Viral Video: ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಸ್ಥಂಭ ಹತ್ತಿ ಬಾವುಟ ಹಾರಿಸಿದ ದೇಶಪ್ರೇಮಿ ಕೋತಿ!

Trending Video: ಸ್ವಾತಂತ್ರ್ಯ ದಿನಾಚರಣೆಯ ದಿನ ಧ್ವಜಸ್ಥಂಭದ ಮೇಲೆ ಬಾವುಟ ಕಟ್ಟಿ, ಅದರಲ್ಲಿ ಹೂವು ತುಂಬಿಡಲಾಗಿತ್ತು. ಈ ವೇಳೆ ಧ್ವಜಸ್ಥಂಭವನ್ನು ಏರಿದ ಕೋತಿ ಆ ಧ್ವಜಸ್ಥಂಭದ ಹಗ್ಗವನ್ನು ಎಳೆದು ಧ್ವಜಾರೋಹಣ ಮಾಡಿದೆ.

Viral Video: ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಸ್ಥಂಭ ಹತ್ತಿ ಬಾವುಟ ಹಾರಿಸಿದ ದೇಶಪ್ರೇಮಿ ಕೋತಿ!
ಧ್ವಜಾರೋಹಣ ಮಾಡಿದ ಕೋತಿ
Edited By:

Updated on: Aug 21, 2021 | 3:12 PM

ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡುವುದು ಸಾಮಾನ್ಯ. ಮಂಗನಿಂದಲೇ ಮಾನವ ಎಂಬ ಮಾತನ್ನು ಸಾಬೀತುಪಡಿಸುವಂತೆ ಮನುಷ್ಯರಂತೆ ಮಂಗ ಕೂಡ ಧ್ವಜಾರೋಹಣ ಮಾಡಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಬುದ್ಧಿವಂತ ಪ್ರಾಣಿಯಾದ ಕೋತಿ ಬಾವುಟ ಹಾರಿಸಿದ ಕೂಡಲೇ ಕೆಳಗಿದ್ದ ಜನರು ಚಪ್ಪಾಳೆ ತಟ್ಟಿ, ಕೇಕೆ ಹಾಕಿ ಸಂಭ್ರಮಿಸಿದ್ದಾರೆ.

ಈ ದೇಶಭಕ್ತ ಕೋತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನ ಧ್ವಜಸ್ಥಂಭದ ಮೇಲೆ ಬಾವುಟ ಕಟ್ಟಿ, ಅದರಲ್ಲಿ ಹೂವು ತುಂಬಿಡಲಾಗಿತ್ತು. ಈ ವೇಳೆ ಧ್ವಜಸ್ಥಂಭವನ್ನು ಏರಿದ ಕೋತಿ ಆ ಧ್ವಜಸ್ಥಂಭದ ಹಗ್ಗವನ್ನು ಎಳೆದು ಧ್ವಜಾರೋಹಣ ಮಾಡಿದೆ. ಬಾವುಟ ಹಾರಿಸಿದ ಕೋತಿಯ ಚೇಷ್ಟೆಯನ್ನು ಕಂಡು ಅಲ್ಲಿ ನೆರೆದಿದ್ದ ಜನರು ಚಪ್ಪಾಳೆ ತಟ್ಟಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಹಳೆಯ ವಿಡಿಯೋವಾಗಿದ್ದು, ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ನಡೆದಿದ್ದಾಗಿದೆ. ಶಾಲೆಯ ಹೆಂಚನ್ನು ಹತ್ತಿ ಕುಳಿತ ಎರಡು ಮಂಗಗಳು ಧ್ವಜಾರೋಹಣಕ್ಕೆಂದು ಕಟ್ಟಲಾಗಿದ್ದ ಧ್ವಜಸ್ಥಂಭವನ್ನು ಹತ್ತಿ ಬಾವುಟ ಹಾರಿಸಿವೆ. ಈ ವೇಳೆ ಬಾವುಟದೊಳಗೆ ಕಟ್ಟಲಾಗಿದ್ದ ಹೂವೆಲ್ಲ ಕೆಳಗೆ ಬಿದ್ದಿವೆ. ಇದನ್ನು ಕಂಡ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಗುತ್ತಾ, ಚಪ್ಪಾಳೆ ತಟ್ಟಿದ್ದಾರೆ.

ಇದನ್ನೂ ಓದಿ: Viral Video: ಒಂದು ಜಿಂಕೆಗಾಗಿ 6 ಸಿಂಹಗಳ ಕಿತ್ತಾಟ; ಭಯಾನಕ ವಿಡಿಯೋ ವೈರಲ್

Viral Video: ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ ವಿಡಿಯೋ ವೈರಲ್; ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿ ಎಂದ ನೆಟ್ಟಿಗರು

(Viral Video: Patriotic Monkey Hoists Tricolour on Independence Day Watch Trending Video)

Published On - 3:11 pm, Sat, 21 August 21