Breathing Problem : ಹೋಟೆಲ್ವೊಂದಕ್ಕೆ ಊಟ ಮಾಡಲು ಬಂದಿದ್ದಾನೆ ವೃದ್ಧನೊಬ್ಬ. ಸ್ವಲ್ಪ ಹೊತ್ತಿನ ನಂತರ ವೃದ್ಧನಿಗೆ ಇದ್ದಕ್ಕಿದ್ದಂತೆ ಉಸಿರು ಸಿಕ್ಕಿಹಾಕಿಕೊಂಡಿದೆ. ಸಂಕಟದಿಂದ ಒದ್ದಾಡುತ್ತಿರುವಾಗ ಅಲ್ಲಿ ಕೆಲಸ ಮಾಡುತ್ತಿದ್ದ ಹದಿಹರೆಯದ ಹುಡುಗನೊಬ್ಬ ಸಮಯೋಚಿತವಾಗಿ ವರ್ತಿಸಿ ಅವನನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ Heimlich Maneuver ಎಂಬ ತಂತ್ರವನ್ನು ವೃದ್ಧನ ಮೇಲೆ ಪ್ರಯೋಗಿಸಿದ ತರುಣ ಆತನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾನೆ. 16 ವರ್ಷದ ಈ ಹುಡುಗ ಈ ಹೋಟೆಲ್ನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ವಿದ್ಯಾರ್ಥಿಯಾಗಿದ್ದಾನೆ. ನೆಟ್ಟಿಗರು ಇವನ ಸಮಯಪ್ರಜ್ಞೆಯನ್ನು ಕೊಂಡಾಡುತ್ತಿದ್ದಾರೆ.
ಇದನ್ನೂ ಓದಿ : Viral Video: ‘ಮೇಕೆಗೂ ಟಿಕೆಟ್ ಖರೀದಿಸಿದ್ದೇನೆ’; ನಮ್ಮ ದೇಶಕ್ಕೆ ಇಂಥ ಪ್ರಾಮಾಣಿಕ ನಾಯಕಿ ಬೇಕು ಎನ್ನುತ್ತಿರುವ ನೆಟ್ಟಿಗರು
ಈ ದೃಶ್ಯವು ಹೋಟೆಲ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಅನ್ನು ಗುಡ್ನ್ಯೂಸ್ ಮೂವ್‌ಮೆಂಟ್ ಎಂಬ ಇನ್ಸ್ಟಾಗ್ರಾಂ ಪುಟವು ಹಂಚಿಕೊಂಡಿದೆ. ಇದನ್ನು ಮೂರು ದಿನಗಳ ಹಿಂದೆ ಅಪ್ಲೋಡ್ ಮಾಡಲಾಗಿದ್ದು ಈತನಕ ಸುಮಾರು 2 ಮಿಲಿಯನ್ ಜನರು ನೋಡಿದ್ದಾರೆ. 93,000 ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಆಹಾರ ಸೇವಿಸುವಾಗ ಅಥವಾ ಇನ್ನ್ಯಾವುದೋ ಕಾರಣದಿಂದ ವ್ಯಕ್ತಿಗೆ ಉಸಿರುಗಟ್ಟಿದಾಗ ಹೈಮ್ಲಿಚ್ ತಂತ್ರವನ್ನು ಪ್ರಯೋಗಿಸಬಹುದಾಗಿದೆ. ವ್ಯಕ್ತಿಯ ಹೊಟ್ಟೆಯ ಮೇಲೆ ಒತ್ತಡವನ್ನು ಹೇರುವುದರ ಮೂಲಕ ಉಸಿರಾಟದಲ್ಲಿ ಉಂಟಾದ ಅಡೆತಡೆಯನ್ನು ಸರಿಪಡಿಸಬಹುದಾಗಿದೆ. ಈ ವಿಡಿಯೋ ನೋಡಿದ ಅನೇಕರು ಈ ತರುಣನಿಗೆ ಹಾರೈಸಿದ್ದಾರೆ. ನನಗೀಗ 57 ವರ್ಷ, ಅನೇಕ ಸಲ ನಾನೂ ಉಸಿರಾಟದ ತೊಂದರೆ ಅನುಭವಿಸಿದ್ದೇನೆ. ಆಗ ಈ ತಂತ್ರದ ಪ್ರಯೋಗವೂ ನನ್ನ ಮೇಲೆ ನಡೆದಿದೆ. ಹಾಗಾಗಿಯೇ ನಾನಿನ್ನೂ ಬದುಕಿದ್ದೇನೆ ಎಂದಿದ್ದಾರೆ ಒಬ್ಬರು.
ಇದೆಲ್ಲವನ್ನೂ ಹೊರಗಿನಿಂದ ನೋಡುತ್ತ ನಿಂತಿರುವ ಆ ಮಹಿಳೆಯ ಬಗ್ಗೆ ಕೋಪ ಬರುತ್ತಿದೆ. ಆಕೆ ತನ್ನ ಕಿವಿಯಂದ ಇಯರ್ಫೋನ್ ತೆಗೆದು ಆ್ಯಂಬುಲೆನ್ಸ್ಗೆ ಕರೆ ಮಾಡಬಾರದೆ? ಎಂದಿದ್ದಾರೆ ಒಬ್ಬರು. ದೇವರೇ ಧನ್ಯವಾದ! ಇತರರಂತೆ ಆತ ಸುಮ್ಮನೇ ನಿಂತು ನೋಡಲಿಲ್ಲ, ಸಮಯಪ್ರಜ್ಞೆಯಿಂದ ಮತ್ತು ತಿಳಿವಳಿಕೆಯಿಂದ ಆ ವೃದ್ಧನ ಪ್ರಾಣ ಕಾಪಾಡಿದ್ದಾನೆ, ಒಳ್ಳೆಯದಾಗಲಿ ಅವನಿಗೆ ಎಂದು ಅನೇಕರು ಹಾರೈಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:39 pm, Wed, 6 September 23