ಪ್ರತಿ ಮಕ್ಕಳು ಬಯಸುವ ಒಂದು ವಿಷಯವೆಂದರೆ ಅವರ ಹೆತ್ತವರನ್ನು ಸಂತೋಷಪಡಿಸುವುದು ಮತ್ತು ಹೆಮ್ಮೆ ಪಡುವಂತೆ ಮಾಡುವುದು. ಒಂದೊಮ್ಮೆ ತನ್ನ ಮಕ್ಕಳು ಹೆಮ್ಮೆ ಪಡುವಂತೆ ಮಾಡಿದರೆ ಪೋಷಕರು ಇನ್ನಿಲ್ಲದ ಸಂತೋಷ ಪಡುತ್ತಾರೆ. ಅದೇ ರೀತಿ ತಾವು ಪ್ರಯಾಣಿಸುವ ವಿಮಾನವನ್ನು ಮಗ ಓಡಿಸುತ್ತಿದ್ದಾನೆ ಎಂದು ವಿಮಾನ ಹತ್ತುವಾಗ ತಿಳಿದರೆ ಹೆತ್ತವರ ಸಂತೋಷ, ಅವರು ಪಡುವ ಹೆಮ್ಮೆ ಹೇಗಿರಬಹುದು? ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೋಷಕರು ವಿಮಾನ ಹತ್ತುವಾಗ ಆ ವಿಮಾನದಲ್ಲಿ ಪೈಲೆಟ್ ಆಗಿ ಮಗನನ್ನು ಕಂಡಾಗ ಪೋಷಕರು ಸಂತೋಷಗೊಳ್ಳುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.
ವೈರಲ್ ವಿಡಿಯೋದಲ್ಲಿ ಕಾಣುವಂತೆ, ಮಹಿಳೆಯೊಬ್ಬರು ವಿಮಾನವನ್ನು ಹತ್ತಿಕೊಂಡು ಬರುತ್ತಾರೆ. ಈ ವೇಳೆ ತನ್ನ ಮಗ ಪೈಲೆಟ್ ಆಗಿ ಅದೇ ವಿಮಾನದ ಪ್ರವೇಶ ದ್ವಾರದಲ್ಲಿ ಇರುವುದನ್ನು ಕಂಡು ಅಚ್ಚರಿಗೊಳ್ಳುತ್ತಾರೆ ಮತ್ತು ಸಂತೋಷಗೊಳ್ಳುತ್ತಾರೆ. ಮಗನನ್ನು ಕಂಡ ಖುಷಿಯಲ್ಲಿ ತಾಯಿ ಮಗನ ಕೈಯನ್ನು ಹಿಡಿದುಕೊಂಡು ನಗುತ್ತಾಳೆ. ನಂತರ ವಿಮಾನ ಚಾಲನೆ ಮಾಡುವ ಸ್ಥಳದಲ್ಲಿ ಕೂರಿಸಿಕೊಂಡು ಫೋಟೋ ತೆಗೆಯುತ್ತಾರೆ.
ಸ್ವತಃ ಆ ಮಹಿಳೆಯ ಮಗನಾಗಿರುವ ಪೈಲೆಟ್ ಕಮಲ್ ಕುಮಾರ್ ಅವರು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾನು ಹಾರಲು ಪ್ರಾರಂಭಿಸಿದಾಗಿನಿಂದ ನಾನು ಇದಕ್ಕಾಗಿ ಕಾಯುತ್ತಿದ್ದೆ ಮತ್ತು ಅಂತಿಮವಾಗಿ ಜೈಪುರಕ್ಕೆ ಮನೆಗೆ ಮರಳಲು ನನಗೆ ಅವಕಾಶ ಸಿಕ್ಕಿತು. ಇದು ಅಂತಹ ಭಾವನೆ” ಎಂದು ಶೀರ್ಷಿಕೆ ಬರೆದಿದ್ದಾರೆ.
ವಿಡಿಯೋ ವೀಕ್ಷಣೆ ಮಾಡಿದ ಒಂದಷ್ಟು ಮಂದಿ ಕಾಮೆಂಟ್ಗಳನ್ನು ಮಾಡಿದ್ದು, ನೆಟ್ಟಿಗರೊಬ್ಬರು, “ಪ್ರತಿಯೊಬ್ಬ ಮಹತ್ವಾಕಾಂಕ್ಷಿ ಪೈಲಟ್‌ಗಳ ಕನಸು” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ನಾನು ಇಂದು ನೋಡಿದ ಅತ್ಯುತ್ತಮ ವಿಷಯ! ಅಭಿನಂದನೆಗಳು! ನಿಮ್ಮ ಪೋಷಕರು ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಟ್ಟಿರಬಹುದು” ಎಂದು ಹೇಳಿದ್ದಾರೆ.
Published On - 6:32 pm, Fri, 22 July 22