ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತಿರುವ ಬೆಂಗಳೂರಿನ ಸ್ಲಮ್‌ನಲ್ಲಿ ವಾಸಿಸುತ್ತಿರುವ 12 ವರ್ಷದ ಬಾಲಕ ನಾಗರಾಜ್ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಗುಡಿಸಲಿನಲ್ಲಿ ವಾಸಿಸುತ್ತಿದ್ದರೂ ಬಾಲಕನ ಐಎಎಸ್ ಅಧಿಕಾರಿಯಾಗುವ ಆಸೆ ನೆಟ್ಟಿಗರ ಮನಗೆದ್ದಿದೆ. ಪ್ರಸ್ತುತ ಆರನೇ ತರಗತಿಯಲ್ಲಿ ಓದುತ್ತಿರುವ ನಾಗರಾಜ ಕಲಿಕೆಯಲ್ಲಿ ಮುಂದಿದ್ದು, ಈ ವಯಸ್ಸಿನಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಜೀವನದ ಭಾಗವನ್ನಾಗಿಸಿದ್ದಾನೆ.
ಮಹಮ್ಮದ್ ಆಶಿಕ್ ಎಂಬ ಸೋಶಿಯಲ್ ಮೀಡಿಯಾ ಪ್ರಭಾವಿ ಈಪುಟ್ಟ ಬಾಲಕನ ಕುರಿತ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ “ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದರೂ, ಯಾವುದೇ ಬೇಸರವಿಲ್ಲ, ಮುಂದೊಂದು ದಿನ ಐಎಎಸ್ ಅಧಿಕಾರಿಯಾಗಿ ದೊಡ್ಡ ಮನೆ ಕಟ್ಟುವೇ, ಬಡವರಿಗೆ ಸಹಾಯ ಮಾಡುವೇ” ಎಂದು ಬಾಲಕ ಹೇಳಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಸ್ವಾತಂತ್ರ್ಯಪೂರ್ವದಲ್ಲೇ ಜುನಾಗಡ್ ನವಾಬನ ನಾಯಿ ಮದುವೆಗೆ ಆದ ಖರ್ಚು 2 ಕೋಟಿ ರೂ
ಈ ವಿಡಿಯೋವನ್ನು ಮಾರ್ಚ್ 16ರಂದು ಹಂಚಿಕೊಳ್ಳಲಾಗಿದ್ದು, 4 ದಿನಗಳಲ್ಲಿ 12.7 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಬಡತನದಲ್ಲೂ ಬಾಲಕ ಕಲಿಕೆಯ ಆಸಕ್ತಿ ಕಂಡು, ಐಎಎಸ್ ಆಗುವ ಕನಸು ಕಂಡು ‘ಶೀಘ್ರದಲ್ಲೇ ಕನಸು ನನಸಾಗಲಿ’ ಎಂದು ಸಾಕಷ್ಟು ನೆಟ್ಟಿಗರು ಹಾರೈಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ