Viral Video: ವಿಮಾನ ಲ್ಯಾಂಡ್ ಆಗುವಂತೆ ಕೊಳಕ್ಕೆ ಇಳಿದ ಹಂಸ

ನೀವು ಹಂಸ ಹಾರಾಡುವುದನ್ನು ಮತ್ತು ನೀರಿನಲ್ಲಿ ಈಜುವುದನ್ನು ನೋಡಿರಬಹುದು. ಆದರೆ ಈ ಹಂಸ ವಿಚಿತ್ರ ರೀತಿಯಲ್ಲಿ ನದಿಗೆ ಇಳಿಯುವುದನ್ನು ತೋರಿಸುವ ವಿಡಿಯೋ ವೈರಲ್ ಆಗುತ್ತಿದೆ.

Viral Video: ವಿಮಾನ ಲ್ಯಾಂಡ್ ಆಗುವಂತೆ ಕೊಳಕ್ಕೆ ಇಳಿದ ಹಂಸ
ಕೊಳದಲ್ಲಿ ಹಂಸದ ಮೋಜು ಮಸ್ತಿ
Updated By: Rakesh Nayak Manchi

Updated on: Oct 16, 2022 | 4:01 PM

ನಿಸರ್ಗವು ಮಾನವನಿಗೆ ಸಮಾಜದಲ್ಲಿ ಬದುಕಲು ಬುದ್ಧಿ ಮತ್ತು ಬುದ್ಧಿವಂತಿಕೆಯನ್ನು ನೀಡಿದೆ. ಇದನ್ನು ಪ್ರಾಣಿ ಪಕ್ಷಿಗಳಲ್ಲಿಯೂ ಕಾಣಬಹುದು. ಕೆಲವು ಪ್ರಾಣಿ-ಪಕ್ಷಿಗಳ ಸ್ವಭಾವತಃ ವಿಚಿತ್ರವಾಗಿದ್ದರೂ ನೋಡುಗರ ಮನಸ್ಸಿಗೆ ಮುದ ನೀಡುತ್ತದೆ. ಇದಕ್ಕೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಕಿರು ಕ್ಲಿಪ್​ನಲ್ಲಿ ಮೋಜು ಮಾಡುತ್ತಿರುವ ಹಂಸವನ್ನು ಕಾಣಬಹುದು. ನೀವು ಹಂಸಗಳು ಹಾರಾಡುವುದನ್ನು ಮತ್ತು ನೀರಿನಲ್ಲಿ ಈಜುವುದನ್ನು ನೋಡಿರಬಹುದು. ಆದರೆ ಈ ಹಂಸ ಮಾತ್ರ ವಿಚಿತ್ರ ರೀತಿಯಲ್ಲಿ ಕೊಳಕ್ಕೆ ಇಳಿದು ಮೋಜು ಮಸ್ತಿ ಮಾಡುತ್ತಿದೆ. ನೋಡುಗರ ಮನಸ್ಸಿಗೂ ಮುದ ನೀಡುತ್ತಿದೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಕಾಣುವಂತೆ, ಉದ್ಯಾನದ ಮಧ್ಯದಲ್ಲಿರುವ ಕೊಳದ ಮೇಲ್ಮೈಯಲ್ಲಿ ಹಂಸವು ಇಳಿಯುವುದನ್ನು ನೀವು ನೋಡಬಹುದು. ವೇಗವಾಗಿ ಹಾರಿಕೊಂಡು ಬಂದ ಹಂಸ ಒಂದಷ್ಟು ದೂರದಿಂದ ನೀರಿನಲ್ಲಿ ತೆವಲಿಕೊಂಡು ಮುಂದಕ್ಕೆ ಬರುತ್ತದೆ. ವಿಡಿಯೋ ಕ್ಲಿಪ್ ಅನ್ನು ನೋಡಿದಾಗ, ಹಂಸವು ವಿಮಾನದಂತೆ ಇಳಿಯಲು ಪ್ರಯತ್ನಿಸುತ್ತಿರುವಂತೆ ತೋರುತ್ತದೆ. roysrolls1 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, 34 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಒಂದಷ್ಟು ಮಂದಿ ಕಾಮೆಂಟ್​ ಕೂಡ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ