ಜೀವನದಲ್ಲಿ ಅಸಾಧ್ಯವೆಂಬುದು ಏನೂ ಇಲ್ಲ, ಸಾಧ್ಯ ಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕಷ್ಟೇ ಎನ್ನುವ ಸಂದೇಶ ಸಾರುವ ಈ ವಿಡಿಯೋವನ್ನು ಎಲ್ಲರೂ ಒಮ್ಮೆ ನೋಡಲೇಬೇಕು. ಪುಟ್ಟ ಬಾಲೆಯೊಬ್ಬಳು ಸ್ಕೇಟಿಂಗ್ ಮಾಡುತ್ತಾ ವಿವಿಧ ಟ್ರಿಕ್ಗಳನ್ನು ಕಲಿಯುವ ಪ್ರಯತ್ನದಲ್ಲಿದ್ದಾಳೆ, ಎರಡು ಮೂರು ಬಾರಿ ಪ್ರಯತ್ನ ಮಾಡಿದರೂ ಅದರಲ್ಲಿ ಸೋಲು ಕಾಣುತ್ತಾಳೆ.
ಬಳಿಕ ಸಹೋದರಿಯರು ನೀನು ಮಾಡೇ ಮಾಡುತ್ತೀಯ ಎಂದು ಹುರಿದುಂಬಿಸಿದಾಗ ಕಿಕ್ ಫ್ಲಿಪ್ ಆಫ್ ಅನ್ನು ಕೆಲವೇ ಕ್ಷಣಗಳಲ್ಲೇ ಕರಗತಗೊಳಿಸಿಕೊಳ್ಳುತ್ತಾಳೆ. ಲುಲು ಎಂಬ ಬಾಲಕಿ ಸ್ಕೇಟ್ಬೋರ್ಡ್ನ 50/50 ಕಿಕ್ ಫ್ಲಿಪ್ ಆಫ್ ಟ್ರಿಕ್ ಮಾಡಲು ಪ್ರಯತ್ನಿಸುತ್ತಾಳೆ ಆ ಟ್ರಿಕ್ ಆಕೆಗೆ ಒಲಿಯದಿದ್ದಾಗ ಹತಾಶೆ ಮೂಡುತ್ತದೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾಳೆ.
ಆದರೆ, ಲುಲು ಸಹೋದರಿಯರು ಅಲ್ಲಿಯೇ ಬಂದು ಕುಳಿತಾಗ ತನ್ನ ‘ಕಿಕ್‌ಫ್ಲಿಪ್ ಆಫ್’ ಮೂಲಕ ಎಲ್ಲರನ್ನೂ ವಿಸ್ಮಯಗೊಳಿಸುತ್ತಾಳೆ.
ಜುಲೈ 7 ರಂದು ಮಿಂಡಿ ಜಾನ್ಸನ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ರೀಲ್ ಅನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿರುವ ಯುವತಿಯರ ತಾಯಿ ಜಾನ್ಸನ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ತನಗೆ ಆ ಟ್ರಿಕ್ ಮಾಡಲು ಬರುತ್ತಿಲ್ಲ ಎಂದು ಲುಲು ಹತಾಶಳಾಗಿದ್ದಳು, ಆದರೆ ಅವಳು ಅಂತಿಮವಾಗಿ ಸ್ಕೇಟಿಂಗ್ ಟ್ರಿಕ್ ಮಾಡಿ ತೋರಿಸಿದಾಗ ಅವಳ ಮುಖದಲ್ಲಿದ್ದ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.
ಇನ್‌ಸ್ಟಾಗ್ರಾಂ ಬಳಕೆದಾರರು ಚಿಕ್ಕ ಹುಡುಗಿಯ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಎಂಬತ್ತು ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿರುವ ಈ ವಿಡಿಯೋ ಜನರಿಗೆ ತುಂಬಾ ಇಷ್ಟವಾಗುತ್ತಿದೆ.
ದಶಕಗಳಿಂದ ಸ್ಕೇಟಿಂಗ್ ಮಾಡುತ್ತಿರುವ ಮತ್ತೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರರು ವಿಡಿಯೋ ನೋಡಿ ಬರಗಾಗಿ . ನಾನು ದಶಕಗಳಿಂದ ಸ್ಕೇಟಿಂಗ್ ಮಾಡುತ್ತಿದ್ದೇನೆ ಮತ್ತು ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ ಧೈರ್ಯಶಾಲಿ ಹುಡುಗಿ ಎಂದು ಕೊಂಡಾಡಿದ್ದಾರೆ ಈ ವಿಡಿಯೋ ಸಾಕಷ್ಟು ಮಂದಿಗೆ ಆದರ್ಶವಾಗಿದೆ.
Published On - 10:42 am, Sat, 30 July 22