Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಂತ ದುಡಿಮೆಯಿಂದ 11ನೇ ವಯಸ್ಸಿನಲ್ಲೇ ಕೋಟ್ಯಧಿಪತಿಯಾದ ಬಾಲಕಿ, ತಿಂಗಳಿಗೆ 1.1 ಕೋಟಿ ರೂ. ಸಂಪಾದಿಸುತ್ತಿದ್ರೂ ನಿವೃತ್ತಿಯಾಗಲು ತೀರ್ಮಾನ

ಸುಮಾರು ಮೂರೂ ವರ್ಷಗಳಿಂದ ಆಸ್ಟ್ರೇಲಿಯಾದ ಪಿಕ್ಸೀ ಕರ್ಟಿಸ್ ತನ್ನದೇ ಸ್ವಂತ ವ್ಯಾಪಾರದಿಂದ ತಿಂಗಳಿಗೆ ಕೋಟಿಗಟ್ಟಲೆ ದುಡಿಯುತ್ತಿದ್ದರು, ಇದೀಗ ಈ ಪುಟ್ಟ ಬಾಲಕಿ ಸದ್ಯಕ್ಕೆ ತನ್ನ ವ್ಯಾಪಾರದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾಳೆ. ಹಾಗಾದರೆ ಇದೆಂತ ವ್ಯಾಪಾರ ಮಾಡುತ್ತಿದ್ದಳು ಈ ಪುಟ್ಟ ಬಾಲಕಿ ಎಂದು ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ಪಿಕ್ಸೀ ಕರ್ಟಿಸ್ ಸಂಪೂರ್ಣ ಮಾಹಿತಿ.

ಸ್ವಂತ ದುಡಿಮೆಯಿಂದ 11ನೇ ವಯಸ್ಸಿನಲ್ಲೇ ಕೋಟ್ಯಧಿಪತಿಯಾದ ಬಾಲಕಿ, ತಿಂಗಳಿಗೆ 1.1 ಕೋಟಿ ರೂ. ಸಂಪಾದಿಸುತ್ತಿದ್ರೂ ನಿವೃತ್ತಿಯಾಗಲು ತೀರ್ಮಾನ
ಪಿಕ್ಸೀ ಕರ್ಟಿಸ್
Follow us
ನಯನಾ ಎಸ್​ಪಿ
|

Updated on:Feb 24, 2023 | 5:34 PM

ಈಗಿನ ಕಾಲದಲ್ಲಿ ಕೋಟ್ಯಧಿಪತಿ ಆಗಲು ಬಹಳ ಕಷ್ಟಪಡಬೇಕಾಗುತ್ತದೆ, ಅಥವಾ ಪಿತ್ರಾರ್ಜಿತ ಆಸ್ತಿ ಹೊಂದಿರಬೇಕಾಗುತ್ತದೆ. ಆದರೆ ಆಸ್ಟ್ರೇಲಿಯಾದ 11 ವರ್ಷದ ಬಾಲಕಿ ಒಬ್ಬಳು ಇಂತಹ ಸಣ್ಣ ವಯಸ್ಸಿನಲ್ಲೇ ತನ್ನ ಸ್ವಂತ ದುಡಿಮೆಯಿಂದ ಕೋಟ್ಯಧಿಪತಿ ಆಗಿದ್ದಾಳೆ. ಸುಮಾರು ಮೂರೂ ವರ್ಷಗಳಿಂದ ಆಸ್ಟ್ರೇಲಿಯಾದ ಪಿಕ್ಸೀ ಕರ್ಟಿಸ್ ತನ್ನದೇ ಸ್ವಂತ ವ್ಯಾಪಾರದಿಂದ ತಿಂಗಳಿಗೆ ಕೋಟಿಗಟ್ಟಲೆ ದುಡಿಯುತ್ತಿದ್ದರು, ಇದೀಗ ಈ ಪುಟ್ಟ ಬಾಲಕಿ ಸದ್ಯಕ್ಕೆ ತನ್ನ ವ್ಯಾಪಾರದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾಳೆ. ಹಾಗಾದರೆ ಇದೆಂತ ವ್ಯಾಪಾರ ಮಾಡುತ್ತಿದ್ದಳು ಈ ಪುಟ್ಟ ಬಾಲಕಿ ಎಂದು ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ಪಿಕ್ಸೀ ಕರ್ಟಿಸ್ ಸಂಪೂರ್ಣ ಮಾಹಿತಿ.

ವಿಶ್ವಕ್ಕೆ ಕೊರೋನಾ ಹೆಮ್ಮಾರಿ ಬಂದು ಲಾಕ್ ಡೌನ್ ಆದ ಬಳಿಕ ಪಿಆರ್ ಗುರು ರಾಕ್ಸಿ ಜಾಸೆಂಕೊ ಅವರ ಮಗಳು ಪಿಕ್ಸೀ ತನ್ನದೇ ಆದ ಆನ್ಲೈನ್ ವ್ಯಾಪಾರ ಪ್ರಾರಂಭಿಸಿದರು. ತನ್ನ ಆನ್ಲೈನ್ ಅಂಗಡಿಗೆ ಪಿಕ್ಸೀಸ್ ಬೋಸ್ ಎಂದು ಹೆಸರಿಟ್ಟಿದ್ದಾರೆ. ಈ ಅಂಗಡಿಯಲ್ಲಿ ತಾವೇ ಖುದ್ದು ತಯಾರಿಸಿದ ಆಟಿಕೆಗಳನ್ನು ಮಾರುತ್ತಿದ್ದರು. ತಮ್ಮ ಕಷ್ಟದ ಪ್ರತಿಫಲವಾಗಿ ಈ ವ್ಯಾಪಾರ ಅವರನ್ನು ಇಂದು ಕೋಟ್ಯಧಿಪತಿಯನ್ನಾಗಿ ಮಾಡಿದೆ, ಹೌದು, ಪಿಕ್ಸೀ ಅವರ ಫೈಡ್ಜೆಟ್ ಸ್ಪಿನ್ನರ್ ವ್ಯಾಪಾರವು ಒಂದೇ ತಿಂಗಳಲ್ಲಿ £ 110,000 (1.1 ಕೋಟಿ ರೂ.) ಅನ್ನು ಗಳಿಸಿತ್ತು ಎಂದು ವರದಿಗಳು ತಿಳಿಸಿವೆ.

ಈ ವ್ಯಾಪಾರ ಇಷ್ಟೆಲ್ಲಾ ಲಾಭ ಮಾಡುತ್ತಿದ್ದರು, ಪಿಕ್ಸೀ ತನ್ನ ಶಿಕ್ಷಣದ ಮೇಲೆ ಕೇಂದ್ರೀಕರಿಸಲು ‘ತಾತ್ಕಾಲಿಕ-ನಿವೃತ್ತಿ’ ಹೊಂದಲು ಬಯಸಿದ್ದಾರಂತೆ.

ರಾಕ್ಸಿ news.com.au ಜೊತೆ ಮಾತನಾಡಿದಾಗ, “ಪಿಕ್ಸೀ ಹೈ ಸ್ಕೂಲ್​ಗೆ ಪ್ರವೇಶಿಸುತ್ತಿದ್ದಾಳೆ, ಹಾಗಾಗಿ ಆಕೆ ಇನ್ನು ಶಾಲೆಯ ಕಡೆ ಗಮನ ಹರಿಸಬೇಕಾಗುತ್ತದೆ, ಹಾಗಾಗಿ ತಾತ್ಕಾಲಿಕವಾಗಿ ಈ ವ್ಯಾಪಾರದಿಂದ ನಿವೃತ್ತಿ ಹೊಂದಲು ಬಯಸಿದ್ದಾಳೆ. ಕಳೆದ ಕೆಲವು ತಿಂಗಳುಗಳಿಂದ, ನಾವು ಕುಟುಂಬದವರೆಲ್ಲ ವ್ಯಾಪಾರದ ಕುರಿತು ಚರ್ಚಿಸುತ್ತಾಳೆ ಇದ್ದೇವೆ, ಇದು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಅದ್ಭುತ ಪ್ರಯಾಣವಾಗಿದ್ದರೂ, ಇದೀಗ ಪಿಕ್ಸೀ ತನ್ನ ಶಾಲೆಯ ಕಡೆ ಕೇಂದ್ರೀಕರಿಸಬೇಕಾಗಿದೆ.” ಎಂದು ತಿಳಿಸಿದರು.

“ಪಿಕ್ಸೀಸ್ ಬೋಸ್ ಆನ್‌ಲೈನ್ ಸ್ಟೋರ್ ಉಳಿಯುತ್ತದೆ, ಇದು 2011 ರಲ್ಲಿ ಪ್ರಾರಂಭವಾದ ಅಂಗಡಿ, ಆಗ ಮಕ್ಕಳ ಕೂದಲು ಪರಿಕರಗಳನ್ನು (Hair clips) ಮಾರಾಟ ಮಾಡುತ್ತಿದ್ದೆವು. ಇದೀಗ ಪುನಃ ಮೊದಲಿನಂತೆ ಇದು ಕ್ಲಿಪ್​ಗಳನ್ನು ಮಾರಾಟ ಮಾಡುತ್ತದೆ. ನಾವು ಒಟ್ಟಿಗೆ ಇದನ್ನು ನಿರ್ವಹಿಸಬೇಕೆಂದು ನಿರ್ಧರಿಸಿದ್ದೇವೆ” ಎಂದು ರಾಕ್ಸಿ ಹೇಳಿದ್ದಾರೆ.

ಇದನ್ನೂ ಓದಿ: ಎಡಗಾಲಿನಲ್ಲಿ ನೋವಿದ್ದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ!

ಈ ಹಿಂದೆ, ಪಿಕ್ಸಿಯ ಯಶಸ್ಸುನ್ನು ನೋಡಿ ಅವಳು 15 ನೇ ವಯಸ್ಸಿನಲ್ಲಿ ಮಿಲಿಯನೇರ್ ಆಗಿ ನಿವೃತ್ತಿ ಹೊಂಡುತ್ತಾಳೆ ಎಂದು ರಾಕ್ಸಿ ಹೇಳಿದ್ದರು. ಪಿಕ್ಸೀ ತನ್ನ 11 ನೇ ಹುಟ್ಟುಹಬ್ಬದ ಪಾರ್ಟಿ ಸೇರಿದಂತೆ ಅವರ ಅದ್ದೂರಿ ಜೀವನಶೈಲಿ ಸಖತ್ ಫೇಮಸ್ ಆಗಿತ್ತು, ತಮ್ಮ11 ನೇ ಬರ್ತ್ಡೇ ಪಾರ್ಟಿಗೆ ಸುಮಾರು £ 23,000 ( 23 ಲಕ್ಷ ರೂ) ಖರ್ಚು ಮಾಡಿದ್ದರು. ಅಲ್ಲದೆ ಈ 11 ವರ್ಷದ ಬಾಲಕಿ £150,000 ಬೆಲೆ ಬಾಳುವ Mercedes Benz GI ಅನ್ನು ಕೂಡ ಹೊಂದಿದ್ದಾರೆ.

Published On - 5:22 pm, Fri, 24 February 23