Viral Video: ಕಾಡಾನೆಯನ್ನು ಕಾರಿನಲ್ಲಿ ಅಡ್ಡಗಟ್ಟಿ, ಓಡಿಸಿಕೊಂಡು ಹೋದ ಟಿಕ್​ಟಾಕರ್; ವಿಡಿಯೋ ನೋಡಿ ಸಿಟ್ಟಿಗೆದ್ದ ನೆಟ್ಟಿಗರು

| Updated By: ಸುಷ್ಮಾ ಚಕ್ರೆ

Updated on: Feb 05, 2022 | 2:41 PM

ರಾತ್ರಿ ಖಾಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಆನೆಯನ್ನು ಹೆದರಿಸಿದ ಟಿಕ್​ಟಾಕರ್ ತನ್ನ ಕಾರಿನಿಂದ ಆ ಆನೆಯನ್ನು ಓಡಿಸಿಕೊಂಡು ಹೋಗಿದ್ದಾರೆ. ಇದರಿಂದ ಆ ಆನೆ ಭಯಭೀತವಾಗಿರುವುದು ವಿಡಿಯೋದಲ್ಲಿ ಗೋಚರವಾಗುತ್ತಿದೆ.

Viral Video: ಕಾಡಾನೆಯನ್ನು ಕಾರಿನಲ್ಲಿ ಅಡ್ಡಗಟ್ಟಿ, ಓಡಿಸಿಕೊಂಡು ಹೋದ ಟಿಕ್​ಟಾಕರ್; ವಿಡಿಯೋ ನೋಡಿ ಸಿಟ್ಟಿಗೆದ್ದ ನೆಟ್ಟಿಗರು
ಆನೆಯ ವಿಡಿಯೋ
Follow us on

ಕೆಲವು ದಿನಗಳ ಹಿಂದೆ ಶ್ರೀಲಂಕಾದಲ್ಲಿ ನಡೆದ ಘಟನೆಯೊಂದು ಇಂಟರ್​ನೆಟ್​ನಲ್ಲಿ (Online) ಬಿರುಗಾಳಿಯನ್ನೇ ಎಬ್ಬಿಸಿದೆ. ಟಿಕ್​ಟಾಕ್  (TikTok) ವಿಡಿಯೋ ಮಾಡಿ ಪ್ರಸಿದ್ಧಿಯಾಗಿದ್ದ ಟಿಕ್‌ಟಾಕರ್ ಒಬ್ಬ ತನ್ನ ಕಾರಿನಲ್ಲಿ ಆನೆಯನ್ನು ಬೆನ್ನತ್ತಿ ಹೋಗಿ, ಅದಕ್ಕೆ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗಿದೆ. ಕಾಡಿನ ಸಮೀಪವಿರುವ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ಮಧ್ಯರಾತ್ರಿ ಕಾಡಾನೆಗೆ ಕಿರುಕುಳ ನೀಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋವನ್ನು ಮೊದಲು @shashikagimhandha ಎಂಬ ಬಳಕೆದಾರರು ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದರು. ಇದು ವೈರಲ್ ಆದ ನಂತರ ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋವನ್ನು ಮತ್ತೆ ಹಂಚಿಕೊಳ್ಳಲಾಗಿದೆ.

‘ಕಾಡು ಪ್ರಾಣಿಗಳಿಗೆ ಈ ರೀತಿ ಶಿಕ್ಷೆ ನೀಡುವುದು ಸರಿಯಲ್ಲ ಎಂದು ನಿಮಗೆ ಇನ್ನೂ ಅರ್ಥವಾಗದಿದ್ದರೆ ನಿಮ್ಮ ತಲೆಯಲ್ಲಿ ಮೆದುಳೇ ಇಲ್ಲ ಎಂದು ಅರ್ಥ. ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯಬೇಕೆಂಬ ಕಾರಣಕ್ಕೆ ವನ್ಯಜೀವಿಗಳಿಗೆ ಹಿಂಸೆ ನೀಡಬೇಡಿ. ಅದು ಸರಿಯಲ್ಲ. ಈ ರೀತಿ ಹಿಂಸೆ ಮಾಡಿದ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಟಿಕ್‌ಟಾಕ್ ಬಳಕೆದಾರರು ತಮ್ಮ ಕಾರಿನೊಂದಿಗೆ ಕಾಡಾನೆಯನ್ನು ಹೆದರಿಸುತ್ತಿರುವುದನ್ನು ನೋಡಬಹುದು. ರಾತ್ರಿ ಖಾಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಆನೆಯನ್ನು ಹೆದರಿಸಿದ ಟಿಕ್​ಟಾಕರ್ ತನ್ನ ಕಾರಿನಿಂದ ಆ ಆನೆಯನ್ನು ಓಡಿಸಿಕೊಂಡು ಹೋಗಿದ್ದಾರೆ. ಇದರಿಂದ ಆ ಆನೆ ಭಯಭೀತವಾಗಿರುವುದು ವಿಡಿಯೋದಲ್ಲಿ ಗೋಚರವಾಗುತ್ತಿದೆ.

ಈ ವೀಡಿಯೊ ಶ್ರೀಲಂಕಾದ ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಸೊಸೈಟಿಯ ಗಮನ ಸೆಳೆದಿದ್ದು, ಈ ಆತಂಕಕಾರಿ ಘಟನೆಯ ಎಲ್ಲಾ ವಿವರಗಳನ್ನು ಅವರು ವನ್ಯಜೀವಿ ಸಂರಕ್ಷಣಾ ಇಲಾಖೆಗೆ ಸಲ್ಲಿಸಿದ್ದು, ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:Viral Video: ಸಿಎಂ ಜಗನ್ ಮೋಹನ್ ರೆಡ್ಡಿ ಬಂಗಿ ಜಂಪ್ ಮಾಡಿದ ವಿಡಿಯೋ ವೈರಲ್

Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?

Published On - 2:10 pm, Sat, 5 February 22