Viral Video: ಪಾರ್ಕಿಂಗ್​ನಲ್ಲಿದ್ದ ಬೈಕ್​ಗಳ ಮೇಲೆ ಕಾರು ಹತ್ತಿಸಿದ ಯುವತಿ, ಅಯ್ಯೋ ಅಕ್ಕಾ ನಿಧಾನ ಎಂದ ನೆಟ್ಟಿಗರು

|

Updated on: May 12, 2023 | 8:59 AM

ಹೆಣ್ಣುಮಕ್ಕಳು ಕಾರು, ಬೈಕ್ ಚಲಾಯಿಸುತ್ತಿದ್ದಾರೆ ಎಂದರೆ ಹುಡುಗರು ಕನಿಷ್ಠ 2 ಅಡಿಯಷ್ಟು ದೂರದಲ್ಲಿ ತಮ್ಮ ವಾಹನ ಓಡಿಸುತ್ತಾರೆ. ಎಲ್ಲಾ ಹೆಣ್ಣುಮಕ್ಕಳಿಗೆ ಡ್ರೈವಿಂಗ್ ಬರುವುದಿಲ್ಲ ಎಂದಲ್ಲ ಆದರೆ ಇಂತಹ ಕೆಲವು ಘಟನೆಗಳು ಅವರ ಮನಸ್ಸಿನಲ್ಲಿ ಉಳಿದುಬಿಟ್ಇಟಿರುತ್ತ್ತೀತವೆ.

Viral Video: ಪಾರ್ಕಿಂಗ್​ನಲ್ಲಿದ್ದ ಬೈಕ್​ಗಳ ಮೇಲೆ ಕಾರು ಹತ್ತಿಸಿದ ಯುವತಿ, ಅಯ್ಯೋ ಅಕ್ಕಾ ನಿಧಾನ ಎಂದ ನೆಟ್ಟಿಗರು
ಕಾರು
Image Credit source: Pipa News
Follow us on

ಹೆಣ್ಣುಮಕ್ಕಳು ಕಾರು, ಬೈಕ್ ಚಲಾಯಿಸುತ್ತಿದ್ದಾರೆ ಎಂದರೆ ಹುಡುಗರು ಕನಿಷ್ಠ 2 ಅಡಿಯಷ್ಟು ದೂರದಲ್ಲಿ ತಮ್ಮ ವಾಹನ ಓಡಿಸುತ್ತಾರೆ. ಎಲ್ಲಾ ಹೆಣ್ಣುಮಕ್ಕಳಿಗೆ ಡ್ರೈವಿಂಗ್ ಬರುವುದಿಲ್ಲ ಎಂದಲ್ಲ ಆದರೆ ಇಂತಹ ಕೆಲವು ಘಟನೆಗಳು ಅವರ ಮನಸ್ಸಿನಲ್ಲಿ ಉಳಿದುಬಿಟ್ಟಿರುತ್ತವೆ. ಇತ್ತೀಚೆಗೆ ಇಂತಹದೊಂದು ವಿಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಯುವತಿ ಇಂತಹದೊಂದು ಸಾಹಸ ಮಾಡಿದ್ದು, ಇದನ್ನು ನೋಡಿ ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಅದೇ ಸಮಯದಲ್ಲಿ, ಅನೇಕ ಜನರು ಯುವತಿ ಮೇಲೆ ತಮ್ಮ ಕೋಪವನ್ನು ಹೊರಹಾಕುತ್ತಿದ್ದಾರೆ.

ಯುಪಿಯ ಕಾನ್ಪುರದಲ್ಲಿ ನಡೆದ ಘಟನೆ ಇದಾಗಿದ್ದು, ಯುವತಿಯೊಬ್ಬಳು ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಬೈಕ್​ಗಳ ಮೇಲೆ ಕಾರುಹತ್ತಿಸಿದ್ದಾಳೆ. ಈ ವೀಡಿಯೊವನ್ನು @ItsRDil ಹೆಸರಿನ ಖಾತೆಯೊಂದಿಗೆ Twitter ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಅದೇ ಸಮಯದಲ್ಲಿ, ವೀಡಿಯೊ ವೈರಲ್ ಆದ ನಂತರ, ಜನರು ಅದರ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಮತ್ತಷ್ಟು ಓದಿ: 10 ಸಾವಿರ ಅಡಿ ಎತ್ತರದಿಂದ ಜಿಗಿಯುವಾಗ ಮೇಕ್​​ಅಪ್​ ಮಾಡಿಕೊಂಡ ಮಹಿಳೆ; ವಿಡಿಯೋ ವೈರಲ್

ಈ ಘಟನೆ ಸಂಭವಿಸಿದಾಗ ಕಾರಿನ ವೇಗ ಹೆಚ್ಚಿತ್ತು, ಏನಾಗುತ್ತಿದೆ ಎಂದು ಯಾರಿಗೂ ಅರಿವಾಗಿಲ್ಲ ಎಂದು ಒಬ್ಬರು ಹೇಳಿದ್ದಾರೆ, ಯುವತಿ ಇತ್ತೀಚೆಗಷ್ಟೇ ಕಾರು ಕಲಿತಿದ್ದಳು ಎನ್ನಲಾಗುತ್ತಿದೆ. ತಡರಾತ್ರಿ ಯಾವುದೋ ಕೆಲಸದ ನಿಮಿತ್ತ ಯುವತಿ ಮಾರುಕಟ್ಟೆಗೆ ಹೋಗಿದ್ದಳು, ಕಾರನ್ನು ಹಿಂಬಾಲಿಸುತ್ತಿದ್ದಳು, ಆ ಕಾರನ್ನು ಓವರ್ ಟೇಕ್ ಮಾಡಲು ಹೋಗಿ ವೇಗವದಲ್ಲಿ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಬೈಕ್​ಗಳ ಮೇಲೆ ಹತ್ತಿಸಿದ್ದಾಳೆ ಎನ್ನಲಾಗಿದೆ.

ನಿಮಗೆ ಚಾಲನೆ ಗೊತ್ತಿಲ್ಲದಿದ್ದಾಗ ವಾಹನವನ್ನು ಓಡಿಸಲೇಬಾರದು ಇಲ್ಲದಿದ್ದರೆ ಪಕ್ಕದಲ್ಲಿ ಡ್ರೈವಿಂಗ್ ಚೆನ್ನಾಗಿ ಬರುವ ವ್ಯಕ್ತಿಯನ್ನು ಕೂರಿಸಿಕೊಳ್ಳಬೇಕು.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ