ಮನುಷ್ಯರು ಎಂದ ಮೇಲೆ ಹೊಟ್ಟೆ ಹಸಿವನ್ನು ನೀಗಿಸಲು ಸೊಪ್ಪು, ತರಕಾರಿ, ಹಣ್ಣು ಹಂಪಲು ಹೀಗೆ ನಾನಾ ರೀತಿಯ ಆಹಾರಗಳನ್ನು ತಿನ್ನುತ್ತೇವೆ. ಆದರೆ ಕೆಲವರ ಆಹಾರ ಕ್ರಮಗಳು ಮಾತ್ರ ವಿಚಿತ್ರವೆನಿಸುತ್ತದೆ. ಎರೆಹುಳು, ಜಿರಳೆ, ಕಪ್ಪೆ, ಇರುವೆ ಹೀಗೆ ಕ್ರೀಮಿ ಕೀಟ, ಪ್ರಾಣಿ ಪಕ್ಷಿಗಳನ್ನು ತಿಂದು ಬದುಕುವವರು ಇದ್ದಾರೆ. ಇಂತಹವರನ್ನೆಲ್ಲಾ ನೋಡುವಾಗ ಈ ಭೂಮಿಯ ಮೇಲೆ ಎಂತೆಂತ ಜನರು ಇದ್ದಾರೆ ಎಂದೆನಿಸುತ್ತದೆ. ಆದರೆ ಈ ವ್ಯಕ್ತಿಯನ್ನು ನೋಡಿದಾಗ ಹೀಗೂ ಇರ್ತಾರ ಎಂದು ನಿಮಗೆ ಅನಿಸದೇ ಇರದು.
ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಮೊಳೆಗಳನ್ನು ಸಲೀಸಾಗಿ ತಿನ್ನುತ್ತಿದ್ದಾನೆ. ಈತನು ತಿನ್ನುವ ಪರಿಗೆ ಇವನದ್ದು ಹಲ್ಲೊ ಅಥವಾ ಮೆಷಿನೋ ಎಂದೇನಿಸಬಹುದು. ಈ ಅಸಾಮಿಯು ಮೊಳೆಗಳನ್ನು ಕಡ್ಲೆ ಬೀಜಗಳನ್ನು ತಿಂದಂತೆ ತಿನ್ನುವುದನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಜನಸ್ನೇಹಿ ನಿರಾಶ್ರಿತರ ಆಶ್ರಮ ಎನ್ನುವ ಪೇಜ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದ ಜೊತೆಗೆ ಉಕ್ಕಿನಾ ಮನುಷ್ಯ ಇವನೇ ಇರ್ಬೇಕು, ಇದು ಸಾಧ್ಯನಾ, ಇದರ ಹಿಂದಿನ ಸತ್ಯವೇನು ಎಂದು ಬರೆದುಕೊಳ್ಳಲಾಗಿದೆ. ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ಎರಡು ಲಕ್ಷ ಇಪ್ಪತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಈ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆ ಗೈದಿದ್ದಾರೆ.
ಇದನ್ನೂ ಓದಿ: ನೀನು ದೇವತೆ ತಾಯಿ, ಕೊಚ್ಚಿ ಹೋಗುತ್ತಿದ್ದ ಶ್ವಾನವನ್ನು ಕಾಪಾಡಿದ ಯುವತಿ
ಈ ವಿಡಿಯೋ ನೋಡಿದ ಬಳಕೆದಾರರೊಬ್ಬರು, ‘ಹೌದು ಇಂತಹ ಕೆಲವು ವಿಲಕ್ಷಣ ವ್ಯಕ್ತಿ ಗಳು ಇರುವುದು ಸತ್ಯ. ಇವರ ದೇಹ ರಚನೆ ಕೂಡ ನಮ್ಮಂತೆಯೇ ಸಹಜವಾಗಿದ್ದು ವೈಜ್ಞಾನಿಕ ಲೋಕಕ್ಕೂ ಸವಾಲಾಗಿದ್ದಾರೆ. ಇಂಜಿನ್ ಆಯಿಲ್ ಕುಡಿಯುವುದು, ಪೆಟ್ರೋಲ್, ಡೀಸೆಲ್,ಕುಡಿಯುವುದು, ಇಂತಹ ವಿಲಕ್ಷಣ ಸ್ವಭಾವದ ವ್ಯಕ್ತಿ ಗಳು ಬಹಳಷ್ಟಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಇವರು ಯಾರೋ ಮಾರಾಯ ಮೊಳೆ ನಾ ಮ್ಯಾಗಿ ತಿನ್ನೋ ಆಗೆ ಸಲಿಸ್ ಆಗಿ ತಿಂತಾನೆ ಎಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ