ChatGPT: ಭಾರತದ ರಾಜ್ಯಗಳು ವಿದ್ಯಾರ್ಥಿಗಳಾಗಿದ್ದಲ್ಲಿ ಅವುಗಳಿಗೆ ಪರೀಕ್ಷೆಯಲ್ಲಿ ಯಾವ ಗ್ರೇಡ್ ಸಿಗುತ್ತಿತ್ತು?
ChatGPT 4 : 'ಇಲ್ಲಿ ಯಾವ ಸಾಂಸ್ಕೃತಿಕ, ನೈತಿಕ ಚರಿತ್ರೆಯನ್ನು ಜಿಪಿಟಿ ಗಣನೆಗೆ ತೆಗೆದುಕೊಳ್ಳುತ್ತಿದೆ?’ ಕೆಲವರು ತಕರಾರೆತ್ತಿದ್ದಾರೆ. ದಕ್ಷಿಣ ಹಾಗೂ ಬಹುತೇಕ ಇತರ ಭಾಗಗಳ ನಡುವಣ ಅಂತರಕ್ಕೆ ಮುಖ್ಯ ಕಾರಣಗಳೇನು ಎಂದು ನಿಮಗನ್ನಿಸುತ್ತದೆ?
Viral: ಭಾರತ ಇತ್ತೀಚೆಗೆ ಚೈನಾವನ್ನೂ ಮೀರಿಸಿ ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆಯ ದೇಶವಾಗಿ ಹೊಮ್ಮಿದೆ. ಜಗತ್ತಿನಲ್ಲೇ ಐದನೇ ಅತಿ ಹೆಚ್ಚು ಜಿಡಿಪಿ (GDP) ಹೊಂದಿರುವ ರಾಷ್ಟ್ರ ಮತ್ತು ಗಾತ್ರದಲ್ಲಿ ಏಳನೆಯದು. ಸ್ವಾತಂತ್ರಾನಂತರದ 75 ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಹೊಂದಿದ್ದರೂ ಹಲವಾರು ಕಾರಣಗಳಿಂದ ಅದು ಭಾರತದೆಲ್ಲೆಡೆ ಏಕರೂಪದಲ್ಲಿ ಆಗಿಲ್ಲ. ವಿಶೇಷವಾಗಿ ದಕ್ಷಿಣದ ರಾಜ್ಯಗಳು ಉತ್ತರ ಹಾಗೂ ಈಶಾನ್ಯ ರಾಜ್ಯಗಳಿಗಿಂತ ಅಭಿವೃದ್ಧಿ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇದನ್ನೀಗ ಕೃತಕ ಬುದ್ಧಿಮತ್ತೆಯ (AI) ಹೊಚ್ಚಹೊಸ ಆವಿಷ್ಕಾರವಾದ ಜಿಪಿಟಿ (ChatGPT) ಕೂಡ ದೃಢಪಡಿಸಿದೆ. ಇಂಡಿಯಾ ಇನ್ ಪಿಕ್ಸೆಲ್ಸ್ ಈ ಕೆಳಗಿನ ನಕ್ಷೆಯನ್ನು ಟ್ವೀಟಿಸಿದೆ. ಈ ಮಾಹಿತಿಯನ್ನು ಪಡೆಯಲು, ಜಿಪಿಟಿ-4 (GPT-4) ಬಳಸಿಕೊಳ್ಳಲಾಗಿದೆ.
Here’s what GPT-4 thinks Indian states would score if their socioeconomic indicators were their exams.
ಇದನ್ನೂ ಓದಿ9 pointers: Tamil Nadu, Maharashtra 8 pointers: Delhi, Haryana, Gujarat, Karnataka, Kerala 7 pointers: Rajasthan, Punjab, Himachal, Odisha 6 pointers: Jharkhand, UP, Assam,… pic.twitter.com/sk5Hlqxv7d
— India in Pixels by Ashris (@indiainpixels) May 26, 2023
ಅದಕ್ಕೆ ಕೇಳಿದ ಪ್ರಶ್ನೆ ಈ ರೀತಿಯಿತ್ತು: ‘ಭಾರತ ಒಂದು ತರಗತಿ ಮತ್ತು ನೀನು ಆ ತರಗತಿಯ ಕ್ಲಾಸ್ ಟೀಚರ್ ಎಂದುಕೋ. ಪ್ರತಿ ರಾಜ್ಯದ ಇಂದಿನ ಹಾಗೂ ಹಿಂದಿನ ಎಲ್ಲಾ ಸಾಮಾಜಿಕ ಮತ್ತು ಆರ್ಥಿಕ ಸೂಚ್ಯಂಕಗಳು ನಿನ್ನ ಕೈಗೆಟಕುವಂತಿವೆ. ನಿನಗೆ ಅವುಗಳ ರಾಜಕೀಯ, ಸಾಂಸ್ಕೃತಿಕ, ನೈತಿಕ ಹಾಗೂ ಆರ್ಥಿಕ ಚರಿತ್ರೆಗಳ ಬಗೆಗೂ ಗೊತ್ತಿದೆ. ಹೀಗಿರುವಾಗ ಪ್ರತಿ ವಿದ್ಯಾರ್ಥಿಯ ಸಾಧನೆಗೆ ನೀನು ಎಷ್ಟು ಅಂಕ ಮತ್ತು ಯಾವ ಶ್ರೇಣಿ ಕೊಡುತ್ತೀಯಾ? ಇದನ್ನು ಒಂದು ನಕ್ಷೆಯಲ್ಲಿ ನಿರೂಪಿಸು.’
ಇದನ್ನೂ ಓದಿ : Viral: ‘ಸರಳ’ ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!
ತಮಿಳುನಾಡು ಮತ್ತು ಮಹಾರಾಷ್ಟ್ರ ಮೊದಲೆರಡು ಸ್ಥಾನ ಗಳಿಸಿವೆ. ಕರ್ನಾಟಕ ಆರನೇ ಸ್ಥಾನದಲ್ಲಿದೆ. ‘ಕ್ರಿಕೆಟ್‌ನಲ್ಲಷ್ಟೇ ಅಲ್ಲದೇ ಇಲ್ಲಿಯೂ ಇವೆರಡೂ ಮೇಲಿವೆ,’ ಎಂದಿದ್ದಾರೆ ಒಬ್ಬರು. ‘ಇಲ್ಲಿ ಯಾವ ಸಾಂಸ್ಕೃತಿಕ ಹಾಗೂ ನೈತಿಕ ಚರಿತ್ರೆಯನ್ನು ಜಿಪಿಟಿ ಗಣನೆಗೆ ತೆಗೆದುಕೊಳ್ಳುತ್ತಿದೆ?’ ಎಂದು ಕೆಲವರು ತಕರಾರೆತ್ತಿದ್ದಾರೆ. ಜಿಪಿಟಿಯ ನಿರೂಪಣೆಯ ಬಗ್ಗೆ ನಿಮಗೇನೆನ್ನಿಸುತ್ತದೆ? ದಕ್ಷಿಣ ಹಾಗೂ ಬಹುತೇಕ ಇತರ ಭಾಗಗಳ ನಡುವಣ ಅಂತರಕ್ಕೆ ಮುಖ್ಯ ಕಾರಣಗಳೇನು? ಪ್ರತಿಕ್ರಿಯಿಸಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:08 pm, Sat, 27 May 23