ನಮ್ಮ ದೇಶದ ಎಷ್ಟೋ ಪ್ರತಿಭೆಗಳು ಎಲೆಮರೆಯಲ್ಲೇ ಉಳಿದುಬಿಡುತ್ತಾರೆ. ಆದರೆ, ಈಗ ಎಲ್ಲ ಕೈಯಲ್ಲೂ ಸ್ಮಾರ್ಟ್ಫೋನ್, ಇಂಟರ್ನೆಟ್ ವ್ಯವಸ್ಥೆ ಇರುವುದರಿಂದ ಸೋಷಿಯಲ್ ಮೀಡಿಯಾದಿಂದಾಗಿ ಅನೇಕ ಪ್ರಯಿಭೆಗಳು ಪರಿಚಯವಾಗುತ್ತಿದೆ. ಅದಕ್ಕೊಂದು ಹೊಸ ಉದಾಹರಣೆಯೆಂಬಂತೆ ರಾಜಸ್ಥಾನದ ಕೃಷ್ಣಾ ಕನ್ವರ್ ಗೆಹ್ಲೋಟ್ ಎಂಬ ಮಹಿಳೆಯ ವಿಡಿಯೋವೊಂದು ಈಗ ಭಾರೀ ವೈರಲ್ ಆಗಿದೆ. ಸಾಂಪ್ರದಾಯಿಕ ಉಡುಗೆ ಧರಿಸಿ, ರೋಲರ್ ಬ್ಲೇಡ್ (ಸ್ಕೇಟಿಂಗ್) ಮೂಲಕ ರಾಜಸ್ಥಾನದ ಜನಪದ ನೃತ್ಯ ಮಾಡುತ್ತಿರುವ ಕೃಷ್ಣಾ ಅವರ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕೃಷ್ಣಾ ಕನ್ವರ್ ಗೆಹ್ಲೋಟ್ ಎಂಬ ಮಹಿಳೆ ರೋಲರ್‌ಬ್ಲೇಡ್‌ಗಳಲ್ಲಿ ಸಾಂಪ್ರದಾಯಿಕ ರಾಜಸ್ಥಾನಿ ಜಾನಪದ ನೃತ್ಯವನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ವೃತ್ತಿಪರ ಸ್ಕೇಟರ್ ಆಗಿರುವ ಕೃಷ್ಣಾ ‘ಪೋಷಾಕ್’ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ರಾಜಸ್ಥಾನಿ ಉಡುಗೆಯಲ್ಲಿ ಸುಂದರವಾಗಿ ರೆಡಿಯಾಗಿದ್ದಾರೆ. ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆಯೆಂದರೆ ಭಾರೀ ತೂಕದ ಲೆಹೆಂಗಾ ಚೋಲಿಯಾಗಿರುತ್ತದೆ. ಅದನ್ನು ಹೊತ್ತು ನೃತ್ಯ ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ. ಆದರೆ, ಆ ಡ್ರೆಸ್ ಧರಿಸಿ ಸ್ಕೇಟಿಂಗ್ ಮೂಲಕ ರಾಜಸ್ಥಾನಿ ಜನಪದ ನೃತ್ಯ ಮಾಡಿ ಕೃಷ್ಣಾ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ನೃತ್ಯವನ್ನು ನೋಡಿದವರು ಹುಬ್ಬೇರಿಸಿದ್ದಾರೆ.
ಕೃಷ್ಣಾ ಕನ್ವರ್ ಗೆಹ್ಲೋಟ್ ಸ್ಕೇಟಿಂಗ್ನಲ್ಲಿ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ. ಹಾಗೇ ಅನೇಕ ಪುರಸ್ಕಾರಗಳನ್ನು ಕೂಡ ಗೆದ್ದಿದ್ದಾರೆ. ಆಕೆಯ ಕೆಲವು ದಾಖಲೆಗಳು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಇಂಡಿಯಾ ಬುಕ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ರೆಕಾರ್ಡ್, ಮುಂತಾದ ಕಡೆಯೂ ದಾಖಲಾಗಿವೆ.
ಇದನ್ನೂ ಓದಿ: Viral News: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ; 11 ಲಕ್ಷ ರೂ. ಪರಿಹಾರ ನೀಡಲು ಆಸ್ಪತ್ರೆಗೆ ಆದೇಶ
Shocking News: ಮೊಬೈಲ್ ಕೊಡಲಿಲ್ಲ ಎಂದು ಗಂಡನ ತುಟಿಯನ್ನೇ ಕತ್ತರಿಸಿದ ಹೆಂಡತಿ!