Viral Video: ಓರ್ವನಿಗಾಗಿ ಇಬ್ಬರು ಯುವತಿಯರ ಫೈಟಿಂಗ್​; ರಸ್ತೆಯಲ್ಲೇ ಜಗಳವಾಡಿದ ವಿಡಿಯೋ ವೈರಲ್

ಯುವಕನಿಗಾಗಿ ಇಬ್ಬರು ಯುವತಿಯರು ಹೊಡೆದಾಡಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Viral Video: ಓರ್ವನಿಗಾಗಿ ಇಬ್ಬರು ಯುವತಿಯರ ಫೈಟಿಂಗ್​; ರಸ್ತೆಯಲ್ಲೇ ಜಗಳವಾಡಿದ ವಿಡಿಯೋ ವೈರಲ್
Edited By:

Updated on: Oct 27, 2021 | 1:21 PM

ಯುವಕನಿಗಾಗಿ ಇಬ್ಬರು ಯುವತಿಯರು ಹೊಡೆದಾಡಿಕೊಂಡ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಲಕ್ನೋದ ಬಾರಾಬಿರ್ವಾ ಚೌರ್ಗೆ ಹತ್ತಿರದ ಹೊಟೆಲ್ ಎದುರು ಇಬ್ಬರು ಯುವತಿಯರು ಕಿತ್ತಾಡಿಕೊಂಡಿದ್ದಾರೆ. ಕಳೆದ ಸೋಮವಾರ ರಾತ್ರಿ ಘಟನೆ ನಡೆದಿದೆ. ಓರ್ವ ಯುವಕನನ್ನು ಪ್ರೀತಿಸುತ್ತಿದ್ದ ಇಬ್ಬರು ಯುವತಿಯರು ರಸ್ತೆಯ ಮಧ್ಯದಲ್ಲೇ ನಿಂತು ಜಗಳವಾಡಿದ ದೃಶ್ಯ ಇದೀಗ ವೈರಲ್ ಆಗಿದೆ.

ಕಾರಿನಲ್ಲಿ ಬಂದಿದ್ದ ಯುವತಿ ಯುವಕನಿಗಾಗಿ ರಸ್ತೆಯಲ್ಲಿ ಕಾಯುತ್ತಾ ನಿಂತಿದ್ದಳು. ಅದೇ ವೇಳೆ ಯುವಕನು ಬೇರೊಂದು ಯುವತಿಯ (Ex Girlfriend) ಜೊತೆ ಹೊಟೆಲ್​ನಿಂದ ಹೊರಬರುತ್ತಿರುವ ದೃಶ್ಯ ಕಾರಿನಲ್ಲಿ ಕುಳಿತಿದ್ದ ಯುವತಿಯ ಕಣ್ಣಿಗೆ ಬಿದ್ದಿದೆ. ರಾಬಿನ್ ಎಂಬಾತ ತನ್ನ ಹೊಸ ಗೆಳತಿ ಜೊತೆ ಹೊಟೆಲ್​ನಿಂದ ಹೊರ ಬಂದಿದ್ದಾನೆ. ಹಳೆ ಗೆಳತಿ (ಮಾಜಿ ಗೆಳತಿ) ದೃಶ್ಯವನ್ನು ನೋಡಿದ್ದೇ ಜಗಳಕ್ಕೆ ನಿಂತಿದ್ದಾಳೆ. ಹೊಡೆದಾಡಿಕೊಳ್ಳುವವರೆಗೆ ಇಬ್ಬರ ಜಗಳ ಮುಂದುವರೆದಿದೆ.

ತನ್ನ ಪ್ರಿಯತಮ ಹೊಟೆಲ್​ನಲ್ಲಿ ಬೇರೊಂದು ಯುವತಿಯ ಜೊತೆ ಇದ್ದಾನೆ ಎಂಬ ವಿಷಯ ತಿಳಿದಿದ್ದ ಯುವತಿ ನೇರವಾಗಿ ಸ್ಥಳಕ್ಕೆ ಬಂದಿಳಿದು ಜಗಳಕ್ಕೆ ನಿಂತಿದ್ದಾಳೆ. ಇಬ್ಬರು ಯುವತಿಯರ ನಡುವೆ ಜಗಳ ಹೊಡೆದಾಟದವರೆಗೆ ಮುಂದುವರೆದಿದೆ. ರಾಬಿನ್​ ಹೊಸ ಗೆಳತಿ ಮತ್ತೋರ್ವ ಯುವತಿಯ ಮೇಲೆ ಹಲ್ಲೆ ನಡೆಸಿದರ ಪರಿಣಾಮ ಆಕೆ ಎಚ್ಚರ ತಪ್ಪಿ ಕೆಳ ಬಿದ್ದಿದ್ದಾಳೆ. ಇದರ ಪರಿಣಾಮ ಹಲ್ಲೆಗೊಳಗಾದ ರಾಬಿನ್​ ಹಳೆ ಗೆಳತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಬಿನ್​ನ ಹಳೆ ಗೆಳತಿ ಎಚ್ಚರವಾದ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಹೊಸ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸ ಗೆಳತಿ ಮತ್ತು ಪ್ರಿಯಕರ ಮದ್ಯ ಸೇವನೆ ಮಾಡಿದ್ದರು. ಮಾಜಿ ಗೆಳತಿಯ ಮೇಲೆ ಇಬ್ಬರೂ ಸಹ ದಾಳಿ ನಡೆಸಿದ್ದಾರೆ. ಈ ಹಿಂದೆ ಅಕ್ಟೋಬರ್ 10ರಂದು ಮಾಜಿ ಗೆಳತಿ ರಾಬಿನ್ ಮೇಲೆ ದೂರು ದಾಖಲಿಸಿದ್ದಳು. ಈತ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ನೀಡಿದ್ದಳು. ಇದೀಗ ಇಬ್ಬರ ಜಗಳದಿಂದ ಓರ್ವರನ್ನು ಬಂಧಿಸಲಾಗಿದೆ, ಮತ್ತೋರ್ವಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬ ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ:

Video: ಮದುವೆಗಾಗಿ ದೇವಸ್ಥಾನಕ್ಕೆ ಬಂದ 2 ಕುಟುಂಬಗಳ ಮಧ್ಯೆ ಹೊಡೆದಾಟ; ವಧುವನ್ನು ತಪ್ಪಿಸಲು ಹೋಗಿ ವರನಿಗೆ ಗಾಯ

ಹಾವೇರಿ: ಆಕಸ್ಮಿಕ ಬೆಂಕಿ ಅವಘಡ; ಸುಟ್ಟು ಕರಕಲಾದ ಮನೆ