Viral Video: ಮಂಜುಗಡ್ಡೆಯ ಆಕಾರಕ್ಕೆ ತಿರುಗಿದ ಶಿವಲಿಂಗ, ಪವಾಡ ಕಣ್ತುಂಬಿಕೊಳ್ಳಲು ಶಿವನ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಭಕ್ತರು

ಅಮರನಾಥ ಗುಹಾ ದೇವಾಲಯದಲ್ಲಿ ಮಾತ್ರವಲ್ಲ ಮಹಾರಾಷ್ಟ್ರದ ಶಿವ ದೇವಾಲಯಲದಲ್ಲೂ ಶಿವಲಿಂಗ ಮಂಜುಗಡ್ಡೆ ರೂಪವನ್ನು ತಾಳಿದ್ದು, ಭಕ್ತರು ಇದನ್ನು ಪವಾಡ ಎನ್ನುತ್ತಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ.

Viral Video: ಮಂಜುಗಡ್ಡೆಯ ಆಕಾರಕ್ಕೆ ತಿರುಗಿದ ಶಿವಲಿಂಗ, ಪವಾಡ ಕಣ್ತುಂಬಿಕೊಳ್ಳಲು ಶಿವನ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಭಕ್ತರು
ಮಂಜುಗಡ್ಡೆ ರೂಪಕ್ಕೆ ತಿರುಗಿದ ಶಿವಲಿಂಗ
Edited By:

Updated on: Jul 02, 2022 | 5:48 PM

ವೈರಲ್ ಸುದ್ದಿ: ಎರಡು ವರ್ಷಗಳ ಅಂತರದ ನಂತರ ಗುರುವಾರ (ಜೂನ್ 30) ಅಮರನಾಥ ಯಾತ್ರೆಯು ಆರಂಭವಾಗಿದ್ದು, 3,880 ಮೀಟರ್ ಎತ್ತರದ  ಅಮರನಾಥ ಗುಹಾ ದೇವಾವಲಕ್ಕೆ ಭಕ್ತರ ದಂಡು ತೆರಳುತ್ತಿದ್ದಾರೆ. ಶಿವನು ಅಮರೇಶ್ವರ ಮಹಾದೇವನ ರೂಪದಲ್ಲಿ ಪ್ರತಿ ವರ್ಷ ಮಂಜುಗಡ್ಡೆಯ ಶಿವಲಿಂಗದ ಆಕಾರವನ್ನು ತೆಗೆದುಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಅಮರನಾಥ ಗುಹೆಯ ಒಂದು ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಮಂಜುಗಡ್ಡೆಯು ಶಿವಲಿಂಗದ ರೂಪವನ್ನು ಏಕೆ ತೆಗೆದುಕೊಳ್ಳುತ್ತದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದರೂ ವಿಜ್ಞಾನಿಗಳಿಗೆ ಸಾಧ್ಯವಾಗಲಿಲ್ಲ. ಆದರೀಗ ಮಹಾರಾಷ್ಟ್ರದ ಶಿವ ದೇವಾಲಯಲದಲ್ಲೂ ಶಿವಲಿಂಗ ಮಂಜುಗಡ್ಡೆಯ ರೂಪ ತಾಳಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: Viral Video: ರೆಸ್ಲರ್ ದಿ ಗ್ರೇಟ್ ಖಲಿ ಜೊತೆ ಕಬಡ್ಡಿ ಆಡಿ ಫಜೀತಿಗೆ ಸಿಲುಕಿದ ವ್ಯಕ್ತಿ! ವಿಡಿಯೋ ನೋಡಿ

ಯಾವ ರೀತಿ ಅಮರನಾಥ ಗುಹಾ ದೇವಾಲಯದಲ್ಲಿ ಶಿವಲಿಂಗವು ಮಂಜುಗಡ್ಡೆ ರೂಪ ತಾಳುತ್ತದೆಯೋ ಅದೇ ರೀತಿ ನಾಸಿಕ್ ಜಿಲ್ಲೆಯಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನದಲ್ಲಿಯೂ ಶಿವಲಿಂಗ ಮಂಜುಗಡ್ಡೆ ರೂಪವನ್ನು ತಾಳಿದೆ. ಇದು ಕಂಡ ಅಲ್ಲಿನ ಜನರನ್ನು ಹಾಗೂ ಅರ್ಚಕರನ್ನು ಅಚ್ಚರಿಗೊಳಿಸಿದ್ದು, ಇದೊಂದು ಪವಾಡ ಎನ್ನುತ್ತಿದ್ದಾರೆ. ಅಲ್ಲದೆ ಮಂಜುಗಡ್ಡೆ ರೂಪ ತಾಳಿದ ಶಿವಲಿಂಗವನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಜನರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಶಂಕರ ದೇವಸ್ಥಾನದಲ್ಲಿ ಪಂಡಿತರೊಬ್ಬರು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸುತ್ತಲೂ ಹೂವುಗಳಿದ್ದ ಮಂಜುಗಡ್ಡೆಯ ಶಿವಲಿಂಗವನ್ನು ಅರ್ಚಕರು ಪೂಜಿಸುತ್ತಿರುವುದನ್ನು ಕಾಣಬಹುದು. ‘ನರೇಂದ್ರ ಅಹೆರ್’ ಎಂಬ ಬಳಕೆದಾರರು ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.  ಈ ವಿಡಿಯೋ ವೈರಲ್ ಪಡೆದು 3,200 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಿದೆ. ಅನೇಕ ನೆಟಿಜನ್‌ಗಳು ಇದನ್ನು ಪವಾಡ ಎಂದು ನಂಬಿದರೆ ಇನ್ನೂ ಕೆಲವರು ಇದು ಮಾನವ ನಿರ್ಮಿತ ಮಂಜುಗಡ್ಡೆ ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ: Viral Video: ಜಗನ್ನಾಥನ ರಥಯಾತ್ರೆ ಗೌರವರ್ಥವಾಗಿ ರೋಬೋಟಿಕ್ ರಥ ಯಾತ್ರೆ

Published On - 5:48 pm, Sat, 2 July 22