ಸೇತುವೆಯ ಕೆಳಗೆ ಎಲ್ಲಿ ಮಾಯವಾಗುತ್ತಿವೆ ವಾಹನಗಳು? ಭಯಾನಕ ಎನ್ನುತ್ತಿದ್ದಾರೆ ನೆಟ್ಟಿಗರು

| Updated By: ಶ್ರೀದೇವಿ ಕಳಸದ

Updated on: May 20, 2023 | 12:28 PM

Optical Illusion : ಯಾರಾದರೂ ಈ ವಿಡಿಯೋದ ಬಗ್ಗೆ ವಿವರಣೆ ಕೊಡಬಹುದಾ? ನೋಡುತ್ತಿದ್ದರೆ ಕೆಲವರು ಭಯ ಎನ್ನುತ್ತಿದ್ದಾರೆ, ಇನ್ನೂ ಕೆಲವರು ಭ್ರಮೆ ಎನ್ನುತ್ತಿದ್ದಾರೆ, ಉಳಿದವರು ಇದರಲ್ಲಿ ತಂತ್ರ ಅಡಗಿದೆ ಎನ್ನುತ್ತಿದ್ದಾರೆ. ನೀವು?

ಸೇತುವೆಯ ಕೆಳಗೆ ಎಲ್ಲಿ ಮಾಯವಾಗುತ್ತಿವೆ ವಾಹನಗಳು? ಭಯಾನಕ ಎನ್ನುತ್ತಿದ್ದಾರೆ ನೆಟ್ಟಿಗರು
ಸೇತುವೆಯ ಕೆಳಗಿನಿಂದ ಎಲ್ಲಿ ಕಾಣೆಯಾಗುತ್ತಿವೆ ವಾಹನಗಳು?
Follow us on

Viral Video: ಅರೆ! ಸೇತುವೆಯ ಕೆಳಗೇನೋ ವಾಹನಗಳು ಹೋಗುತ್ತಿವೆ. ಆದರೆ ಮುಂದೆ ಅವರು ಕಾಣುತ್ತಿಲ್ಲವಲ್ಲ. ಏನು ನಡೆಯುತ್ತಿದೆ ಇಲ್ಲಿ ಎಂದು ನೆಟ್ಟಿಗರು ಅಚ್ಚರಿ, ಕುತೂಹ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೇ ಅಲ್ಲ ಸಣ್ಣಗೆ ಭಯವನ್ನೂ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತ್ರೀಡಿ ಚಿತ್ರಗಳು, ವಿಡಿಯೋಗಳು, ಎನಿಮೇಟೆಡ್​ ಮೀಮ್​ಗಳು ಸಾಮಾನ್ಯ. ನೋಡುಗರಿಗೆ ಇವು ಒಳ್ಳೆಯ ಮನರಂಜನೆ ನೀಡಬಲ್ಲವು ಮತ್ತು ಯೋಚಿಸಲು ಪುಷ್ಠಿ ಕೊಡಬಲ್ಲವು. ನೋಡಿ ಈ ಕೆಳಗಿನ ವಿಡಿಯೋ. ಈ ವಿಷಯವಾಗಿ ನಿಮ್ಮ ಬುದ್ಧಿ ಹೇಗೆ ಓಡಬಹುದು ಎಂದು ತಿಳಿಸಿ.

ಯಾರಾದರೂ ಈ ವಿಡಿಯೋದ ಬಗ್ಗೆ ವಿವರಣೆ ಕೊಡಬಹುದಾ ಎಂಬ ಒಕ್ಕಣೆ ಇದಕ್ಕಿದೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ನೋಡುತ್ತಿದ್ದರೆ ಒಂದು ರೀತಿ ಭ್ರಮೆ ಆವರಿಸುತ್ತದೆ. ಮೆಲ್ಲಗೆ ಭಯ ಆವರಿಸತೊಡಗುತ್ತದೆ. ಭಯಾನಕ ವಿಡಿಯೋ ಇದು ಎಂದು ಹಲವಾರು ಜನ ಹೇಳಿದ್ದಾರೆ. ಕೆಲವರು ವಿಡಿಯೋಗ್ರಫಿ ತಂತ್ರವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ : Viral Video : ನೋ ವಿಡಿಯೋ ಪ್ಲೀಸ್​, ಪರ್ಸನಲ್​ ಸ್ಪೇಸ್​ ಕೊಡಿ ನಾನು ಸಂಗೀತಾಭ್ಯಾಸ ಮಾಡುತ್ತಿದ್ದೇನೆ

ಇದು ಕಟ್ಟಡದ ಮೇಲ್ಭಾಗ ಸೇತುವೆಯ ಕೆಳಭಾವಲ್ಲ. ವಾಹನ ಸವಾರರು ಎಡಕ್ಕೆ ಚಲಿಸುತ್ತಿದ್ದಾರೆ. ಈ ವಿಡಿಯೋ ಚಿತ್ರೀಕರಿಸುವಾಗ ಕಟ್ಟಡವನ್ನು ಸೇತುವೆಯ ಹಾಗೆ ಕಾಣುವಂತೆ ಮಾಡಲಾಗಿದೆ ಎಂದು ನನ್ನ ಅನಿಸಿಕೆ ಎಂದು ಹೇಳಿದ್ದಾರೆ ಒಬ್ಬರು.  ಬಾಲ್ಕನಿಯ ಅಂಚು ಅಡ್ಡ ಬಂದಿದೆ. ಕೆಳಗಿನ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿವೆ. ಇದೊಂದು ಆಪ್ಟಿಕಲ್ ಇಲ್ಲ್ಯೂಷನ್​ ವಿಡಿಯೋ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಡೇರ್​ಡೆವಿಲ್​ ಮುಸ್ತಾಫಾ; ಆಗೋದಿದೆ ಆರಂಭವು ಆಲಿಂಗನದಲ್ಲಿ, ಒಟ್ನಲ್ಲಿ ಕ್ರಾಂತಿ ಆಗಲಿ!

ಇದು ಎಡಿಟಿಂಗ್​ನ ಕುಶಲತೆ, ಇಲ್ಲಿ ಎರಡು ವಿಡಿಯೋಗಳಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನನಗಂತೂ ಮೇಲ್ಛಾವಣಿ ನದಿಯಂತೆ ಕಾಣುತ್ತಿದೆ. ಬಹುಶಃ ಇದು ತ್ರೀಡಿ ಪೇಂಟಿಂಗ್​ ಇರಬಹುದು ಎಂದಿದ್ದಾರೆ ಇನ್ನೂ ಒಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:20 pm, Sat, 20 May 23