Viral Video: ‘ಚೈಲ್ಡ್ಸ್ ಪ್ಲೇ’ ಚಲನಚಿತ್ರ ಸರಣಿಯ ಚುಕ್ಕಿ ವೇಷಧರಿಸಿದ ಕುಬ್ಜ ವ್ಯಕ್ತಿ ದರೋಡೆಗೆ ಯತ್ನಿಸುವ ವಿಡಿಯೋ ವೈರಲ್

| Updated By: Rakesh Nayak Manchi

Updated on: Jul 03, 2022 | 1:08 PM

ಭಯಾನಕ ಚಲನಚಿತ್ರ ಸರಣಿ 'ಚೈಲ್ಡ್ಸ್ ಪ್ಲೇ' ನಿಂದ 'ಚುಕ್ಕಿ' ವೇಷವನ್ನು ಧರಿಸಿದ್ದ ಕುಬ್ಜತೆ ಹೊಂದಿರುವ ವ್ಯಕ್ತಿ ರೈಲಿನ ಒಳಗೆ ಪ್ರವೇಶಿಸಿ ಮಹಿಳೆಯ ಬ್ಯಾಗ್​ ದರೋಡೆ ಮಾಡಲು ಪ್ರಯತ್ನಿಸಿದ್ದಾನೆ. ಇದರ ವಿಡಿಯೋ ಇಲ್ಲಿದೆ ನೋಡಿ.

Viral Video: ಚೈಲ್ಡ್ಸ್ ಪ್ಲೇ ಚಲನಚಿತ್ರ ಸರಣಿಯ ಚುಕ್ಕಿ ವೇಷಧರಿಸಿದ ಕುಬ್ಜ ವ್ಯಕ್ತಿ ದರೋಡೆಗೆ ಯತ್ನಿಸುವ ವಿಡಿಯೋ ವೈರಲ್
ಚುಕ್ಕಿ ವೇಷ ಧರಿಸಿ ದರೋಡೆಗೆ ಯತ್ನ
Follow us on

ವೈರಲ್ ವಿಡಿಯೋ: ನ್ಯೂಯಾರ್ಕ್ ನಗರದ ಸುರಂಗಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರನ್ನ ಭಯಭೀತರನ್ನಾಗಿಸುವ ಘಟನೆಯೊಂದು ನಡೆಯಿತು. ಭಯಾನಕ ಚಲನಚಿತ್ರ ಸರಣಿ ‘ಚೈಲ್ಡ್ಸ್ ಪ್ಲೇ’ ನಿಂದ ‘ಚುಕ್ಕಿ’ ವೇಷವನ್ನು ಧರಿಸಿದ್ದ ಕುಬ್ಜತೆ ಹೊಂದಿರುವ ವ್ಯಕ್ತಿ ರೈಲಿನ ಒಳಗೆ ಪ್ರವೇಶಿಸಿ ಮಹಿಳೆಯ ಬ್ಯಾಗ್​ ಅನ್ನು ದರೋಡೆ ಮಾಡಲು ಪ್ರಯತ್ನಿಸಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ  ಇದರ ವಿಡಿಯೋ ವೈರಲ್ (Video Viral) ಆಗುತ್ತಿದ್ದು, 15 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 415k ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Viral Video: ಅಲಿಗೇಟರ್ ಮೊಸಳೆಯನ್ನು ಮದುವೆಯಾದ ಮೆಕ್ಸಿಕೋ ಮೇಯರ್, ಡಾನ್ಸ್ ಮಾಡುತ್ತಾ ಮೊಸಳೆಗೆ ಕಿಸ್ ಕೊಟ್ಟ ಮೇಯರ್

ಚುಕ್ಕಿ ವೇಷ ಧರಿಸಿದ್ದ ಕುಬ್ಜ ವ್ಯಕ್ತಿ ಮಹಿಳೆಯೊಬ್ಬರ  ಬ್ಯಾಗನ್ನು ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ವಿರೋಧಿಸಿದಾಗ, ಆ ವ್ಯಕ್ತಿ ಆಕ್ರಮಣಕಾರಿಯಾಗಿ ಆಕೆಯ ಕಾಲನ್ನು ಹಿಡಿದುಕೊಂಡು ಆಕೆಯ ಚೀಲವನ್ನು ಹಿಡಿದುಕೊಂಡಿದ್ದಾನೆ. ಈ ವೇಳೆ ಮಹಿಳೆ ತನ್ನ ಬ್ಯಾಗ್ ಬಿಡುವಂತೆ ಮನವಿ ಮಾಡಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ಹಾಗೋ ಹೀಗೋ ಕೊನೆಯಲ್ಲಿ ತನ್ನ ಬ್ಯಾಗ್ ಅನ್ನು ವೇಷಧಾರಿ ವ್ಯಕ್ತಿಯ ಕೈಯಿಂದ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವಿಡಿಯೋದಲ್ಲಿ ಕಾಣುವಂತೆ, ವೇಷಧಾರಿ ವ್ಯಕ್ತಿ ಮಹಿಳೆಯ ಬ್ಯಾಗ್​ ಅನ್ನು ಕಸಿದುಕೊಳ್ಳಲು ಯತ್ನಿಸಿದಾಗ ಆಕೆಯ ಸುತ್ತ ಕುಳಿತಿದ್ದ ಪ್ರಯಾಣಿಕರು ಚುಕ್ಕಿಯ ದಾಳಿಯಿಂದ ತಪ್ಪಿಸಿಕೊಳ್ಳಲು ತಮ್ಮ ಆಸನಗಳಿಂದ ಎದ್ದು ಬೇರೆಕಡೆಗೆ ಹೋಗುವುದನ್ನು ಕಾಣಬಹುದು. ಕೂಡಲೇ ಚುಕ್ಕಿ ಮಹಿಳೆಯ ಕಾಲು ಹಿಡಿದಿದ್ದು, ಈ ವೇಳೆ ಮಹಿಳೆ ಅವಾಚ್ಯಪದಗಳನ್ನು ಹೇಳಿಕೊಂಡು ಬ್ಯಾಗ್ ಬಿಡುವಂತೆ ಹಾಗೂ ತನ್ನಿಂದ ನಿನಗೆ ಏನು ತೊಂದರೆಯಾಗಿದೆ ಎಂದು ಹೇಳುವುದನ್ನು ಕೇಳಿಸಬಹುದು. ಕೊನೆಯಲ್ಲಿ ಚುಕ್ಕಿಯ ಕೈಯಿಂದ ಬ್ಯಾಗ್ ಬಿಡಿಸಿಕೊಂಡ ಮಹಿಳೆ ಅಲ್ಲಿಂದ ಎದ್ದು ಬೇರೆಕಡೆ ಹೋಗಿದ್ದಾರೆ.

ಇದನ್ನೂ ಓದಿ: Viral Video: ಸೂಪರ್​ಫಾಸ್ಟ್​ ವೇಗದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವ ಉದ್ಯೋಗಿ, ಅಸಲಿ ಬುಲೆಟ್ ಟ್ರೇನ್ ಎಂದ ಇಂಟರ್ನೆಟ್

ಮಹಿಳೆ ಬೇರೆಕಡೆಗೆ ಹೋದಾಗ ಬೆನ್ನು ಬಿಡದ ಆತ ಆಕೆಯ ಹಿಂದೆ ಓಡಿದ್ದಾನೆ. ಈ ವೇಳೆ ಮಧ್ಯಪ್ರವೇಶಿಸಿದ ಪ್ರಯಾಣಿಕರೊಬ್ಬರು ಕುಬ್ಜ ವ್ಯಕ್ತಿ ಹಾಕಿದ್ದ ಮುಖವಾಡವನ್ನು ಎಳೆದು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಆ ವ್ಯಕ್ತಿ ತನ್ನ ಮುಖವನ್ನು ಮರೆಸಿಕೊಂಡಿದ್ದು, ಕ್ಯಾಮರಾ ಚಿತ್ರೀಕರಣ ಕೂಡ ನಿಲ್ಲಿಸಲಾಗಿದೆ.

 

ಇದನ್ನೂ ಓದಿ: Viral Video: ಮಂಜುಗಡ್ಡೆಯ ಆಕಾರಕ್ಕೆ ತಿರುಗಿದ ಶಿವಲಿಂಗ, ಪವಾಡ ಕಣ್ತುಂಬಿಕೊಳ್ಳಲು ಶಿವನ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಭಕ್ತರು

Published On - 1:08 pm, Sun, 3 July 22