AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

smoKING: ‘ದಂ‘ಪತಿ ಅಂದ್ರೆ ಇವರೇ! ಎಂಥಾ ಅದೃಷ್ಟವಂತ ಇವ, ಇಷ್ಟಕ್ಕೂ ನಡುರಸ್ತೆಯಲ್ಲಿ ಏನು ನಡೆಯಿತು ಗೊತ್ತಾ? ವಿಡಿಯೋ ನೋಡಿ

Viral Video: ವಿಡಿಯೋದಲ್ಲಿ ಕಂಡುಬರುವಂತೆ... ‘ದಂ‘ಪತಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಬೈಕ್‌ನಲ್ಲಿ ಕುಳಿತ ಮಹಿಳೆ ಒಂದು ಕೈಯಲ್ಲಿ ಸಿಗರೇಟನ್ನು ಹಿಡಿದು ಸಾಗುತ್ತಾಳೆ. ಮಧ್ಯೆ ಒಂದು ಮಗು ಕೂಡ ಕುಳಿತಿತ್ತು. ಇನ್ನು ಮಧ್ಯೆ ಮಧ್ಯೆ ಆಕೆ ತನ್ನ ಗಂಡನ ಬಾಯಿಗೆ ಆಗಾಗ್ಗೆ ಸಿಗರೇಟು ಇಟ್ಟು ದಂ ಹೊಡೆಯುವಂತೆ ಪ್ರೇರೇಪಿಸುತ್ತಾಳೆ.

smoKING: ‘ದಂ‘ಪತಿ ಅಂದ್ರೆ ಇವರೇ! ಎಂಥಾ ಅದೃಷ್ಟವಂತ ಇವ, ಇಷ್ಟಕ್ಕೂ ನಡುರಸ್ತೆಯಲ್ಲಿ ಏನು ನಡೆಯಿತು ಗೊತ್ತಾ? ವಿಡಿಯೋ ನೋಡಿ
‘ದಂ‘ಪತಿ ಅಂದ್ರೆ ಇವರೇನಾ!
ಸಾಧು ಶ್ರೀನಾಥ್​
|

Updated on:May 27, 2023 | 1:23 PM

Share

ಧೂಮಪಾನವು ತುಂಬಾ ಅಪಾಯಕಾರಿ ಎಂದು ಎಲ್ಲರಿಗೂ ತಿಳಿದಿದೆ. ಸ್ವತಃ ಧೂಮಪಾನಿಗಳಿಗೂ ಇದು ತಿಳಿದಿರುವುದೇ. ಸಿನಿಮಾ ಥಿಯೇಟರ್‌ಗಳಲ್ಲಿ ಕೂಡ ಧೂಮಪಾನ ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಕೇಳುತ್ತೇವೆ. ಆದರೆ ಕೆಲವರಿಗೆ ಈ ಅಭ್ಯಾಸವನ್ನು ಬಿಡುವುದು ತುಂಬಾ ಕಷ್ಟ. ಧೂಮಪಾನವು ಧೂಮಪಾನಿಗಳಿಗೆ ಮಾತ್ರವಲ್ಲದೆ ಅದರ ಹೊಗೆಯನ್ನು ಉಸಿರಾಡುವವರಿಗೂ (ಪ್ಯಾಸೀವ್ ಸ್ಮೋಕರ್ಸ್​​) ಸಮಸ್ಯೆಗಳನ್ನು ಉಂಟುಮಾಡುತ್ತದೆ. ಎಲ್ಲ ಗೊತ್ತಿದ್ದರೂ.. ಪುರುಷರಷ್ಟೇ ಅಲ್ಲ ಅನೇಕ ಮಹಿಳೆಯರೂ ಧೂಮಪಾನ ಮಾಡುತ್ತಾರೆ. ಆದರೆ ಹೆಂಡತಿ ತನ್ನ ಪತಿಗೆ ಧೂಮಪಾನ ಮಾಡಲು ಸಹಾಯ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಗಂಡನ ಧೂಮಪಾನ ಚಟ ಬಿಡಿಸಲು ಹೆಂಡತಿಯಾದವಳು ಎಷ್ಟು ಪ್ರಯತ್ನಿಸುತ್ತಾಳೆ ಎಂಬುದು ನಿಜಕ್ಕೂ ನೋವಿನ ಸಂಗತಿ. ಈ ಬಗ್ಗೆ ಮಹಿಳೆಯರು ಸದಾ ದೂರುವುದನ್ನು ನಾವು ನೋಡಿದ್ದೇವೆ. ನಾವು ತಿಳಿಹೇಳಿದೆವು, ಚಟ ಬಿಡು ಎಂದು ಕೇಳಿಕೊಂಡೆವು. ಆದರೆ, ಗಂಡ (husband) ತಮ್ಮ ಪ್ರಯತ್ನಗಳ ಮೇಲೆ ತಣ್ಣೀರು ಎರಚುತ್ತಾನೆ ಎಂದು ಹಲಬುವುದುಂಟು ಹೆಂಡತಿಯರು (Wife). ಆದರೆ ಇಲ್ಲೊಂದು ವಿಚಿತ್ರ ಸನ್ನಿವೇಶ ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ (Viral Video). ಗಂಡನಿಗೆ ಸಿಗರೇಟು ಸೇದಿಸುವ ಹೆಂಡತಿಯನ್ನು ಎಲ್ಲಿಯಾದರೂ ಕಾಣಸಿಗುವುದುಂಟೆ!? ಅದೂ ಸಾರ್ವಜನಿಕ ಸ್ಥಳದಲ್ಲಿ, ಅದೂ ಗಾಡಿ ಓಡಿಸುವಾಗ, ಅಪಾಯಕಾರಿಯಾಗಿ ಸಿಗರೇಟು ಸೇದಿಸುವ ಪುಣ್ಯಾತ್ತಗಿತ್ತಿ ಇಲ್ಲಿದ್ದಾಳೆ ನೋಡಿ. ಈ ಗೃಹಿಣಿಯ ಹೃದಯ ನಿಜಕ್ಕೂ ವಿಶಾಲವಾಗಿದೆ.. ಯಾಕೆಂದರೆ ಗಂಡ ಬೈಕ್ ಓಡಿಸುವಾಗ ಹಿಂದಿನಿಂದ ಹೆಂಡತಿ ಸಿಗರೇಟ್ ಸೇದಿಸುತ್ತಿದ್ದಾಳೆ.. ಈ ವಿಡಿಯೋ ಈಗ ವೈರಲ್ ಆಗಿದೆ (smoKING).

ವಿಡಿಯೋದಲ್ಲಿ ಕಂಡುಬರುವಂತೆ… ‘ದಂ‘ಪತಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಬೈಕ್‌ನಲ್ಲಿ ಕುಳಿತ ಮಹಿಳೆ ಒಂದು ಕೈಯಲ್ಲಿ ಸಿಗರೇಟನ್ನು ಹಿಡಿದು ಸಾಗುತ್ತಾಳೆ. ಗಂಡನ ಮುಂದೆ, ಸರಿಯಾಗಿ ಅವನ ಬಾಯಿಗೆ ಎದುರು ಮಗು ಕೂಡ ಕುಳಿತಿತ್ತು. ಇನ್ನು ಮಧ್ಯೆ ಮಧ್ಯೆ ಆಕೆ ತನ್ನ ಗಂಡನ ಬಾಯಿಗೆ ಆಗಾಗ್ಗೆ ಸಿಗರೇಟು ಇಟ್ಟು ದಂ ಹೊಡೆಯುವಂತೆ ಪ್ರೇರೇಪಿಸುತ್ತಾಳೆ. ಅವನೋ ಗಾಡಿ ಓಡಿಸುತ್ತಾ ಸಾವಕಾಶವಾಗಿ, ಸಮಯ ಸಿಕ್ಕಾಗ ಬಾಯ್ತೆರೆದು ದಂ ಎಳೆಯುತ್ತಾನೆ.

ಇದೆಲ್ಲವನ್ನೂ ಪಕ್ಕದಲ್ಲೇ ಹಾದು ಹೋಗುತ್ತಿದ್ದ ಕಾರಿನ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ದಾಖಲಿಸಿದ್ದಾರೆ. ಬೈಕ್ ಓಡಿಸುವಾಗ ಸಿಗರೇಟು ಬೇಕಾ ಎಂದು ದಂಪತಿ ಕೇಳುತ್ತಿದ್ದಂತೆ ಆತ ಮುಖ ತಿರುಗಿಸುತ್ತಾನೆ. ಆಗ ಅವನ ಹೆಂಡತಿ ಅವನ ಬಾಯಿಗೆ ಸಿಗರೇಟ್ ಇಡುತ್ತಾಳೆ. ಅವನು ಒಂದು ಪಫ್ ಎಳೆಯುತ್ತಾನೆ. ಪದೇ ಪದೇ ಸಿಗರೇಟ್ ಸೇದುತ್ತಿರುವ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Also Read:  Adultery: ಅತ್ತೆ ಜೊತೆ 22 ವರ್ಷಗಳಿಂದ ಸುದೀರ್ಘವಾದ ಅಕ್ರಮ ಸಂಬಂಧ, ಅವರಿಬ್ಬರೂ ಪಲ್ಲಂಗದಾಟದಲ್ಲಿ ತೊಡಗಿದ್ದಾಗ…

ಈ ವೀಡಿಯೊವನ್ನು ಟ್ವಿಟರ್ ಬಳಕೆದಾರೊಬ್ಬರು ಹಸ್ನಾ ಜರೂರಿ ಹೈ ಹೆಸರಿನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 175.1k ಜನರು ಈಗಾಗಲೇ ವೀಡಿಯೊವನ್ನು ವೀಕ್ಷಿಸಿದ್ದಾರೆ. ವಿಡಿಯೊ ಅವಧಿ ಕೇವಲ 20 ಸೆಕೆಂಡುಗಳು. ಈ ವಿಡಿಯೋವನ್ನು ಶೇರ್ ಮಾಡಿದ್ದು, ‘ನನಗೂ ಇಂಥಾ ಹೆಂಡತಿ ಇದ್ದಿದ್ದರೆರೆರೆರೆ’ ಎಂದು ಮಂದಿ ಹಲಬುತ್ತಿದ್ದಾರೆ. ಅಷ್ಟೇ ಅಲ್ಲ ವಿಡಿಯೋ ನೋಡಿದವರೆಲ್ಲ ತಮ್ಮದೇ ಶೈಲಿಯಲ್ಲಿ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ನೀವೂ ಪ್ರತಿಕ್ರಿಯಿಸಿ!

Published On - 1:21 pm, Sat, 27 May 23

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!