ವಿ ಆರ್ ಕನ್ನಡಕವನ್ನು ಸಾಮಾನ್ಯವಾಗಿ ವಿಡಿಯೋ ಗೇಮ್ ಸಮಯದಲ್ಲಿ ಅಥವಾ ಮನರಂಜನೆಗಾಗಿ ಬಳಸಲಾಗುತ್ತದೆ. ಆದರೆ ರಷ್ಯಾದ ಕೃಷಿ ಇಲಾಖೆಯು ಅದರ ವಿಶಿಷ್ಟ ಬಳಕೆಯನ್ನು ತೋರಿಸಿದೆ. ರಷ್ಯಾದ ಕೃಷಿ ಇಲಾಖೆಯ ಪ್ರಕಾರ, ಹಸುವಿಗೆ ವಿಆರ್ ಕನ್ನಡಕವನ್ನು ಹಾಕುವುದರಿಂದ , ಹಾಲು ನೀಡುವ ಸಾಮರ್ಥ್ಯವು ಶೇಕಡಾ 40ರಷ್ಟು ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.
ಮೈಂಡ್‌ಸೆಟ್ ಎಚ್2 ಎಂಬ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ, ಹಸುಗಳಿಗೆ ವಿಆರ್ ಗ್ಲಾಸ್‌ಗಳನ್ನು ತೊಡಿಸಿರುವುದನ್ನು ಕಾಣಬಹುದು. ಇದರಿಂದಾಗಿ ಹಸುಗಳಿಗೆ ತಾವು ಹಚ್ಚ ಹಸಿರಿನ ಸುಂದರ ಬಯಲಿನಲ್ಲಿ ವಾಸಿಸುತ್ತಿದ್ದೇವೆ ಎಂಬ ಭ್ರಮೆಯನ್ನು ನೀಡುತ್ತದೆ. ಇದರಿಂದಾಗಿ ಹಸುಗಳ ಮನಸ್ಥಿತಿಯನ್ನು ಸುಧಾರಿಸುತ್ತದೆ. ಜೊತೆಗೆ ಹಾಲು ನೀಡುವ ಸಾಮರ್ಥ್ಯವು ಶೇಕಡಾ 40ರಷ್ಟು ಹೆಚ್ಚಾಗುತ್ತದೆ ಎಂದು ರಷ್ಯಾದ ಕೃಷಿ ಇಲಾಖೆಯ ಸಂಶೋಧಕರು ತಿಳಿಸಿದ್ದಾರೆ. ವಿ ಆರ್ ಕನ್ನಡಕದಲ್ಲಿ ಹಚ್ಚ ಹಸುರಾದ ಸುಂದರ ಬಯಲಿನ ದೃಶ್ಯವನ್ನು ಪ್ಲೇ ಮಾಡಲಾಗುತ್ತದೆ.
ಇದನ್ನೂ ಓದಿ: 3 ಲಕ್ಷಕ್ಕೂ ಹೆಚ್ಚು ನಗದು ಹೊಂದಿದ್ದ ನೋಟಿನ ಕಂತನ್ನು ಹರಿದು ತಿಂದ ಸಾಕು ನಾಯಿ
ರಷ್ಯಾದಲ್ಲಿ ಇದು ತುಂಬಾ ಶೀತ ವಾತಾವರಣವಾಗಿರುವುದರಿಂದ ಹಸುಗಳು ಹೆಚ್ಚಿನ ಶಾಖ ಅಥವಾ ಅತಿಯಾದ ಶೀತವನ್ನು ಸಹಿಸುವುದಿಲ್ಲ. ಈ ಕಾರಣಕ್ಕಾಗಿ, ರಷ್ಯಾದಲ್ಲಿ ಹಸುಗಳಿಗೆ ವಿಆರ್ ಕನ್ನಡಕವನ್ನು ಧರಿಸುವಂತೆ ಮಾಡಲಾಗುತ್ತಿದೆ. ಇದರಿಂದ ಅವು ಹುಲ್ಲು ಮತ್ತು ತೆರೆದ ಮೈದಾನದಲ್ಲಿವೆ ಮತ್ತು ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ ಎಂಬ ಭ್ರಮೆಯಲ್ಲಿರುತ್ತವೆ. ಈ ಸಂಪೂರ್ಣ ಪ್ರಕ್ರಿಯೆಯು ಹಸುಗಳನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಅವುಗಳ ಹಾಲು ನೀಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:05 am, Sat, 13 January 24