ಪ್ರತಿದಿನವೂ ವಿವಿಧ ಬಗೆಯ ಆಹಾರವನ್ನು ಪ್ರಯತ್ನಿಸುವ ಅನೇಕ ಆಹಾರಪ್ರೇಮಿಗಳನ್ನು ನೀವು ನೋಡಿರಬಹುದು. ಆಹಾರಪ್ರೇಮಿಗಳದ್ದೇ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ವಿಚಿತ್ರ ಆಹಾರ ಕ್ರಮದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಈ ಮಹಿಳೆ ತಾನು ಹಸಿವಾದಾಗಲೆಲ್ಲ ತನ್ನ ಮನೆಯ ಗೋಡೆಯನ್ನು ಕೊರೆದು ಕೊರೆದು ತಿನ್ನುತ್ತಾಳೆ. ಇದೀಗಾಗಲೇ ಅವಳ ಮನೆಯ ಅರ್ಧದಷ್ಟು ಗೋಡೆಯನ್ನು ತಿಂದಿದ್ದಾಳೆ. ಈಕೆಯ ಈ ವಿಚಿತ್ರ ಅಭ್ಯಾಸ ತಿಳಿದ ಅಕ್ಕ ಪಕ್ಕದ ಮನೆಯವರು ಆಕೆಯನ್ನು ತಮ್ಮ ಮನೆಯೊಳಗೆ ಬರದಂತೆ ವಿನಂತಿಸಿದ್ದಾರೆ.
ಅಮೆರಿಕದ ಮಿಚಿಗನ್ ನಿವಾಸಿಯಾಗಿರುವ ನಿಕೋಲ್ ಎಂಬಾಕೆಯೇ ಗೋಡೆ ತಿನ್ನುವ ಮಹಿಳೆ. ಈಕೆಗೆ ಯಾವುದೇ ಚೈನೀಸ್ ಅಥವಾ ಇಟಾಲಿಯನ್ ಆಹಾರ ಇಷ್ಟವಿಲ್ಲವಂತೆ. ತಾನು ಹಸಿವಾದಾಗಲೆಲ್ಲ ಮನೆಯ ಗೋಡೆಯನ್ನೇ ತಿನ್ನುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ. ಇದಲ್ಲದೇ ಹೋದಲ್ಲೆಲ್ಲಾ ತನ್ನ ಮನೆಯ ಗೋಡೆ ಮಾತ್ರವಲ್ಲದೆ ಅವರಿವರ ಮನೆಗಳ ಗೋಡೆಗಳನ್ನೂ ತಿನ್ನುತ್ತಾಳೆ. ಇದರಿಂದಾಗಿ ಆಕೆಯ ಸಂಬಂಧಿಕರು ಮತ್ತು ಸ್ನೇಹಿತರು ಆಕೆ ಇನ್ನು ಮುಂದೆ ಮನೆಗೆ ಬರದಂತೆ ವಿನಂತಿಯನ್ನೂ ಮಾಡಿದ್ದಾರೆ.
ಇದನ್ನೂ ಓದಿ: ಈ ಯುವತಿಗೆ ದಿನಕ್ಕೆ 12 ಸಾವಿರ ಬಾರಿ ಸೀನು ಬರುತ್ತದೆ, ಏನಿದು ವಿಚಿತ್ರ ಕಾಯಿಲೆ?
ನಿಕೋಲ್ನ ಈ ಅಭ್ಯಾಸದಿಂದ ಹೊರಬರದಿದ್ದರೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ವೈದ್ಯರು ಆಕೆಗೆ ಎಚ್ಚರಿಸಿದ್ದಾರೆ. ಇದೀಗಾ ಈಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬರುತ್ತಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: