Viral Video: ನೀವು ಈ ವಿಡಿಯೋವನ್ನು ನೋಡಿದ್ರೆ ಒಂದು ಬಾರಿ ಭಾವುಕರಾಗಿ ನಿಮ್ಮ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತೀರ
ವಿಮಾನ ಸಿಬ್ಬಂದಿಯೊಬ್ಬರು ತನ್ನ ನೆಚ್ಚಿನ ಶಿಕ್ಷಕಿಯನ್ನು ಭೇಟಿಯಾದ ಭಾವನಾತ್ಮಕ ಸನ್ನಿವೇಶ ವಿಮಾನವೊಂದರಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ವಿಮಾನ ಸಿಬ್ಬಂದಿಯೊಬ್ಬರು ತನ್ನ ನೆಚ್ಚಿನ ಶಿಕ್ಷಕಿಯನ್ನು ಭೇಟಿಯಾದ ಭಾವನಾತ್ಮಕ ಸನ್ನಿವೇಶ ವಿಮಾನವೊಂದರಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವಿಮಾನ ಸಿಬ್ಬಂದಿ 30 ವರ್ಷಗಳ ನಂತರ ತನ್ನ ನೆಚ್ಚಿನ ಶಿಕ್ಷಕರನ್ನು ಭೇಟಿಯಾದ ವೀಡಿಯೊ Instagram ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಈ ಸಿಬ್ಬಂದಿ ಭಾವನಾತ್ಮವಾಗಿ ತನ್ನ ಶಿಕ್ಷಕಿಯನ್ನು ಅಪ್ಪಿಕೊಂಡಿರುವುದನ್ನು ಕಾಣಬಹುದು. ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುವ ಈ ಮಹಿಳೆ, ವಿಮಾನದಲ್ಲಿ ತನ್ನ ಶಿಕ್ಷಕರ ಬಗ್ಗೆ ತಿಳಿಸಿದ ನಂತರ ತನ್ನ ಶಿಕ್ಷಕರಿಗೆ ಅಪ್ಪುಗೆಯ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ ಕಿಯೋನಾ ಥ್ರಾಶರ್ ಎಂಬ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾ ಪುಟದ ಹಂಚಿಕೊಂಡಿರುವ ವಿಡಿಯೋ ನಂತರ ಮರು ಪೋಸ್ಟ್ ಗುಡ್‌ನ್ಯೂಸ್ ಮೂವ್‌ಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಫ್ಲೈಟ್ ಅಟೆಂಡೆಂಟ್ ಲೋರಿ ಅವರು ಅಂತರರಾಷ್ಟ್ರೀಯ ಶಿಕ್ಷಕರ ದಿನದಂದು ಮಿಸ್ ಓ’ಕಾನ್ನೆಲ್ ಅವರ ನೆಚ್ಚಿನ ಶಿಕ್ಷಕಿಯ ಬಳಿಗೆ ಓಡಿ ಬಂದು ಶುಭಾಶಯಗಳನ್ನು ತಿಳಿಸಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಚಪ್ಪಾಳೆ ತಟ್ಟುವ ಮೂಲಕ ಈ ಸಂಭ್ರಮಕ್ಕೆ ಸಾಕ್ಷಿಯಾದ್ರು. ಈ ದಿನ ನನ್ನ ಜೀವನದ ಅರ್ಥಪೂರ್ಣ ದಿನ, 30 ವರ್ಷಗಳ ನಂತರ ನಿಮ್ಮನ್ನು ಭೇಟಿ ಮಾಡಿರುವೇ ನನ್ನ ಜೀವನದಲ್ಲಿ ಈ ದಿನವನ್ನು ಯಾವತ್ತೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
View this post on Instagram
ಈ ವಿಡಿಯೋವನ್ನು ಸುಮಾರು 12 ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ. ಅನೇಕ ಈ ವಿಡಿಯೋ ಬಗ್ಗೆ ಕಮೆಂಟ್ ಮಾಡಿದ್ದಾರೆ, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇಲ್ಲಿಯವರೆಗೆ, ಇದು 1.5 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಇದನ್ನು ಓದಿ: Viral Video: ಈತ ನನ್ನವನು, ಅಲ್ಲಲ್ಲ ನನ್ನವನು; ಒಬ್ಬನಿಗಾಗಿ ಇಬ್ಬರು ಯುವತಿಯರ ಹೊಡೆದಾಟ
ಶಿಕ್ಷಕರು ಯಾವತ್ತೂ ನಮ್ಮ ಜೀವನದಲ್ಲಿ ಮರೆಯದ ವಿಚಾರಗಳು, ನಿಮ್ಮ ವೃತ್ತಿ ಜೀವನ ತುಂಬಾ ಕಷ್ಟಕರವಾಗಿರುತ್ತದೆ. ಒಂದು ರೀತಿಯಲ್ಲಿ ನೀವು ತ್ವರಿತವಾಗಿ ಕೆಲಸ ಮಾಡಬೇಕು ಎಂದು ಒಬ್ಬ ಬಳಕೆದಾರರೂ ಕಮೆಂಟ್ ಮಾಡಿದ್ದಾರೆ. ಈ ದೃಶ್ಯವನ್ನು ನೋಡಿ ಅಕ್ಷರಶ ಅಳುವುದು ಖಂಡಿತ. ನಾನು ಕೂಡ ಶಿಕ್ಷಣತಜ್ಞ. ನನ್ನ ಹಳೆಯ ವಿದ್ಯಾರ್ಥಿಗಳು ಕೂಡ ಹೀಗೆ ಅನೇಕರು ಬಂದು ನನ್ನ ಭಾವನಾತ್ಮಕವಾಗಿ ಅಪ್ಪಿಕೊಂಡಿದ್ದಾರೆ ಎಂದು ಹಂಚಿಕೊಂಡಿದ್ದಾರೆ. 10 ವರ್ಷಗಳ ನಂತರ ನನ್ನ ಪ್ರೌಢಶಾಲಾ ಕಲಾ ಶಿಕ್ಷಕರೊಂದಿಗೆ ಸಂಪರ್ಕ ಹೊಂದಿದ್ದೇನೆ ಈ ವಿಡಿಯೋ ನೋಡಿದ ನಂತರ ಅವರು ಮತ್ತೆ ಮತ್ತೆ ನೆನಪಾಗುತ್ತಾರೆ ಎಂದು ಮತ್ತೊಬ್ಬ ಬಳಕೆದಾರ ಬರೆದುಕೊಂಡಿದ್ದಾರೆ.
Published On - 10:06 am, Mon, 24 October 22