Viral Video: ಮಂಗ ಮತ್ತು ಬೆಕ್ಕಿನ ನಿಷ್ಕಲ್ಮಶ ಸ್ನೇಹ ನೋಡಿ ಫಿದಾ ಆದ ನೆಟ್ಟಿಗರು, ವಾಹ್! ಹೇಗಿದೆ ಗೊತ್ತಾ ವಿಡಿಯೋ?
ಸ್ನೇಹಕ್ಕೆ ಜಾತಿ ಮತ ಬೇಧಭಾವ ಇಲ್ಲ ಎಂಬುದಕ್ಕೆ ಬೆಕ್ಕು ಮತ್ತು ಮಂಗವೇ ಸಾಕ್ಷಿ, ಸಾಮಾಜಿಕ ಜಾಲತಾಣದಲ್ಲಿ ಮಂಗ ಮತ್ತು ಬೆಕ್ಕಿನ ಸ್ನೇಹದ ವಿಡಿಯೋ ವೈರಲ್ ಆಗುತ್ತಿದ್ದು, ವಿಡಿಯೋ ಇಲ್ಲಿದೆ ನೋಡಿ.
ವೈರಲ್ ವೀಡಿಯೊ: ಸ್ನೇಹ ಎಂಬುದು ಅದು ಯಾವುದಕ್ಕೂ ಹೋಲಿಸಲಾಗದ ಅಮರ ಸಂಬಂಧ. ಇದಕ್ಕೆ ಯಾವುದೇ ಜಾತಿ ಮತ ಎಂಬ ಭೇದಭಾವ ಇರುವುದಿಲ್ಲ. ಇದರಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ. ಒಂದು ಪ್ರಾಣಿ ಮತ್ತೊಂದು ಪ್ರಾಣಿಯೊಂದಿಗೆ ಉತ್ತಮ ಸ್ನೇಹವನ್ನು ಹೊಂದಿರುತ್ತದೆ. ಈ ಹಿಂದೆ ಬಾತುಕೋಳಿಯ ಮೇಲೆ ಮಂಗ ಕುಳಿತುಕೊಂಡು ಹೋಗುವ ಫೋಟೋ ವೈರಲ್ ಆಗಿತ್ತು. ಇದೀಗ ಮಂಗ ಮತ್ತು ಬೆಕ್ಕಿನ ನಿಷ್ಕಲ್ಮಶ ಸ್ನೇಹ(Monkey And Cat Friendship) ನೋಡಿ ನೆಟ್ಟಿಗರು ಮನಸೋತಿದಿದ್ದಾರೆ. ಮರಿ ಕೋತಿಯೊಂದು ಪುಟ್ಟ ಬೆಕ್ಕಿನ ಜೊತೆ ಸ್ನೇಹ ಮಾಡುತ್ತಿರುವ ವಿಡಿಯೋ (Video)ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral)ಆಗುತ್ತಿದ್ದು, ನೆಟ್ಟಿಗರು ಸಖತ್ ಫಿದಾ ಆಗಿದ್ದಾರೆ.
ಇದನ್ನೂ ಓದಿ: Viral Video: IND vs ENG ಪಂದ್ಯಕ್ಕೆ ಮಳೆಯಡ್ಡಿ, ಛತ್ರಿ, ಬಾಲ್ ಹಿಡಿದು ಕ್ರಿಕೆಟ್ ಆಡಿದ ಅಭಿಮಾನಿಗಳು
ಮುದ್ದಾದ ಮತ್ತು ಪ್ರಾಣಿಗಳ ತಮಾಷೆಯ ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುವ ‘buitengebieden’ ಎಂಬ ಟ್ವಿಟರ್ ಖಾತೆಯಲ್ಲಿ ಸಣ್ಣ ಕ್ಲಿಪ್ ಒಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬೆಕ್ಕು ನಿಂತಿರುವುದನ್ನು ಕಾಣಬಹುದು. ಇಲ್ಲಿಗೆ ಬಂದ ಮಂಗನ ಮರಿ ಆರಂಭದಲ್ಲಿ ಬೆಕ್ಕಿಗೆ ಅಂಟಿಕೊಂಡಿರುವಂತೆ ಮಾಡುತ್ತದೆ. ನಂತರ ಕುಳಿತುಕೊಂಡು ಸ್ನೇಹಿತರಂತೆ ಬೆಕ್ಕಿನ ಹೆಗಲ ಮೇಲೆ ಕೈಇಟ್ಟುಕೊಂಡಿದೆ.
ಇದರ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಪ್ರಾಣಿ ಪ್ರಿಯರು ಫುಲ್ ಖುಷಿಪಡುತ್ತಿದ್ದಾರೆ. ಟ್ವಿಟರ್ನಲ್ಲಿ ಹಂಚಿಕೆಯಾದ ಈ ವಿಡಿಯೋ ವೈರಲ್ ಪಡೆದು 1.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 93 ಸಾವಿರಕ್ಕೂ ಅಧಿಕ ಲೈಕ್‌ಗಳನ್ನು ಗಿಟ್ಟಿಸಿಕೊಂಡಿದೆ. ವಿಡಿಯೋ ನೋಡಿ:
Best friends.. ? pic.twitter.com/P6ae3Yd2Pb
— Buitengebieden (@buitengebieden) July 1, 2022
ಬೆಕ್ಕು ಮತ್ತು ಮಂಗನ ಸ್ನೇಹ ತುಂಬಾ ಮುದ್ದಾಗಿದೆ ಅಲ್ಲವೇ? ನೆಟಿಜನ್‌ಗಳು ಈ ವೀಡಿಯೊವನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ ಮತ್ತು ಕಾಮೆಂಟ್‌ಗಳಲ್ಲಿ ಪ್ರಾಣಿಗಳು ಸ್ನೇಹಿತರಾಗಿರುವ ರೀತಿಯ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral: ಕೊಕೊಕೋಲ, ಕ್ರೀಮ್ ಚೀಸ್, ಆರೆಂಜ್ ಜೆಲ್ಲೋದಲ್ಲೂ ಮಾಡಬಹುದು ಸಲಾಡ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಪಡೆದ ಪೋಸ್ಟ್