ಮೂಲಕ ಎಲ್ಲರ ಮನ ಗೆಲ್ಲುತ್ತಿದೆ. ಈ ಸಮಯದಲ್ಲಿ ರಸ್ತೆಯಲ್ಲಿರುವ ಪ್ರತಿಯೊಬ್ಬರೂ ಈ ಸುಂದರ ದೃಶ್ಯವನ್ನು ನೋಡಲು ಕುತೂಹಲದಿಂದ ನೋಡುತ್ತಿರುತ್ತಾರೆ.

 

ಈ ವೀಡಿಯೊದಲ್ಲಿ, ಹಂಸಗಳು ಡ್ರಮ್‌ನ ಬಡಿತದಲ್ಲಿ ಪರಸ್ಪರ ಹೆಜ್ಜೆ ಹಾಕುತ್ತಿವೆ. ನಾವು ಇಲ್ಲಿಯವರೆಗೆ ಅನೇಕ ಮೆರವಣಿಗೆಗಳನ್ನು ನೋಡಿರಬೇಕು, ಆದರೆ ಪಕ್ಷಿ ದಳದ ಈ ಮೆರವಣಿಗೆಯು ತನ್ನದೇ ಆದ ವಿಶೇಷವಾಗಿದೆ. ಈ ಮುದ್ದಾದ ವೀಡಿಯೊಗಳನ್ನು ಪೋಸ್ಟ್ ಮಾಡಿದ ‘Buitengebieden’ ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಈ ಅದ್ಭುತ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಹಂಚಿಕೊಳ್ಳುವಾಗ, ‘ಡೆನ್ಮಾರ್ಕ್‌ನಲ್ಲಿ ಮೀನ್‌ವಿಲ್ಲೆ’ ಎಂಬ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಆದರೆ, ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಒಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ.