ಭಾರೀ ಮಳೆಯ ನಡುವೆ ವ್ಯಕ್ತಿಯೊಬ್ಬರು ಊಟ ಮಾಡುತ್ತಿರುವ ಹೃದಯವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಂದಗಿ ಗುಲ್ಜಾರ್ ಹೈ ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಕಣ್ಣಿನಲ್ಲಿ ನೀರು ಬರುವುದು ಖಂಡಿತ, ಆ ವ್ಯಕ್ತಿ ಮಳೆಯಲ್ಲಿ ತನ್ನ ಆಹಾರವನ್ನು ವ್ಯರ್ಥವಾಗದಂತೆ ಭದ್ರವಾಗಿ ಕಾಪಾಡಿಕೊಳ್ಳತ್ತಾನೆ. ತನ್ನ ಆಹಾರ ಪ್ಲೇಟ್ ಅನ್ನು ಸ್ಕೂಟರ್ ಅಡಿಯಲ್ಲಿ ಇರಿಸಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಜಿಂದಗಿ ಗುಲ್ಜಾರ್ ಹೈ ಎಂಬ ಪುಟ ಹಂಚಿಕೊಂಡಿದೆ. ಈ ಸಣ್ಣ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿಯು ಸುರಿಯುತ್ತಿರುವ ಮಳೆಯಲ್ಲಿ ಊಟವನ್ನು ಸೇವಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ತನ್ನ ಊಟ ಮಳೆಗೆ ಕೆಡದಂತೆ ರಕ್ಷಿಸಿಸಲು ತಟ್ಟೆಯನ್ನು ಸ್ಕೂಟರ್ ಅಡಿಯಲ್ಲಿ ಇಡುವುದುನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ಬದುಕಿನಲ್ಲಿ ಅದೆಷ್ಟೋ ಜನ ಅನ್ನ ಇಲ್ಲದೆ ಇರುವುದಕ್ಕೆ ಇದು ಉದಾಹರಣೆ ಆಗಿದೆ. ಈ ವಿಡಿಯೋದಲ್ಲಿ ಆತನಿಗೆ ಅನ್ನ ಬೆಲೆ ಏನು? ಇದರ ಜೊತೆಗೆ ಅವನಿಗೆ ಎಷ್ಟು ಹಸಿವಾಗಿರಬೇಕು ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹದು.
बड़ी शिकायत थी तुझसे ऐ ज़िन्दगी
लेकिन जब ये मंजर देखा तो सारी शिकायत छोड़ दी हमने ?? pic.twitter.com/gJ651OSCJn— ज़िन्दगी गुलज़ार है ! (@Gulzar_sahab) September 11, 2022
ಓ ದೇವರೇ ನಾನು ನಿನ್ನ ಏನೆಲ್ಲ ಕೇಳಿರಬಹದು ಗೊತ್ತಿಲ್ಲ, ಆದರೆ ಈ ದೃಶ್ಯವನ್ನು ನೋಡಿದ ನಂತರ ನಾನು ಬೇಡಿದೆಲ್ಲವನ್ನು ಈಡೇರಿಸದಿದ್ದರು ಪರವಾಗಿಲ್ಲ, ಆದರೆ ಯಾರಿಗೂ ಹಸಿವಿನ ಸಂಕಷ್ಟ ನೀಡಬೇಡ ಎಂದು ಈ ಪೋಸ್ಟ್‌ನ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿ ಅನೇಕ ಕಾಮೆಂಟ್ ಮಾಡಿದ್ದಾರೆ, ಜೊತೆಗೆ ಶೇರ್ ಮಾಡಿದ್ದಾರೆ. ನಮ್ಮ ದೇಶದಲ್ಲಿ ಈಗಲೂ ಇಂತಹ ಸ್ಥಿತಿ ಇದೆ ಎಂಬುದಕ್ಕೆ ಇದು ಸಾಕ್ಷಿ ಎಂದಿದ್ದಾರೆ.
Published On - 4:35 pm, Tue, 13 September 22