Viral video: ಕರಡಿಗೆ ಮುಖಾಮುಖಿಯಾದ ಶಾಲಾ ಪ್ರಾಂಶುಪಾಲರು! ಏನ್ ಆಯ್ತು ಗೊತ್ತಾ?

ಶಾಲೆಯ ಹೊರಗೆ ಇರಿಸಲಾದ ಕಸದ ತೊಟ್ಟಿಯ ಲಾಕ್ ತೆಗೆಯುತ್ತಿದ್ದಾಗ ಅನಿರೀಕ್ಷಿತ ಅತಿಥಿಯ ಆಗಮನವಾದ್ದರಿಂದ ಶಾಲಾ ಪ್ರಾಂಶುಪಾಲರು ಓಡಲು ಪ್ರಾಂಭಿಸಿದ್ದಾರೆ. ಈ ವಿಡಿಯೋ ಈಗ ಸಿಕ್ಕಾ ಪಟ್ಟೆ ವೈರೆಲ್ ಆಗಿದೆ.

Viral video: ಕರಡಿಗೆ ಮುಖಾಮುಖಿಯಾದ ಶಾಲಾ ಪ್ರಾಂಶುಪಾಲರು! ಏನ್ ಆಯ್ತು ಗೊತ್ತಾ?
Viral video
Image Credit source: Facebook
Edited By:

Updated on: May 02, 2023 | 6:53 PM

ಅನಿರೀಕ್ಷಿತ ಅತಿಥಿಯ ಆಗಮನ ಒಂದೋ ಖುಷಿ ಕೊಡುತ್ತದೆ ಇಲ್ಲವಾದಲ್ಲಿ ಶಾಕ್. ಇದಕ್ಕೆ ಪೂರಕವೆಂಬ ಹಾಗೇ ಪಶ್ಚಿಮ ವರ್ಜೀನಿಯಾದ ಜೆಲಾ ಎಲಿಮೆಂಟರಿ ಶಾಲೆಯ ಪ್ರಾಂಶುಪಾಲರು ಡಂಪ್ಸ್ಟರ್ ಡೈವಿಂಗ್ ಕರಡಿಯೊಂದಿಗೆ ಮುಖಾಮುಖಿಯಾಗಿದ್ದಾರೆ. ಪ್ರಿನ್ಸಿಪಾಲ್ ಜೇಮ್ಸ್ ಮಾರ್ಷ್ ಬೆಳಿಗ್ಗೆ ಶಾಲೆಯ ಹೊರಗೆ ಕಸದ ತೊಟ್ಟಿಯ ಲಾಕ್ ತೆಗೆಯುತ್ತಿದ್ದಾಗ ಅನಿರೀಕ್ಷಿತ ಅತಿಥಿಯ ಆಗಮನವಾಗಿದೆ. ಈ ಘಟನೆಯನ್ನು ಆಧರಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ನಿಕೋಲಸ್ ಕೌಂಟಿ ಬೋರ್ಡ್ ಆಫ್ ಎಜುಕೇಶನ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದೆ.

ಈ ಪ್ರದೇಶದಲ್ಲಿ ಕರಡಿಯ ಕಾಟ ಜಾಸ್ತಿ ಇರುವುದರಿಂದ ಅವು ಆಹಾರದ ತುಣುಕುಗಳನ್ನು ತಿನ್ನುವುದನ್ನು ತಡೆಯಲು ವಿನ್ಯಾಸಗೊಳಿಸಲಾಗಿದ್ದ ಮನೆಯಾಕೃತಿಯ ಕಂಟೇನರ್ನ ಲಾಕ್ ತೆಗೆಯಲು ಪ್ರಯತ್ನಿಸುತ್ತಿದ್ದ ಮಾರ್ಷ್ಗೆ ಆಘಾತ ಕಾದಿತ್ತು. ಏಕೆಂದರೆ ಒಂದೇ ಸಲ ಕರಡಿ ಅದರಿಂದ ಹೊರಬಂದು ಓಡಲು ಪ್ರಾಂಭಿಸಿದೆ. ಅದೇ ಕ್ಷಣಕ್ಕೆ ಮಾರ್ಷ್ ಅವರು ಕೂಡ ಹೆದರಿ ಕರಡಿ ವಿರುದ್ಧ ದಿಕ್ಕಿನಲ್ಲಿ ಓಡಲು ಪ್ರಾರಂಭಿಸಿದ್ದು ಪ್ರಾಣ ಕಾಪಾಡಿಕೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಬಾರಿ ಸುದ್ದಿ ಮಾಡಿದೆ.

ಇದನ್ನೂ ಓದಿ: ರೆಡ್​​​​​ ಕಾರ್ಪೆಟ್ ಮೇಲೆ ವಾಕ್ ಮಾಡಿದ ಜಿರಳೆ ವೀಡಿಯೊ ವೈರಲ್!

ಮಾರ್ಷ್ ಹೇಳುವ ಪ್ರಕಾರ ಕಂಟೇನರ್ ಒಳಗೆ ಹೋದ ಕರಡಿ ಕಸದ ತೊಟ್ಟಿಯನ್ನು ದಾಟಿ ಬರದೇ ಉಳಿದುಕೊಂಡಿತ್ತು. ಬಳಿಕ ಮುಚ್ಚಳ ಮುಚ್ಚಿದ ನಂತರ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಇದನ್ನು ಯುಪಿಐ ವರದಿ ಮಾಡಿದೆ.

ಈ ವೀಡಿಯೊವನ್ನು 15 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಕತ್ತ್ ವೈರೆಲ್ ಆಗಿದೆ. ಈ ವೀಡಿಯೋಗೆ ಕಾಮೆಂಟ್ ಮಾಡಿದ ಬಳಕೆದಾರರೊಬ್ಬರು, “ಕರಡಿ ಅವನಿಗಿಂತ ವೇಗವಾಗಿ ಓಡಿದ್ದರಿಂದ ಅವರು ಪರಸ್ಪರ ಹೆದರಿದರು” ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು “ಅಯ್ಯೋ ಪಾಪ.. ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಪ್ರಾಂಶುಪಾಲರು ಈ ಆಘಾತವನ್ನು ಸಹಿಸಿಕೊಳ್ಳಬಹುದೇ?” ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:53 pm, Tue, 2 May 23