Viral Video: ಜೀವನದಲ್ಲಿ ತಾಳ್ಮೆ ಇರಬೇಕು ಎಂಬುದನ್ನು ಈ ಪುಟ್ಟ ಹುಡುಗನಿಂದ ಕಲಿಯಬೇಕು

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 24, 2022 | 10:43 AM

ನಮ್ಮ ಜೀವನದಲ್ಲಿ ಪ್ರತಿಯೊಂದು ಕ್ಷಣದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳಬಾರದು, ತಾಳ್ಮೆಯಿಂದ ಎಲ್ಲವನ್ನು ಕಾಯಬೇಕು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಹೌದು ನಮ್ಮ ಜೀವನದಲ್ಲಿ ತಾಳ್ಮೆಯನ್ನು ಕಳೆದುಕೊಂಡರೆ ಖಂಡಿತ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ.

Viral Video: ಜೀವನದಲ್ಲಿ ತಾಳ್ಮೆ ಇರಬೇಕು ಎಂಬುದನ್ನು ಈ ಪುಟ್ಟ ಹುಡುಗನಿಂದ ಕಲಿಯಬೇಕು
Patience in life should be learned from this little boy kannada
Follow us on

ನಮ್ಮ ಜೀವನದಲ್ಲಿ ಪ್ರತಿಯೊಂದು ಕ್ಷಣದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳಬಾರದು, ತಾಳ್ಮೆಯಿಂದ ಎಲ್ಲವನ್ನು ಕಾಯಬೇಕು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಹೌದು ನಮ್ಮ ಜೀವನದಲ್ಲಿ ತಾಳ್ಮೆಯನ್ನು ಕಳೆದುಕೊಂಡರೆ ಖಂಡಿತ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ. ಈ ಬಗ್ಗೆ ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ನಮ್ಮ ಜೀವನಕ್ಕೆ ತಾಳ್ಮೆ ಒಂದು ಒಳ್ಳೆಯ ಪಾಠವನ್ನು ಕಲಿಸಬಹುದು.

ಇದನ್ನು ಓದಿ: Viral Video: ನೀವು ಈ ವಿಡಿಯೋವನ್ನು ನೋಡಿದ್ರೆ ಒಂದು ಬಾರಿ ಭಾವುಕರಾಗಿ ನಿಮ್ಮ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಿರ

ಒಬ್ಬ ಪುಟ್ಟು ಹುಡುಗ ಬೌಲಿಂಗ್ ಅಲ್ಲೆಯಲ್ಲಿ ಒಂಬತ್ತು ಪಿನ್‌ಗಳನ್ನು ಹೊಡೆಯುವ ವಿಡಿಯೋವೊಂದನ್ನು ತೋರಿಸಿದ್ದಾರೆ. ಈ ವೀಡಿಯೊದಲ್ಲಿ ಬೌಲಿಂಗ್ ಅಲ್ಲೆಯಲ್ಲಿ ಕೊನೆಯಲ್ಲಿ ಮೂರು ಪಿನ್‌ಗಳು ನಿಂತಿರುವುದನ್ನು ಕಾಣಬಹುದು, ಅದು ಬೀಳುವುದು ಅಸಾಧ್ಯ ಎಂದುಕೊಂಡಾಗ ಈ ಹುಡುಗನು ಅತ್ಯಂತ ನಿಖರವಾಗಿ ಬೌಲ್ ಮಾಡುತ್ತಾನೆ, ಆದರೆ ಅದರಲ್ಲಿ ಉಳಿದುಕೊಂಡ ಒಂದು ಬೌಲ್ ಹೊಡೆಯುವವರೆಗೆ ಕಾಯುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ, ಸರಿಯಾದ ತಂತ್ರದಿಂದಾಗಿ, ಎಲ್ಲಾ ಪಿನ್‌ಗಳು ಒಟ್ಟಿಗೆ ಬೀಳುತ್ತವೆ, ಆ ಹುಡುಗ ಈ ಆಟದಲ್ಲಿ ಜಯಶಾಲಿಯಾಗುತ್ತಾನೆ.

ಅಸಾಧ್ಯವೂ ಸಾಧ್ಯ. ನಿಮ್ಮ ಸಾಮರ್ಥ್ಯವನ್ನು ನಂಬಿರಿ ಮತ್ತು ಪ್ರತಿ ಬಾರಿಯೂ ನಿಮ್ಮ ತಾಳ್ಮೆಯಿಂದ ಎಲ್ಲವನ್ನು ಪ್ರಯತ್ನಿಸಿ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಕ್ಲಿಪ್ 15,800 ವೀಕ್ಷಣೆಗಳು ಮತ್ತು ಪ್ರತಿಕ್ರಿಯೆಗಳನ್ನು ಪಡೆದಿದೆ. ಅನೇಕ ಈ ವಿಡಿಯೋವನ್ನು ನೋಡಿ ಇದು ತುಂಬಾ ಸ್ಪೂರ್ತಿದಾಯಕ ವಿಡಿಯೋ ಎಂದು ಹೇಳಿದ್ದಾರೆ. ತಾಳ್ಮೆಯು ಯಶಸ್ಸಿನ ಹಾದಿ ಎಂದು ಕೆಲವರು ಬರೆದರೆ, ಇನ್ನೂ ಕೆಲವರು ಯಾವುದೇ ಗುರಿಯನ್ನು ಸಾಧಿಸಲು ಸರಿಯಾದ ತಂತ್ರ ಮುಖ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

Published On - 10:43 am, Mon, 24 October 22