ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಚಲಿಸುವಾಗ ಎಷ್ಟು ಎಚ್ಚರಿಕೆಯನ್ನು ವಹಿಸಿದರೂ ಸಾಲದು. ನಮ್ಮ ಗಮನ ಸಂಪೂರ್ಣವಾಗಿ ರೈಲುಗಳ ಮೇಲೆ ಹಾಗೂ ರೈಲ್ವೆ ಪ್ಲಾಟ್ಫಾರ್ಮ್ಗಳ ಮೇಲೆ ಇರುವುದು ಬಹಳ ಅತ್ಯಗತ್ಯ. ಇದೀಗ ಶಾಕಿಂಗ್ ಘಟನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋ ತುಣುಕಿನಲ್ಲಿ ಮಹಿಳೆಯೊಬ್ಬಳು, ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು, ರೈಲ್ವೆ ಪ್ಲಾಟ್ಫಾರ್ಮ್ ಮೇಲೆ ಫೋನ್ ಮಾಡುತ್ತಾ, ತನ್ನ ಸ್ನೇಹಿತರೊಂದಿಗೆ ನಡೆಯುತ್ತಿದ್ದಳು. ಮೊಬೈಲ್ ಸಂಭಾಷಣೆಯಲ್ಲಿ ನಿರತಳಾಗಿದ್ದ ಆಕೆ ಆಚೀಚೆ ನೋಡದೆ ರೈಲ್ವೆ ಹಳಿ ದಾಟಲು ಹೋಗುತ್ತಾಳೆ. ಆಗ ಹಿಂದಿನಿಂದ ಬಂದ ರೈಲು ಆಕೆಗೆ ಡಿಕ್ಕಿ ಹೊಡೆಯುತ್ತದೆ.
ಇದನ್ನೂ ಓದಿ: Viral News: ಚೀನಾದಲ್ಲಿ ಸಣ್ಣ ಹುಡುಗರ ಮೂತ್ರಕ್ಕಿದೆ ಭಾರೀ ಬೇಡಿಕೆ; ಶಾಕಿಂಗ್ ಕಾರಣ ಇಲ್ಲಿದೆ
ರೈಲು ಡಿಕ್ಕಿ ಹೊಡೆದ ರಭಸಕ್ಕೆ ಹಾರಿ ಹೋಗಿ ಪ್ಲಾಟ್ಫಾರ್ಮ್ ಮೇಲೆ ಬಿದ್ದ ಆಕೆ ಹಾಗೂ ಆಕೆಯ ಕೈಲಿದ್ದ ಮಗು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಹಿಂದಿನಿಂದ ರೈಲು ತನ್ನ ಕಡೆಗೆ ಬರುತ್ತಿರುವುದು ಅರಿವಿಲ್ಲದ ನಡೆಯುತ್ತಿದ್ದ ಆಕೆಗೆ ರೈಲು ತನ್ನ ಹಿಂದೆಯೇ ಇದೆ ಎಂದು ಗೊತ್ತಾಗುವಷ್ಟರಲ್ಲಿ ಅಪಘಾತ ಉಂಟಾಗಿತ್ತು.
— Horror Mistake (@Horror_clip) September 16, 2024
ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ಕೂಡಲೆ ಸುತ್ತಮುತ್ತಲಿನ ಜನರು ಸಹಾಯಕ್ಕೆ ಧಾವಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಹಿಳೆ ಮತ್ತು ಮಗುವಿನ ಸ್ಥಿತಿ ಇನ್ನೂ ಪೂರ್ತಿಯಾಗಿ ತಿಳಿದುಬಂದಿಲ್ಲ.
ಇದನ್ನೂ ಓದಿ: ಇಲ್ಲಿ ಪೋಷಕರೇ ಹೆಣ್ಣು ಮಕ್ಕಳನ್ನು ಹರಾಜಿನಲ್ಲಿ ಮಾರಾಟ ಮಾಡ್ತಾರಂತೆ
ಹೀಗಾಗಿ, ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಅಥವಾ ರಸ್ತೆಗಳಲ್ಲಿ, ವಿಶೇಷವಾಗಿ ಮಕ್ಕಳೊಂದಿಗೆ ನಡೆಯುವಾಗ ಜಾಗರೂಕರಾಗಿರಬೇಕು. ಒಂದು ಅಜಾಗರೂಕ ನಡೆ ದುರಂತಕ್ಕೆ ಕಾರಣವಾಗಬಹುದು. ದಾಟುವ ಮೊದಲು ಮಾರ್ಗದಲ್ಲಿ ಯಾವುದೇ ವಾಹನ ಬರುತ್ತಿಲ್ಲ ಎಂದು ಎಚ್ಚರವಹಿಸಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ