Viral Video: ರಸ್ತೆಯಲ್ಲಿ ಹಾಕಿರುವ ಸೈನ್​ಬೋರ್ಡ್​ ಮೇಲೆ ಪುಷ್​ಅಪ್ಸ್​, ಮದ್ಯದ ಅಮಲಿರಬೇಕು ಎಂದ ಜನ

|

Updated on: Jun 21, 2023 | 2:21 PM

ಇಂದು ವಿಶ್ವದಾದ್ಯಂತ ಯೋಗ ದಿನ(Yoga Day)ವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ, ಈ ಸಂದರ್ಭದಲ್ಲಿ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: ರಸ್ತೆಯಲ್ಲಿ ಹಾಕಿರುವ ಸೈನ್​ಬೋರ್ಡ್​ ಮೇಲೆ ಪುಷ್​ಅಪ್ಸ್​, ಮದ್ಯದ ಅಮಲಿರಬೇಕು ಎಂದ ಜನ
ವೈರಲ್ ಸುದ್ದಿ
Follow us on

ಇಂದು ವಿಶ್ವದಾದ್ಯಂತ ಯೋಗ ದಿನ(Yoga Day)ವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ, ಈ ಸಂದರ್ಭದಲ್ಲಿ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ತಕ್ಷಣ ನೀವು ತಲೆ ಮೇಲೆ ಕೈಹೊತ್ತುಕೊಳ್ಳುವುದು ಗ್ಯಾರಂಟಿ. ಎಲ್ಲರೂ ಮನೆಯಲ್ಲಿ, ಜಿಮ್, ಪಾರ್ಕ್​ನಲ್ಲಿ ಯೋಗ ಮಾಡಿದರೆ ಈಗ ರಸ್ತೆಯಲ್ಲಿ ನಿಲ್ಲಿಸಿರುವ ಸೈನ್​ ಬೋರ್ಡ್​ ಮೇಲೆ ಪುಷ್​ಅಪ್ಸ್​ ಮಾಡುತ್ತಿರುವುದನ್ನು ಕಾಣಬಹುದು ಕಾಣಬಹುದು.

ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ, ಇಲ್ಲಿ ವ್ಯಕ್ತಿಯೊಬ್ಬ ತನ್ನದೇ ಶೈಲಿಯಲ್ಲಿ ಪುಷ್ಅಪ್ ಮಾಡುವುದನ್ನು ಕಾಣಬಹುದು. ವಾಸ್ತವವಾಗಿ ಈ ವ್ಯಕ್ತಿಯು ರಸ್ತೆಯಲ್ಲಿ ಮಾಡಿದ ಸೈನ್ ಬೋರ್ಡ್ ಮೇಲೆ ಹತ್ತಿ ಪುಷ್ಅಪ್ ಮಾಡಲು ಪ್ರಾರಂಭಿಸುತ್ತಾನೆ.

ಇದಾದ ನಂತರ ದಾರಿಯಲ್ಲಿ ಹೋಗುತ್ತಿದ್ದ ಜನರು ಬೈಕ್ ನಿಲ್ಲಿಸಿ ಆತನನ್ನು ನೋಡಲಾರಂಭಿಸಿದರು. ಆದರೆ ಆತ ಪುಶ್-ಅಪ್ ಮಾಡುತ್ತಲೇ ಇದ್ದ, ಹೀಗೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು. ಏಕೆಂದರೆ ಒಮ್ಮೆ ಕಾಲು ಜಾರಿದರೆ ಸಾಕು ದೊಡ್ಡ ಅಪಾಯವೇ ಆಗಬಹುದು.

ಮತ್ತಷ್ಟು ಓದಿ: Viral: ‘ಹೃದಯ, ಹಂಸ ಸರಿ, ಆದರೆ ಈ ಬಟ್ಟೆಮಂಗ ನನ್ನ ಎದೆಬಡಿತವನ್ನೇ ನಿಲ್ಲಿಸಿತ್ತಲ್ಲ!’

ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊವನ್ನು ವೀಕ್ಷಿಸಿದ ನಂತರ, ಬಳಕೆದಾರರು ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು ದೇಸಿ ಹೀರೋ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಇದನ್ನು ‘ಸ್ಟೇಜ್ ಶೋ’ ಎಂದು ಕರೆದರು. ಇನ್ನೊಬ್ಬ ಬಳಕೆದಾರರು ಮದ್ಯದ ನಶೆ ಇರಬೇಕು ಎಂದು ಬರೆದಿದ್ದಾರೆ.

ಈ ವಿಡಿಯೋ ಹಳೆಯದಾದರೂ ಇಂದು ಯೋಗ ದಿನದಂದು ವೈರಲ್ ಆಗುತ್ತಿದೆ. ಈ ವ್ಯಕ್ತಿಯನ್ನು ನೋಡಲು ಸಾಕಷ್ಟು ಮಂದಿ ಅಲ್ಲಿ ನೆರೆದಿರುವುದನ್ನು ಈ ವಿಡಿಯೋದಲ್ಲಿ ನೀವು ಕಾಣಬಹುದು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ