ವಾರಣಾಸಿಯಲ್ಲಿ (Varanasi) ಭಿಕ್ಷೆ ಬೇಡುತ್ತಾ ಕುಳಿತಿದ್ದ ಮಹಿಳೆಯ (Begging Women) ಇಂಗ್ಲೀಷ್ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್ ವೈರಲ್ ಆಗಿದೆ. ಸ್ವಾತಿ ಎಂಬ ಮಹಿಳೆ ಬೀದಿಗಳಲ್ಲಿ ಕುಳಿತುಕೊಂಡಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಕಂಪ್ಯೂಟರ್ ಸೈನ್ಸ್ (Computer Science) ಪದವೀಧರೆಯಾದ ಮಹಿಳೆ ಸ್ವಾತಿ ಇದೀಗ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದಾಳೆ. ಈ ವಿಡಿಯೊವನ್ನು ಬನಾರಸ್ ಹಿಂದು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಶಾರದಾ ಅವನೀಶ್ ತ್ರಿಪಾಠಿ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಕಂಪ್ಯೂಟರ್ ಸೈನ್ ಓದಿ, ನಿರರ್ಗಳವಾಗಿ ಇಂಗ್ಲೀಷ್ (Speaking English) ಮಾತನಾಡುವ ಸ್ವಾತಿ ಭಿಕ್ಷುಕಿ ಆಗಿದ್ದು ಹೇಗೆ?
ವಿಡಿಯೊ ಕ್ಲಿಪ್ನಲ್ಲಿ ಗಮನಿಸುವಂತೆ ನಾನು ದಕ್ಷಿಣ ಭಾರತದವಳು ಎಂದು ಸ್ವಾತಿ ಹೇಳಿದ್ದಾಳೆ. ನನ್ನ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ದೇಹದ ಬಲಭಾಗವು ಪಾರ್ಶ್ವವಾಯುವಿಗೆ ಒಳಗಾಗಾಯಿತು. ಮೂರು ವರ್ಷಗಳಿಂದ ವಾರಣಾಸಿಯ ಘಾಟ್ಗಳಲ್ಲಿ ವಾಸುಸುತ್ತಿದ್ದೇನೆ, ಯಾರಾದರೂ ನನಗೆ ಉದ್ಯೋಗ ಕೊಡಿ ಎಂದು ಹೇಳುತ್ತಿರುವುದನ್ನು ನೋಡಬಹುದು.
ಅಸ್ಸಿ ಘಾಟ್ನಲ್ಲಿ ವಾಸವಾಗಿರುವ ಮಹಿಳೆ ಸ್ವಾತಿ ಕಂಪ್ಯೂಟರ್ ಸೈನ್ಸ್ ಪದವೀಧರೆ. ಮಗುವಿಗೆ ಜನ್ಮ ನೀಡಿದ ನಂತರ ಆಕೆಯ ಬಲಭಾಗವು ಪಾರ್ಶ್ವವಾಯುವಿಗೆ ಒಳಗಾಯಿತು. ಮೂರು ವರ್ಷಗಳಿಂದ ವಾರಣಾಸಿಯಲ್ಲಿ ನೆಲೆಸಿದ್ದಾಳೆ. ಅವಳಿಗೆ ಆರ್ಥಿಕ ಸ್ವಾಂತ್ರ್ಯಬೇಕು, ಅವರು ಯಾರಿಂದಲೂ ಹಣ ಪಡೆಯಲು ಬಯಸುವುದಿಲ್ಲ, ಆದರೆ ಉದ್ಯೋಗ ಸಿಗುತ್ತಿಲ್ಲ. ಅವರು ಇಂಗ್ಲೀಷ್ನಲ್ಲಿ ನಿರರ್ಗಳವಾಗಿ ಮಾತನಾಡುತ್ತಾಳೆ. ದಯವಿಟ್ಟು ಅವರಿಗೆ ಸಹಾಯ ಮಾಡಿ ಎಂದು ವಿದ್ಯಾರ್ಥಿನಿ ತ್ರಿಪಾಠಿ ಶೀರ್ಷಿಕೆ ನೀಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 58,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಸ್ವಾತಿ ಜೀವನದಲ್ಲಿ ನಡೆದ ಘಟನೆ ಕೇಳಿ ನೆಟ್ಟಿಗರ ಕಣ್ತುಂಬಿ ಬಂದಿದೆ. ಆಕೆಗೆ ಕೆಲಸ ಕೊಡಲು ಯಾರಾದರೂ ಮುಂದೆ ಬರುತ್ತಾರೆ ಎಂಬ ನಿರೀಕ್ಷೆಯೊಂದಿಗೆ ನೆಟ್ಟಿಗರು ವಿಡಿಯೊ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
Published On - 11:50 am, Wed, 24 November 21