ಈಗಿನ ಮದುವೆ ಇನ್ವಿಟೇಷನ್‌ನಲ್ಲಿ ಮದುವೆಯ ಕರೆಯೋಲೆ ಜೊತೆಗೆ ಡ್ರೆಫ್ರೂಟ್ಸ್ಗಳ ಬಾಕ್ಸ್ಗಳನ್ನು ಕೊಡುತ್ತಾರೆ. ಸಾಮಾನ್ಯವಾಗಿ ಈ ರೀತಿಯ ಇನ್ವಿಟೇಷನ್ ನಾವೆಲ್ಲರೂ ನೋಡಿರುತ್ತೇವೆ. ಆದರೆ ಇಲ್ಲೊಂದು ಮದುವೆ ಆಮಂತ್ರಣ ಪತ್ರಿಕೆಯೊಂದಿಗೆ ವಿಸ್ಕಿ ಬಾಟಲಿಯನ್ನು ಕೊಟ್ಟಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಇಲ್ಲಿದೆ. ಮದುವೆಯ ಆಮಂತ್ರಣ ಪತ್ರ ನೀಡುವ ಮೂಲಕ ಮದುವೆಯ ಕರೆಯೋಲೆಯನ್ನು ಸ್ನೇಹಿತರು ಕುಟುಂಬದವರಿಗೆ ನೀಡಲಾಗುತ್ತದೆ. ಅದರಲ್ಲೂ ಘನತೆಗೆ ತಕ್ಕಂತಹ ಪತ್ರಿಕೆಗಳನ್ನು ಪ್ರಿಂಟ್ ಮಾಡಿಸುತ್ತಾರೆ. ಕೆಲವುರು ಸಿಂಪಲ್ ಆಗಿ ಮದುವೆ ಪತ್ರಿಕೆಯನ್ನು ತಯಾರಿಸಿದರೆ, ಇನ್ನು ಕೆಲವರು ತುಂಬಾ ಅದ್ಧೂರಿಯಾಗಿ ಮದುವೆ ಕಾರ್ಡ್ ರೆಡಿ ಮಾಡಿಸುತ್ತಾರೆ. ಮದುವೆ ಕಾರ್ಡ್ಗಳು ಹೊಸ ರೂಪಾಂತರಗಳು ಬರುತ್ತಲೇ ಇರುತ್ತವೆ. ಸಣ್ಣ ಬಾಕ್ಸ್ನಲ್ಲಿಯೂ ವೆಡ್ಡಿಂಗ್ ಇನ್ವಿಟೇಷನ್ ನೀಡುತ್ತಾರೆ. ಅದೇ ಬಾಕ್ಸ್ನಲ್ಲಿ ನಿಟಾಗಿ ಡ್ರೆಪ್ರೂಟ್ಸ್ ಮತ್ತು ಡ್ರೆನಟ್ಸ್ಗಳನ್ನು ಇಟ್ಟಿರುತ್ತಾರೆ. ಇನ್ನೂ ಕೆಲವರು ಅರಶಿನ ಕುಂಕುಮ ಕೂಡಾ ಅದರಲ್ಲಿಟ್ಟು ಕೊಡುತ್ತಾರೆ. ಆದರೆ ಇಲ್ಲೊಂದು ಮದುವೆ ಪತ್ರಿಕೆಯನ್ನು ನೋಡಿದರೆ ಒಂದು ಕ್ಷಣ ತಬ್ಬಿಬ್ಬಾಗುವುದು ನಿಜ.
ಹೌದು ಇನ್ಟಾಗ್ರಾಮ್ ಮೀಮ್ ಪೇಜ್ ಒಂದರಲ್ಲಿ ಶೇರ್ ಆಗಿರುವ ಈ ವಿಡಿಯೋದಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯ ಬಾಕ್ಸ್ನಲ್ಲಿ ಮದುವೆಯ ಕರೆಯೋಲೆ ಹಾಗೂ ಡ್ರೆಫ್ರೂಟ್ಸ್ ಇಡಲಾಗಿತ್ತು. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಅದೇ ಬಾಕ್ಸ್ನಲ್ಲಿ ವಿಸ್ಕಿ ಬಾಟಲಿ ಕೂಡಾ ಇಡಲಾಗಿತ್ತು. ಮತ್ತು ಫ್ರೆಂಡ್‌ಗೆ ಟ್ಯಾಗ್ ಮಾಡುವ ಹಾಗೆ ಮಗ ನಿನ್ನ ಮದುವೆಗೂ ಹಿಂಗೆ ಇನ್ವಿಟೇಷನ್ ಕೊಡಬೇಕೆಂದು ತಮಾಷೆಯ ಕ್ಯಾಪ್ಷನ್ ಹಾಕಲಾಗಿದೆ. ಈ ರೀತಿಯ ಮದುವೆ ಪತ್ರಿಕೆ ನೋಡಿ ನೆಟ್ಟಿಗರು ಒಂದು ಕ್ಷಣ ಶಾಕ್ ಆಗಿದ್ದಾರೆ. ಜೊತೆಗೆ ನನಗೂ ನನ್ನ ಸ್ನೇಹಿತ ಇದೇ ರೀತಿಯ ಮದುವೆ ಪತ್ರಿಕೆ ಕೊಡಲಿ ಎಂದು ತಮಾಷೆಗೆ ಕೇಳಿಕೊಂಡಿರುತ್ತಾರೆ.
ಇದನ್ನೂ ಓದಿ: Viral Video : ಈ ಪುಟ್ಟಿ ಅಪ್ಪನೆದುರು ಶಾಂತಮಯೀ, ಅಮ್ಮನೆದುರು ರುದ್ರಭಯಂಕರೀ
ಇನ್ಟಾಗ್ರಾಮ್‌ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋ 1 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದು ಪಡ್ಡೆ ಹುಡುಗರ ಮನ ಗೆದ್ದಿದೆ. ಒಂದು ಕಡೆಯಿಂದ ಈ ವಿಡಿಯೋವನ್ನು ನೋಡಿದಾಗ ನಗು ಬರುತ್ತೆ. ಅದರಲ್ಲೂ ಈ ವಿಡಿಯೋಗೆ ಜನರು ತಮಾಷೆಯ ಕಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಇನ್ಟಾಗ್ರಾಮ್ ಬಳಕೆದಾರರು ಕಾರ್ಡ್ ಬೇಡ, ಬಾಟಲ್ ಸಾಕು ಎಂದು ನಗುತ್ತಾ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ನಮ್ಮ ಮನೆಯಲ್ಲಿ ನಾಲ್ಕು ಜನ ಇದ್ದಾರೆ, ನನಗೆ ನಾಲ್ಕು ಈ ಇನ್ವಿಟೇಷನ್ ಕಾರ್ಡ್ ಕೊಡಿ ಎಂದು ಕಮೆಂಟ್ ಮಾಡಿದ್ದಾರೆ.