Viral Video: ತಾನು ಇಳಿಯಬೇಕಿದ್ದ ನಿಲ್ದಾಣ ದಾಟಿದ ಮೇಲೆ ಎಚ್ಚರಗೊಂಡ ಪ್ರಯಾಣಿಕ, ಮುಂದೆ ಆಗಿದ್ದೇನು?
ಹೆಚ್ಚಿನ ಮಂದಿ ರೈಲಿನಲ್ಲಿ ಪ್ರಯಾಣಿಸುವಾಗ ಅಲಾರಂ ಇಟ್ಟುಕೊಳ್ಳುವುದು ಪದೇ ಪದೇ ಗೂಗಲ್ ಮ್ಯಾಪ್ನಲ್ಲಿ ನಾವೆಲ್ಲಿದ್ದೇವೆ ಎಂದು ಪರೀಕ್ಷಿಸುವುದು ಹೀಗೆ ಕೆಲವರು ರಾತ್ರಿಯಿಂದ ಬೆಳಗೆ ನಿದ್ದೆ ಮಾಡದವರೂ ಇದ್ದಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿಗೆ ಎಚ್ಚರವಾಗುವಷ್ಟರಲ್ಲಿ ಅವರು ಇಳಿಯು ನಿಲ್ದಾಣದಿಂದ ರೈಲು ಹೊರಟು ಬಿಟ್ಟಿತ್ತು. ಗಾಬರಿಗೊಂಡು ಬಾಗಿಲು ಕಡೆಗೆ ವೇಗವಾಗಿ ಓಡುತ್ತಾರೆ. ಹೊರಗೆ ನೋಡಿದಾಗ, ರೈಲು ಎಷ್ಟು ವೇಗವಾಗಿ ಚಲಿಸುತ್ತಿದೆಯೆಂದರೆ ಜಿಗಿಯುವುದು ಮಾರಕವಾಗಬಹುದು ಎಂದು ಅವರಿಗೆ ಅರಿವಾಗುತ್ತದೆ.

ಹೆಚ್ಚಿನ ಮಂದಿ ರೈಲಿನಲ್ಲಿ ಪ್ರಯಾಣಿಸುವಾಗ ಅಲಾರಂ ಇಟ್ಟುಕೊಳ್ಳುವುದು ಪದೇ ಪದೇ ಗೂಗಲ್ ಮ್ಯಾಪ್ನಲ್ಲಿ ನಾವೆಲ್ಲಿದ್ದೇವೆ ಎಂದು ಪರೀಕ್ಷಿಸುವುದು ಹೀಗೆ ಕೆಲವರು ರಾತ್ರಿಯಿಂದ ಬೆಳಗೆ ನಿದ್ದೆ ಮಾಡದವರೂ ಇದ್ದಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿಗೆ ಎಚ್ಚರವಾಗುವಷ್ಟರಲ್ಲಿ ಅವರು ಇಳಿಯು ನಿಲ್ದಾಣದಿಂದ ರೈಲು(Train) ಹೊರಟು ಬಿಟ್ಟಿತ್ತು. ಗಾಬರಿಗೊಂಡು ಬಾಗಿಲು ಕಡೆಗೆ ವೇಗವಾಗಿ ಓಡುತ್ತಾರೆ. ಹೊರಗೆ ನೋಡಿದಾಗ, ರೈಲು ಎಷ್ಟು ವೇಗವಾಗಿ ಚಲಿಸುತ್ತಿದೆಯೆಂದರೆ ಜಿಗಿಯುವುದು ಮಾರಕವಾಗಬಹುದು ಎಂದು ಅವರಿಗೆ ಅರಿವಾಗುತ್ತದೆ.
ಏನು ಮಾಡುವುದು ಎಂದು ಒಂದು ಕ್ಷಣ ಯೋಚನೆ ಮಾಡುತ್ತಾರೆ. ಬಳಿಕ ರೈಲಿನ ಟಿಟಿಇಯಿಂದ ಸಹಾಯ ಕೋರುತ್ತಾರೆ. ಚೈನ್ ಎಳೆಯುವ ಮೂಲಕ ರೈಲು ನಿಲ್ಲಿಸುವಂತೆ ವಿನಂತಿಸಿಕೊಳ್ಳುತ್ತಾರೆ. ಆದರೆ ಯಾವುದೇ ತುರ್ತು ಸಂದರ್ಭವಿಲ್ಲದ ಕಾರಣ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ರೈಲು ನಿಲ್ಲಿಸಲು ತನ್ನ ಬಳಿ ಬಟನ್ ಅಥವಾ ಬ್ರೇಕ್ ಇಲ್ಲ ಎಂದು ಟಿಟಿಇ ಹೇಳಿದ್ದಾರೆ.
ಪ್ರಯಾಣಿಕ ಪದೇ ಪದೇ ಬೇಡಿಕೊಂಡರೂ, ಟಿಟಿಇ ತನ್ನ ನಿರ್ಧಾರದಲ್ಲಿ ದೃಢವಾಗಿದ್ದರು. ಇಡೀ ಘಟನೆಯನ್ನು ಚಿತ್ರೀಕರಿಸುತ್ತಿರುವ ಯುವತಿಯೊಬ್ಬಳು ಪ್ರಯಾಣಿಕನನ್ನು ಪ್ರೋತ್ಸಾಹಿಸುತ್ತಾಳೆ. ರೈಲು ನಿಲ್ಲಲು ಸಾಧ್ಯವಾಗದ ಕಾರಣ, ಚಲಿಸುವ ರೈಲಿನಿಂದ ಇಳಿಯಲು ಪ್ರಯತ್ನಿಸಬೇಕು ಎಂದು ಹೇಳಿದ್ದಾಳೆ.ಸಲಹೆ ಸರಳವಾಗಿ ತೋರಿದರೂ ಅಷ್ಟೇ ಅಪಾಯಕಾರಿಯಾಗಿತ್ತು.ಅದು ಅಸುರಕ್ಷಿತವಾದರೂ ಆ ಸಮಯದಲ್ಲಿ ಪ್ರಯಾಣಿಕನಿಗೆ ಬೇರೆ ದಾರಿ ಇರಲಿಲ್ಲ.
ವಿಡಿಯೋ
View this post on Instagram
ಎಚ್ಚರಿಕೆಯಿಂದ ಇಳಿಯಲು ಪ್ರಯತ್ನಿಸುತ್ತಾರೆ, ರೈಲಿನಿಂದ ಇಳಿದ ನಂತರ, ವೀಡಿಯೊ ಚಿತ್ರೀಕರಿಸುತ್ತಿರುವ ಹುಡುಗಿ ಅವನಿಗೆ ತನ್ನ ಸಾಮಾನುಗಳನ್ನು ನೀಡಿ ಶುಭ ಹಾರೈಸುತ್ತಾ ವಿದಾಯ ಹೇಳುತ್ತಾಳೆ. ಪ್ರಯಾಣಿಕನ ಸುರಕ್ಷಿತವಾಗಿದ್ದನೆಂದು ಘಟನೆಯನ್ನು ವೀಕ್ಷಿಸುತ್ತಿದ್ದವರಿಗೆ ಸಮಾಧಾನವಾಗಿದ್ದರೂ, ಸಣ್ಣ ಅಜಾಗರೂಕತೆಯು ಹೇಗೆ ದೊಡ್ಡ ಬೆದರಿಕೆಯಾಗಬಹುದಿತ್ತು ಎಂಬುದು ಕೂಡ ಅಷ್ಟೇ ಸತ್ಯ.
ಮತ್ತಷ್ಟು ಓದಿ: ಅಪಹರಣಕಾರರಿಗೆ ಸಿಗುವ ಮುನ್ನವೇ ಸಮಯಪ್ರಜ್ಞೆಯಿಂದ ಮಗಳ ಕಾಪಾಡಿದ ತಾಯಿ
ಪ್ರಯಾಣದ ಸಮಯದಲ್ಲಿ ಜಾಗರೂಕರಾಗಿರುವುದು, ನಿಲ್ದಾಣವನ್ನು ತಲುಪುವ ಮೊದಲು ಅಲಾರಾಂ ಇಟ್ಟುಕೊಳ್ಳುವುದು ಮತ್ತು ಅಗತ್ಯವಿದ್ದರೆ ಸಹ ಪ್ರಯಾಣಿಕರು ಅಥವಾ ಸಿಬ್ಬಂದಿಯಿಂದ ಸಹಾಯ ಪಡೆಯುವುದು ಉತ್ತಮ.
ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
