ಅಂಬಾನಿ ಕುಟುಂಬದ ನಾರಿಮಣಿಗಳು ತೊಡುವ ಆಭರಣಗಳಿಂದ ಹಿಡಿದು ಉಡುಪುಗಳವರೆಗೆ ಸಖತ್ ಸುದ್ದಿಯಾಗುತ್ತಲೇ ಇರುತ್ತಾರೆ.
ಇದೀಗ ಮುಖೇಶ್ ಅಂಬಾನಿಯ ಕಿರಿಯ ಸೊಸೆ ರಾಧಿಕ ಮರ್ಚೆಂಟ್ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ. ಇತ್ತೀಚಿಗಷ್ಟೇ ರಾಧಿಕ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇವರು ತೊಟ್ಟು ಉಡುಗೆಯ ಬೆಲೆ ಕಂಡು ನೆಟ್ಟಿಗರು ಶಾಕ್ ಆಗಿ ಹೋಗಿದ್ದಾರೆ.
ನೋಡಲು ಸಿಂಪಲ್ ಆಗಿ ಕಾಣುವ ಈ ಬಟ್ಟೆ ಲಕ್ಷ ಲಕ್ಷ ಬೆಲೆ ಬಾಳುತ್ತೆ. ಈ ಉಡುಗೆಯನ್ನು ಇಟಾಲಿಯನ್ ಫ್ಯಾಶನ್ ಹೌಸ್ ಲೊರೊ ಪಿಯಾನದಿಂದ ಖರೀದಿಸಿರುವುದಾಗಿ ವರದಿಯಾಗಿದೆ. ಇದರ ಅಧಿಕೃತ ವೆಬ್‌ಸೈಟ್ ಪ್ರಕಾರ ಶರ್ಟ್ ಬೆಲೆ 244,200 ಯೆನ್ ಅಂದರೆ ಸರಿಸುಮಾರು ₹ 1,32,556 ರೂ. ಹಾಗೆಯೇ ಈ ಪ್ಯಾಂಟ್ ಅನ್ನು ನ್ಯಾಶ್ ಟ್ರೌಸರ್ ಎಂದು ಕರೆಯಲಾಗುತ್ತದೆ. ಇದರ ಬೆಲೆ 225,500 ಯೆನ್, ಅಂದಾಜು 1,22,406 ರೂ. ಒಟ್ಟಾರೆಯಾಗಿ, ಶರ್ಟ್ ಮತ್ತು ಪ್ಯಾಂಟ್ ಸೆಟ್ 2,54,962 ರೂ. ಮೌಲ್ಯದ್ದಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕ್ಯಾನ್ಸರ್ ಪೀಡಿತ ಗಂಡನನ್ನು ಬದುಕುಳಿಸಲು ಜೀವನವನ್ನೇ ಮುಡಿಪಾಗಿಟ್ಟಿದ್ದ ಪತ್ನಿ; ಫಲಿಸಲಿಲ್ಲ ಪ್ರಾರ್ಥನೆ
pallav_paliwal ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:42 am, Sun, 22 December 24