Viral Video: ವೃದ್ಧ ತಾಯಿ ಮೇಲೆ ಮನಬಂದಂತೆ ಥಳಿಸಿದ ಮಗ; ವಿಡಿಯೋ ವೈರಲ್​​​

ವೀಡಿಯೊದಲ್ಲಿ, ವೃದ್ಧೆ ತಾಯಿಯನ್ನು ಮಗ ಹಿಂಬಾಲಿಸಿಕೊಂಡು ಹೋಗಿ ಕೋಲಿನಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಬುಲಂದ್‌ಶಹರ್ ಪೊಲೀಸರಿಗೆ ಟ್ಯಾಗ್​ ಮಾಡಲಾಗಿದ್ದು, "ದಯವಿಟ್ಟು ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಿ" ಎಂದು ಬರೆಯಲಾಗಿದೆ.

Viral Video: ವೃದ್ಧ ತಾಯಿ ಮೇಲೆ ಮನಬಂದಂತೆ ಥಳಿಸಿದ ಮಗ; ವಿಡಿಯೋ ವೈರಲ್​​​

Updated on: Apr 03, 2024 | 6:39 PM

ಉತ್ತರಪ್ರದೇಶ: ಬುಲಂದ್‌ಶಹರ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ವೃದ್ಧ ತಾಯಿಯನ್ನು ಅಮಾನುಷವಾಗಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವ್ಯಕ್ತಿ ತನ್ನ ತಾಯಿಯನ್ನು ಹಿಂಬಾಲಿಸಿ ನಂತರ ಆಕೆಯ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆರೋಪಿ ಮಗನನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯ ವರದಿಗಳ ಪ್ರಕಾರ, ಸೇಲಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖೈರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನ್ಯೂಸ್ 1ಇಂಡಿಯಾಟ್ವೀಟ್‌ನಿಂದ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ವೃದ್ಧೆ ತಾಯಿಯ ಮೇಲೆ ಮಗ ಕೋಲಿನಿಂದ ಹಿಂಬಾಲಿಸಿಕೊಂಡು ಹೋಗಿ ಹೊಡೆಯುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಯುಪಿ ಪೊಲೀಸರು ಮತ್ತು ಬುಲಂದ್‌ಶಹರ್ ಪೊಲೀಸರಿಗೆ ಟ್ಯಾಗ್​ ಮಾಡಲಾಗಿದ್ದು, “ದಯವಿಟ್ಟು ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಿ” ಎಂದು ಬರೆಯಲಾಗಿದೆ. ತಕ್ಷಣ ಪೊಲೀಸರು ಆರೋಪಿ ದುರ್ಗೇಶ್ ಶರ್ಮಾ ಎಂಬಾತನನ್ನು ವಿಡಿಯೋ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಕೆಲಸದ ನಡುವೆ ಮಗುವಿನ ಆರೈಕೆಗೆ ಸಮಯವಿಲ್ಲವೆಂದು 3 ತಿಂಗಳ ಮಗುವನ್ನು ದತ್ತು ನೀಡಿದ ದಂಪತಿ

ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿ ಪೊಲೀಸರು “ಮೇಲಿನ ಪ್ರಕರಣದಲ್ಲಿ ಬಂದ ದೂರಿನ ಆಧಾರದ ಮೇಲೆ, ಸೇಲಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ” ಎಂದು ಬುಲಂದ್‌ಶಹರ್ ಪೊಲೀಸರು ತಮ್ಮ ರೀಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ