AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೆಸ್ಲರ್ ದಿ ಗ್ರೇಟ್ ಖಲಿ ಜೊತೆ ಕಬಡ್ಡಿ ಆಡಿ ಫಜೀತಿಗೆ ಸಿಲುಕಿದ ವ್ಯಕ್ತಿ! ವಿಡಿಯೋ ನೋಡಿ

ರೆಸ್ಲರ್ ದಿ ಗ್ರೇಟ್ ಖಲಿ ಜೊತೆ ಕಬಡ್ಡಿ ಆಡಲು ಹೋಗಿ ಫಜೀತಿಗೆ ಸಿಲುಕಿದ ವ್ಯಕ್ತಿ. ಖಲಿ ಅವರ ಕೈಗಳ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಹರಸಾಹಸಪಟ್ಟ ವ್ಯಕ್ತಿಯನ್ನು ಕೊನೆಯಲ್ಲಿ ಖಲಿ ಏನು ಮಾಡಿದರು ನೀವೇ ನೋಡಿ.

Viral Video: ರೆಸ್ಲರ್ ದಿ ಗ್ರೇಟ್ ಖಲಿ ಜೊತೆ ಕಬಡ್ಡಿ ಆಡಿ ಫಜೀತಿಗೆ ಸಿಲುಕಿದ ವ್ಯಕ್ತಿ! ವಿಡಿಯೋ ನೋಡಿ
ದಿ ಗ್ರೇಟ್ ಖಲಿ
TV9 Web
| Edited By: |

Updated on:Jul 02, 2022 | 5:14 PM

Share

ವೈರಲ್ ವೀಡಿಯೊ: ವಿಶ್ವಪ್ರಸಿದ್ಧ ಭಾರತೀಯ ವೃತ್ತಿಪರ ಕುಸ್ತಿಪಟು, ದಲೀಪ್ ಸಿಂಗ್ ರಾಣಾ ಅಂದರೆ ಪಕ್ಕಕ್ಕೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ದಿ ಗ್ರೇಟ್ ಖಲಿ (The Great Khali) ಎಂದು ಹೇಳಿದರೆ ಮಾತ್ರ ಪಕ್ಕನೇ ತಿಳಿಯುತ್ತದೆ. ದಿ ಗ್ರೇಟ್ ಖಲಿ ಹೆಸರಿನಲ್ಲಿ WWEನಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಇವರ ಜೊತೆ ವ್ಯಕ್ತಿಯೊಬ್ಬರು ಕಬಡ್ಡಿ ಆಡಲು ಹೋಗಿ ಫಜೀತಿಗೆ ಸಿಲುಕಿದ ಮನರಂಜನೆಯ ಘಟನೆಯೊಂದು ನಡೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.

ಇದನ್ನೂ ಓದಿ: Viral Video: ಮಂಗ ಮತ್ತು ಬೆಕ್ಕಿನ ನಿಷ್ಕಲ್ಮಶ ಸ್ನೇಹ ನೋಡಿ ಫಿದಾ ಆದ ನೆಟ್ಟಿಗರು, ವಾಹ್! ಹೇಗಿದೆ ಗೊತ್ತಾ ವಿಡಿಯೋ?

ವೈರಲ್ ವಿಡಿಯೋದಲ್ಲಿ ಕಾಣುವಂತೆ, ಕೇವಲ ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬರು ಖಲಿ ಜೊತೆ ಕಬಡ್ಡಿ ಆಡಲು ಕಣಕ್ಕಿಳಿದಿದ್ದಾರೆ. ಹೇಳಿಕೇಳಿ ಖಲಿ ರೆಸ್ಲರ್, ಅವರು ಅವರ ಕುಸ್ತಿಕಲೆಯನ್ನು ಬಿಡುತ್ತಾರೆಯೇ? ಆ ವ್ಯಕ್ತಿ ರೈಡ್ ಬಂದಾಗ ಖಲಿ ವ್ಯಕ್ತಿಯ ಮುಖವನ್ನು ಎರಡೂ ಕೈಗಳಿಂದ ಹಿಡಿಯುತ್ತಾರೆ. ಈ ವೇಳೆ ಆ ವ್ಯಕ್ತಿ ಖಲಿ ಕೈಗಳ ಬಿಗಿತದಿಂದ ಹೊರಬರಲು ಹೆಣಗಾಡಿದ್ದು, ಕಿರುಚಾಡುವುದನ್ನು ಕಾಣಬಹುದು. ಅಲ್ಲದೆ ಕೊನೆಯಲ್ಲಿ ಇಬ್ಬರು ವ್ಯಕ್ತಿಗಳು ವ್ಯಕ್ತಿಯ ಸಹಾಯಕ್ಕೆ ದಾವಿಸಿದ್ದು, ಖಲಿಯ ತೋಳುಗಳನ್ನು ಹಿಡಿದುಕೊಂಡು ಬಿಟ್ಟುಬಿಡುವಂತೆ ಕೋರುತ್ತಾರೆ. ನಂತರ ಖಲಿ ಆ ವ್ಯಕ್ತಿಯನ್ನು ದೂರಕ್ಕೆ ತಳ್ಳುತ್ತಾರೆ.

ಸ್ವತಃ ಖಲಿ ಅವರೇ ಇದರ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೀರಾ ಫೇರಿಯ ‘ಖೋಪ್ಡಿ ಟೋಡ್’ ಸಂಭಾಷಣೆಯಂತಹ ಉಲ್ಲಾಸದ ಹಿಂದಿ ಚಲನಚಿತ್ರ ದೃಶ್ಯಗಳನ್ನು ಸಹ ವಿಡಿಯೋ ಒಳಗೊಂಡಿರುವ ಕಾರಣ ಇದು ಮೀಮ್ಸ್ ಪುಟದಿಂದ ಮರುಪೋಸ್ಟ್ ಆಗಿರುವಂತೆ ತೋರುತ್ತದೆ. ಈ ವಿಡಿಯೋ ವೈರಲ್ ಪಡೆದು 85ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ದಲೀಪ್ ಸಿಂಗ್ ರಾಣಾ ಅವರು 2000ರಲ್ಲಿ WWEಗೆ ಪಾದಾರ್ಪಣೆ ಮಾಡಿದರು. ಅವರ ವೃತ್ತಿಪರ ಕುಸ್ತಿ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ಅವರು ಪಂಜಾಬ್ ಪೊಲೀಸ್‌ನ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಆಗಿದ್ದರು. ಅವರು ನಾಲ್ಕು ಹಾಲಿವುಡ್ ಚಲನಚಿತ್ರಗಳು, ಎರಡು ಬಾಲಿವುಡ್ ಚಲನಚಿತ್ರಗಳು ಮತ್ತು ಹಲವಾರು ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕಾಂಟಿನೆಂಟಲ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (CWE) ಎಂಬ ಭಾರತೀಯ ವೃತ್ತಿಪರ ಕುಸ್ತಿ ಪ್ರಚಾರ ಮತ್ತು ತರಬೇತಿ ಅಕಾಡೆಮಿಯನ್ನು ಸ್ಥಾಪಿಸಿದರು.

ಇದನ್ನೂ ಓದಿ: Viral: ಕೊಕೊಕೋಲ, ಕ್ರೀಮ್ ಚೀಸ್, ಆರೆಂಜ್ ಜೆಲ್ಲೋದಲ್ಲೂ ಮಾಡಬಹುದು ಸಲಾಡ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಪಡೆದ ಪೋಸ್ಟ್

Published On - 5:14 pm, Sat, 2 July 22