ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಬಂಧ ಬಹಳ ಹಳೆಯದು. ಬಹಳ ಹಿಂದಿನಿಂದಲೂ ಮನುಷ್ಯರು ಮತ್ತು ಪ್ರಾಣಿಗಳು ಒಟ್ಟಿಗೇ ಬದುಕುತ್ತಿರುವುದನ್ನು ಕಾಣಬಹುದು. ಹಾಗಿದ್ದರೂ ಮನುಷ್ಯರು ಕೆಲು ಪ್ರಾಣಿಗಳನ್ನು ತಮ್ಮಿಂದ ದೂರವೇ ಇರಿಸುತ್ತಾರೆ, ಕೆಲವೊಂದು ಪ್ರಾಣಿಗಳನ್ನು ತಮ್ಮ ಜೊತೆ ಮನೆಯಲ್ಲೇ ಬೆಳೆಸುತ್ತಾರೆ. ಸಾಕು ಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳನ್ನು ವಿಭಾಗಿಸಲಾಗಿದ್ದು, ಕಾಡು ಪ್ರಾಣಿಗಳು ಮತ್ತು ವಿಷಕಾರಿ ಜೀವಿಗಳು ಅತ್ಯಂತ ಅಪಾಯಕಾರಿಯಾಗಿವೆ.
ಅದರಲ್ಲೂ ಮನುಷ್ಯ ಹಾವುಗಳಿಂದ ಬಹಳ ದೂರವಿರಲು ಪ್ರಯತ್ನಿಸುತ್ತಾನೆ. ಆದರೆ, ಆಕಾಶದಿಂದ ಹಾವಿನ ಮಳೆ ಸುರಿಯಲಾರಂಭಿಸಿದರೆ ಹೇಗಿರುತ್ತದೆ? ಅದರಲ್ಲೂ ಸಾಕಷ್ಟು ಜನರು ಓಡಾಡುವ ಪ್ರದೇಶದಲ್ಲಿ ಹಾವಿನ ಮಳೆ ಸುರಿದರೆ ಜನರ ಪರಿಸ್ಥಿತಿ ಏನಾಬಹುದು? ಇಂತಹದೊಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಈ ರೀತಿಯ ವಿಡಿಯೋವೊಂದು ಹೆಚ್ಚು ಶೇರ್ ಆಗುತ್ತಿದೆ. ಈ ವಿಡಿಯೋದಲ್ಲಿ ಜನನಿಬಿಡ ರಸ್ತೆಯಲ್ಲಿ ಹಾದು ಹೋಗುವ ಕರೆಂಟ್ ತಂತಿಯಲ್ಲಿ ಹಾವು ನೇತಾಡುತ್ತಿರುವುದನ್ನು ಕಾಣಬಹುದು. ಹಾವು ತಂತಿಗೆ ನೇತಾಡುತ್ತಾ ಚಲಿಸುತ್ತಿತ್ತು. ಜನರು ಈ ಘಟನೆಯ ವಿಡಿಯೋಗಳನ್ನು ಮಾಡಿದ್ದಾರೆ. ತಂತಿಗೆ ನೇತಾಡುತ್ತಿದ್ದ ಹಾವಿನ ಮೇಲೆ ಜನರ ಕಣ್ಣು ಬಿದ್ದ ತಕ್ಷಣ ಎಲ್ಲರೂ ಓಡತೊಡಗಿದರು.
A massive snake falling from the sky is my worst nightmare ??#viralhog #snake #spooktober #nope #nightmarefuel pic.twitter.com/VS9P6q9Spy
— ViralHog (@ViralHog) October 15, 2021
ತಂತಿಯ ಮೇಲೆ ಚಲಿಸುತ್ತಿದ್ದ ಹಾವು ಬಳಿಕ ಇದ್ದಕ್ಕಿದ್ದಂತೆ ರಸ್ತೆಗೆ ಬಿದ್ದಿದೆ. ಹಾವು ಬಿದ್ದ ತಕ್ಷಣ ಕಜನರು ಕಿರುಚಿಕೊಂಡು ಓಡಿದ್ದಾರೆ. ಆಕಾಶದಿಂದ ಹಾವು ಬೀಳುತ್ತಿದೆ ಎಂಬ ಕ್ಯಾಪ್ಷನ್ನೊಂದಿಗೆ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಆದರೆ, ವಾಸ್ತವದಲ್ಲಿ ಈ ಹಾವು ತಂತಿಯಲ್ಲಿ ನೇತಾಡುತ್ತಿತ್ತು. ಆ ಹಾವನ್ನು ಕಂಡು ರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಯಿತು. ತಂಡ ಬಂದು ಹಾವನ್ನು ಹಿಡಿದಿದೆ. ಇದಾದ ನಂತರ ತಕ್ಷಣವೇ ಹಾವನ್ನು ಕಾಡಿಗೆ ಬಿಡಲಾಯಿತು.
ಇದನ್ನೂ ಓದಿ: Viral News: ಜೈಲಿಗೆ ಹಾಕಿ ಪ್ಲೀಸ್!; ಮನೆಯಲ್ಲಿ ಹೆಂಡತಿಯ ಕಾಟ ತಾಳಲಾರದೆ ಪೊಲೀಸರ ಬಳಿ ಬೇಡಿಕೊಂಡ ಗಂಡ
Shocking News: ಮೇಕಪ್ ಇಲ್ಲದೆ ಎದುರು ಬಂದ ಹೆಂಡತಿಗೆ ಡೈವೋರ್ಸ್ ನೀಡಿದ ಪತಿರಾಯ!