Video Viral: ಮೀನುಗಳ ಮಳೆ; ಆಕಾಶದಿಂದ ಮೀನುಗಳು ಬಿದ್ದು ಒದ್ದಾಡುತ್ತಿರುವ ವಿಡಿಯೋ ವೈರಲ್​​

ರಸ್ತೆಗೆ ಬಿದ್ದ ಸಾಕಷ್ಟು ಮೀನುಗಳು ನೀರಿಲ್ಲದೆ ಒದ್ದಾಡಿ ಸಾವನ್ನಪ್ಪುತ್ತಿರುವುದನ್ನು ಕಾಣಬಹುದು. ರಸ್ತೆಯ ತುಂಬೆಲ್ಲಾ ಸತ್ತಿರುವ ಮೀನಿಗಳು ವಿಡಿಯೋದಲ್ಲಿ ಸೆರೆಯಾಗಿದೆ. ವೈರಲ್​​ ವಿಡಿಯೋ ಇಲ್ಲಿದೆ ನೋಡಿ.

Video Viral: ಮೀನುಗಳ ಮಳೆ; ಆಕಾಶದಿಂದ ಮೀನುಗಳು ಬಿದ್ದು ಒದ್ದಾಡುತ್ತಿರುವ ವಿಡಿಯೋ ವೈರಲ್​​

Updated on: May 07, 2024 | 12:01 PM

ಇರಾನ್: ಇರಾನ್‌ನಲ್ಲಿ ಮೀನಿನ ಮಳೆಯಾಗುತ್ತಿದೆಯೇ? ಮೀನುಗಳು ಆಕಾಶದಿಂದ ಬೀಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಮೇ 5 ರಂದು ಪ್ರದೇಶದ ಯಸುಜ್ ಪ್ರದೇಶದಲ್ಲಿ ನಡೆದ ಅಪರೂಪದ ಘಟನೆ ಎಂದು ತಿಳಿದುಬಂದಿದೆ. ಆದರೆ ಇದು ಆಕಾಶದಿಂದ ಬಿದ್ದಿಲ್ಲ, ಬದಲಾಗಿ ಸುಂಟರಗಾಳಿಯಿಂದಾಗಿ ಸಮುದ್ರದಿಂದ ಮೀನುಗಳು ರಸ್ತೆಗೆ ಎಸೆಯಲ್ಪಟ್ಟಿವೆ ಎಂದು ವರದಿಯಾಗಿದೆ.

ವೀಡಿಯೊದ ದುಃಖದ ವಿಷಯವೆಂದರೆ ರಸ್ತೆಗೆ ಬಿದ್ದ ಸಾಕಷ್ಟು ಮೀನುಗಳು ನೀರಿಲ್ಲದೆ ಒದ್ದಾಡಿ ಸಾವನ್ನಪ್ಪುತ್ತಿರುವುದನ್ನು ಕಾಣಬಹುದು. ರಸ್ತೆಯ ತುಂಬೆಲ್ಲಾ ಸತ್ತಿರುವ ಮೀನಿಗಳು ವಿಡಿಯೋದಲ್ಲಿ ಸೆರೆಯಾಗಿದೆ. ವೈರಲ್​​ ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ವಿಧವೆಯರ ಗ್ರಾಮ;ಮದುವೆಯಾದ ಕೆಲವೇ ದಿನಗಳಲ್ಲಿ ಇಲ್ಲಿ ಪುರುಷರು ಸಾಯುತ್ತಾರೆ!

@UKR_token ಎಂಬ ಟ್ವಿಟರ್​ ಖಾತೆಯಲ್ಲಿ ಮೇ 05ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಎರಡು ದಿನಗಳಲ್ಲಿ 95 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಆಗಸದಿಂದ ಮೀನು ಬೀಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ತಮ್ಮ ಬೀದಿಗಳಿಂದ ಉಚಿತ ಮೀನುಗಳನ್ನು ಕಂಡು ಕೈಯಲ್ಲಿ ಹಿಡಿದಿಟ್ಟುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ