AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅಜ್ಜಿಯ ಕೊನೆಯ ಆಸೆ ಈಡೇರಿಸುವ ಮೂಲಕ ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡಿಸಿದ ಮೊಮ್ಮಗ, ಆ ಹಿರಿ ಜೀವದ ಖುಷಿ ನೋಡಿ

ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತದೆ, ಎಲ್ಲವನ್ನು ಮರೆಸುತ್ತದೆ. ಆದರೆ ಮನಸ್ಸಿನಲ್ಲಿರುವ ನಿಷ್ಕಲ್ಮಶವಾದ ಸ್ನೇಹ ಮಾತ್ರ ಹಾಗೆಯೇ ಉಳಿದಿರುತ್ತದೆ ಇದೀಗ ವೈರಲ್ ಆಗಿರುವ ವಿಡಿಯೋವು ಈ ಪರಿಶುದ್ಧವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ. ಅಜ್ಜಿಯೊಬ್ಬರು 50 ವರ್ಷಗಳ ಬಳಿಕ ಬಾಲ್ಯದ ಗೆಳತಿಯರನ್ನು ಭೇಟಿಯಾಗಿದ್ದು, ಅವರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಅಜ್ಜಿಯ ಕೊನೆಯ ಆಸೆಯನ್ನು ಮೊಮ್ಮಗನು ಈಡೇರಿಸಿದ್ದು, ಈ ಭಾವನಾತ್ಮಕ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

Video: ಅಜ್ಜಿಯ ಕೊನೆಯ ಆಸೆ ಈಡೇರಿಸುವ ಮೂಲಕ ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡಿಸಿದ ಮೊಮ್ಮಗ, ಆ ಹಿರಿ ಜೀವದ ಖುಷಿ ನೋಡಿ
ವೈರಲ್​​​ ವಿಡಿಯೋ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 18, 2024 | 4:37 PM

Share

ಸ್ನೇಹ ಎಂಬ ಎರಡಕ್ಷರದ ಪದವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ. ಈ ನಿಷ್ಕಲ್ಮಶ ಅನುಬಂಧಕ್ಕೆ ವಯಸ್ಸಿನ ಹಂಗಿಲ್ಲ. ಅದೆಷ್ಟೋ ವರ್ಷಗಳ ಬಳಿಕ ಬಾಲ್ಯದ ಸ್ನೇಹಿತರು ಸಿಕ್ಕರೆ ಆ ಕ್ಷಣವು ಹೇಗಿರಬಹುದು ಒಂದು ಕ್ಷಣ ಯೋಚಿಸಿದ್ದೀರಾ. ಹೌದು, ಆ ಖುಷಿಯನ್ನು ಹೇಳುವುದಕ್ಕೆ ಪದಗಳೇ ಸಾಲುವುದಿಲ್ಲ. ಇಲ್ಲೊಬ್ಬರು ಅಜ್ಜಿಯು ಐವತ್ತು ವರ್ಷಗಳ ಬಳಿಕ ತನ್ನ ಸ್ನೇಹಿತೆಯರನ್ನು ಭೇಟಿ ಮಾಡಿ ಅವರ ಜೊತೆಯಲ್ಲಿ ಸಮಯ ಕಳೆದಿದ್ದಾರೆ. ಈ ಭಾವನಾತ್ಮಕ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಮನಗೆದ್ದಿದೆ.

ಸೋಶಿಯಲ್ ಮೀಡಿಯಾ ಇನ್‌ಪ್ಯೂಯೆನ್ಸರ್ ಅನೀಶ್ ಭಗತ್ ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅನೀಶ್ ಅವರು ತಮ್ಮ ಅಜ್ಜಿ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವುದನ್ನು ಹೇಳಿಕೊಂಡಿದ್ದಾರೆ. ಅದಲ್ಲದೇ ತನ್ನ ಅಜ್ಜಿಯ ಕೊನೆಯ ಆಸೆಗಳನ್ನು ಈಡೇರಿಸಲು ಮುಂದಾಗಿರುವುದನ್ನು ಕಾಣಬಹುದು. ಹೀಗಾಗಿ ಅಜ್ಜಿಯ ಬಾಲ್ಯದ ಸ್ನೇಹಿತೆಯರನ್ನು ಭೇಟಿ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Anish Bhagat (@anishbhagatt)

ಅಜ್ಜಿಯ ಸ್ನೇಹಿತರಿಗೆ ಕರೆ ಮಾಡಿ ಅವರು ಇರುವ ಸ್ಥಳದ ಮಾಹಿತಿಯನ್ನು ಕಲೆ ಹಾಕಿ ಅಜ್ಜಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಸ್ನೇಹಿತರ ಮನೆಯ ಬಾಗಿಲಿನ ಎದುರಿಗೆ ಅನೀಶ್ ನೊಂದಿಗೆ ಅಜ್ಜಿಯು ನಿಂತುಕೊಂಡು ಬೆಲ್ ಬಾರಿಸುವುದನ್ನು ಕಾಣಬಹುದು. ಈ ವೇಳೆಯಲ್ಲಿ ಅಜ್ಜಿಯು ನಾವು ಯಾಕೆ ಇಲ್ಲಿಗೆ ಬಂದಿದ್ದೇವೆ ಎಂದು ಕೇಳಿದ್ದು, ಅಷ್ಟರಲ್ಲಿ ಅಜ್ಜಿಯ ಆತ್ಮೀಯ ಗೆಳೆತಿ ಮನೆಯ ಬಾಗಿಲು ತೆರೆದಿದ್ದಾಳೆ. ಅಜ್ಜಿ ತನ್ನ ಆತ್ಮೀಯ ಸ್ನೇಹಿತೆಯನ್ನು ನೋಡಿ ಪ್ರಾರಂಭದಲ್ಲಿ ಗುರುತಿಸದಿದ್ದರೂ ಆದರೆ ಅಜ್ಜಿಯ ಮುಖದಲ್ಲಿ ಸಂತೋಷವು ಕಾಣುತ್ತಿದೆ. ಬಾಲ್ಯದ ಸ್ನೇಹಿತರನ್ನು ನೋಡಿದ ಅಜ್ಜಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ. ಕೊನೆಗೆ ಎಲ್ಲರ ಜೊತೆಗೆ ಕುಳಿತು ಮಾತನಾಡುವುದನ್ನು ಕುಣಿಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ಬೆಂಗಳೂರು ಮಾಲ್‌ನಲ್ಲಿ ‘ವಿಐಪಿ ಟಾಯ್ಲೆಟ್’ 1,000 ರೂ. ಶಾಪಿಂಗ್ ಮಾಡಿದ್ರೆ ಮಾತ್ರ ಮೂತ್ರ ಮಾಡಲು ಅವಕಾಶ

ಈ ವಿಡಿಯೋವು 11 ಮಿಲಿಯನ್ ಗೂ ಅಧಿಕ ವೀಕ್ಷಣೆಯನ್ನು ಕಂಡಿದ್ದು, ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು,’ ನಾವು ಮುಂದೆ ಒಂದು ದಿನ ಹೀಗೆ ಭೇಟಿಯಾಗೋಣ’ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ‘ಕ್ರೇಜಿ ಕ್ಯೂಟ್ ಹ್ಯಾಪಿ ಹ್ಯೂಮನ್’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಇದನ್ನು ನೋಡಿದ ಮೇಲೆ ನನಗೆ ಅಳುವನ್ನು ತಡೆಯಲು ಸಾಧ್ಯವಾಗಿಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!