ಕ್ರೂರ ಪ್ರಾಣಿಗಳ ಜಾತಿಗೆ ಸೇರಿರುವ ಹುಲಿಗಳು ಬೇಟೆಯಲ್ಲಿ ಪಳಗಿರುವ ಪ್ರಾಣಿಗಳು ಎನ್ನುವುದು ಗೊತ್ತಿರುವ ವಿಚಾರ. ಚೂಪಾದ ಉಗುರುಗಳಿಂದ ಎದುರಿಗಿರುವ ಪ್ರಾಣಿಯ ಮೇಲೆ ಎರಗಿದರೆ ಆ ಪ್ರಾಣಿಯ ಕಥೆ ಮುಗಿದ್ದಂತೆ. ಬೇಟೆಯ ವಿಚಾರದಲ್ಲಿ ಈ ಕ್ರೂರ ಪ್ರಾಣಿಗಳನ್ನು ಮೀರಿಸುವಂತಿಲ್ಲ. ಆದರೆ ಕೆಲವೊಮ್ಮೆ ಕ್ರೂರ ಪ್ರಾಣಿಗಳು ಬೇಟೆಯಾಡಿದ ಪ್ರಾಣಿಯನ್ನು ತಿನ್ನುವ ಭರದಲ್ಲಿ ಎಡವಟ್ಟು ಮಾಡಿಕೊಳ್ಳುತ್ತವೆ. ಇದೀಗ ಹುಲಿಯೊಂದರ ಚೂಪಾದ ಹಲ್ಲಿಗೆ ಮೂಳೆಯೊಂದು ಸಿಲುಕಿಕೊಂಡು ಒದ್ದಾಡುತ್ತಿದ್ದು, ಕೊನೆಗೆ ಪಶುವೈದ್ಯರು ಮೂಳೆಯನ್ನು ತೆಗೆಯುವಲ್ಲಿ ಯಶಸ್ವಿಯಾಗಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸೈನ್ಸ್ ಗರ್ಲ್ ಎನ್ನುವ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದ ಪ್ರಾರಂಭದಲ್ಲಿ ಹುಲಿಯ ಹಲ್ಲಿಗೆ ಪ್ರಾಣಿ ಮೂಳೆಯೊಂದು ಸಿಲುಕಿಕೊಂಡಿರುವುದನ್ನು ನೋಡಬಹುದು.
Vet removing a bone stuck to a tigers tooth
pic.twitter.com/UT9mgmgG4k— Science girl (@gunsnrosesgirl3) April 12, 2024
ಇದನ್ನೂ ಓದಿ: ವಿಚಿತ್ರ ನಂಬಿಕೆ; ತಮ್ಮ ಇಚ್ಛೆಗೆ ತಕ್ಕ ಗಂಡ ಸಿಗಲು ಯುವತಿಯರು ಇಲ್ಲಿ ಬ್ರಾ ನೇತು ಹಾಕಿ ಹೋಗುತ್ತಾರೆ!
ಕೊನೆಗೆ ಪಶುವೈದ್ಯರು ಹುಲಿಯ ಬಾಯಿಯನ್ನು ತೆರೆದು ಹಲ್ಲಿಗೆ ಸಿಲುಕಿಕೊಂಡಿರುವ ಮೂಳೆಯನ್ನು ಸುತ್ತಿಗೆಯ ಸಹಾಯದಿಂದ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಡಿಯೋವೊಂದು 18.8 ಮಿಲಿಯನ್ ಗಟ್ಟಲೇ ವೀಕ್ಷಣೆಗಳನ್ನು ಕಂಡಿದ್ದು ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ. ಪಶುವೈದ್ಯರ ಈ ಧೈರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ