AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮಾಲ್‌ನಲ್ಲಿ ‘ವಿಐಪಿ ಟಾಯ್ಲೆಟ್’ 1,000 ರೂ. ಶಾಪಿಂಗ್ ಮಾಡಿದ್ರೆ ಮಾತ್ರ ಮೂತ್ರ ಮಾಡಲು ಅವಕಾಶ

 ಬೆಂಗಳೂರು ಜಾಗತಿಕವಾಗಿ ಗುರುತಿಸಿಕೊಂಡಿರುವ ಜಾಗ. ಅದರಲ್ಲಿಯೂ ವಿವಿಧ ರೀತಿಯ ಶಾಪಿಂಗ್ ತಾಣಗಳಿಗೆ ಹೆಸರುವಾಸಿಯಾದ ಬೆಂಗಳೂರು ಈಗ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ರೆಡ್ಡಿಟ್‌ ಬಳಕೆದಾರರೊಬ್ಬರು ವೈಟ್‌ಫೀಲ್ಡ್‌ನ ಶಾಪಿಂಗ್ ಮಾಲ್ ಒಂದರಲ್ಲಿ, ಸಾರ್ವಜನಿಕರಿಗೆ ಶೌಚಾಲಯ ಬಳಸಲು ಬಿಡದೇ ಅದನ್ನು "ವಿಐಪಿ ಟಾಯ್ಲೆಟ್" ಆಗಿ ಪರಿವರ್ತನೆ ಮಾಡಿರುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಇದೀಗ ಶಾಪಿಂಗ್ ಮಾಲ್ ಗ್ರಾಹಕರು ಹಾಗೂ ಸಾರ್ವಜನಿಕರ ಕೋಪಕ್ಕೆ ಗುರಿಯಾಗಿದೆ. ಹಾಗಾದರೆ ಏನಿದು ವಿಐಪಿ ಟಾಯ್ಲೆಟ್ ಸಮಸ್ಯೆ? ಇಲ್ಲಿದೆ ಮಾಹಿತಿ.

ಬೆಂಗಳೂರು ಮಾಲ್‌ನಲ್ಲಿ 'ವಿಐಪಿ ಟಾಯ್ಲೆಟ್' 1,000 ರೂ. ಶಾಪಿಂಗ್ ಮಾಡಿದ್ರೆ ಮಾತ್ರ ಮೂತ್ರ ಮಾಡಲು ಅವಕಾಶ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Sep 18, 2024 | 2:51 PM

Share

ಬೆಂಗಳೂರು ಜಾಗತಿಕವಾಗಿ ಗುರುತಿಸಿಕೊಂಡಿರುವ ಜಾಗ. ಅದರಲ್ಲಿಯೂ ವಿವಿಧ ರೀತಿಯ ಶಾಪಿಂಗ್ ತಾಣಗಳಿಗೆ ಹೆಸರುವಾಸಿಯಾದ ಬೆಂಗಳೂರು ಈಗ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ರೆಡ್ಡಿಟ್‌ ಬಳಕೆದಾರರೊಬ್ಬರು ವೈಟ್‌ಫೀಲ್ಡ್‌ನ ಶಾಪಿಂಗ್ ಮಾಲ್ ಒಂದರಲ್ಲಿ, ಸಾರ್ವಜನಿಕರಿಗೆ ಶೌಚಾಲಯ ಬಳಸಲು ಬಿಡದೇ ಅದನ್ನು “ವಿಐಪಿ ಟಾಯ್ಲೆಟ್” ಆಗಿ ಪರಿವರ್ತನೆ ಮಾಡಿರುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಇದೀಗ ಶಾಪಿಂಗ್ ಮಾಲ್ ಗ್ರಾಹಕರು ಹಾಗೂ ಸಾರ್ವಜನಿಕರ ಕೋಪಕ್ಕೆ ಗುರಿಯಾಗಿದೆ.

ಏನಿದು ವಿಐಪಿ ಟಾಯ್ಲೆಟ್ ಸಮಸ್ಯೆ?

ಬೆಂಗಳೂರಿನ ಶಾಪಿಂಗ್ ಮಾಲ್‌ನಲ್ಲಿ ವಿಐಪಿ ಟಾಯ್ಲೆಟ್ ನಿರ್ಮಾಣ ಮಾಡಿದ್ದು, ಇದನ್ನು ನೀವು ಬಳಸಬೇಕೆಂದರೆ ಕನಿಷ್ಠ 1,000 ರೂ. ವೆಚ್ಚ ಮಾಡಬೇಕು ಎಂಬ ನಿಯಮವನ್ನು ರೂಪಿಸಿದೆ. ಈ ಬಗ್ಗೆ ಗ್ರಾಹಕರೊಬ್ಬರು ರೆಡ್ಡಿಟ್‌ನಲ್ಲಿ (DeskKey9633 ಮೂಲ ಪೋಸ್ಟ್ ಹಂಚಿಕೆದಾರರು) ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದು, “ವೀಕೆಂಡ್‌ನಲ್ಲಿ ನಾನು ಚರ್ಚ್ ಸ್ಟ್ರೀಟ್‌ನಿಂದ ಶಾಪಿಂಗ್ ಮಾಡಲು ದೂರದ ವೈಟ್‌ಫೀಲ್ಡ್‌ನ ಶಾಪಿಂಗ್‌ ಮಾಲ್‌ಗೆ ಹೋಗಿದ್ದೆ. ನಾನು ದೂರದ ಪ್ರಯಾಣ ಮಾಡಿ ಹೋಗಿದ್ದರಿಂದ ಶಾಪಿಂಗ್‌ಗೆ ಹೋಗುವ ಮೊದಲು ರೆಸ್ಟ್‌ರೂಮ್ ಗೆ ಹೋಗಬೇಕಾಗಿ ಬಂದಿದ್ದರಿಂದ ಎಲ್ಲಿದೆ ಎಂದು ಕೇಳಿ ವಿಚಾರಿಸಿಕೊಂಡು ಅದನ್ನು ಬಳಸಲು ಹೋದೆ. ಆದರೆ ಆ ಮಾಲ್‌ನ ನೆಲಮಹಡಿಯಲ್ಲಿರುವ ಶೌಚಾಲಯವನ್ನು ಅವರು ‘ವಿಐಪಿ ರೆಸ್ಟ್‌ರೂಮ್’ ಎಂದು ಬದಲಾವಣೆ ಮಾಡಿದ್ದು ಇದರ ಜವಾಬ್ದಾರಿಯನ್ನು ಒಬ್ಬ ಮಹಿಳಾ ಭದ್ರತಾ ಸಿಬಂದಿಗೆ ವಹಿಸಿದ್ದು ಆಕೆ, ಇಲ್ಲಿನ ರೆಸ್ಟ್ ರೂಂ ಬಳಸಲು ಶಾಪಿಂಗ್ ಬಿಲ್ ತೋರಿಸಬೇಕೆಂದು ಒತ್ತಾಯಿಸಿದರು. ಆಗ ನನ್ನ ರೀತಿಯೇ ಮತ್ತೊಬ್ಬರು ಬಂದು ನಾವು 1,000 ಶಾಪಿಗ್ ಮಾಡಿದ ಬಿಲ್ ಹರಿದಿದ್ದರೆ ಇದನ್ನು ಬಳಸಬಹುದು ಎಂದು ಹೇಳಿದರು. ಈ ಮಾತನ್ನು ಕೇಳಿ ನನಗೆ ಆಘಾತವಾಯಿತು. ಹಾಗಾದರೆ ಈಗ ಶೌಚಾಲಯವನ್ನು ಬಳಸಲು ನನಗೆ ಬಿಲ್ ಏಕೆ ಬೇಕು? ಎಂಬ ಪ್ರಶ್ನೆ ಸಹಜವಾಗಿ ನನ್ನಲ್ಲಿ ಮೂಡಿತು.”

Discriminatory Bathroom Policy at Phoenix Whitefield – An Unacceptable Experience byu/DeskKey9633 inbangalore

“ಆಗ ಅಲ್ಲಿದ್ದ ಮಹಿಳೆಗೆ ನನ್ನ ಬಳಿ ಬಿಲ್ ಇಲ್ಲ ಎಂದು ವಿವರಿಸಿದಾಗ (ನಾನು ಇದೀಗ ಶಾಪಿಂಗ್ ಮಾಡಲು ಬಂದಿದ್ದೇನೆ) ಆಕೆ, ನನ್ನನ್ನು ಮೇಲೆ ಇರುವ ಮಹಡಿಯ ವಿಶ್ರಾಂತಿ ಕೊಠಡಿಗಳಿಗೆ ಹೋಗುವಂತೆ ಹೇಳಿದರು. ನನಗೆ ಅರ್ಜೆಂಟ್ ಇದ್ದರಿಂದ ನಾನು ಮೇಲಿನ ವಿಶ್ರಾಂತಿ ಕೊಠಡಿಗೆ ಹೋದರೆ ಅವು ಭಯಾನಕ ಸ್ಥಿತಿಯಲ್ಲಿದ್ದವು. ಎಲ್ಲರನ್ನು ಒಂದೇ ಕಡೆ ಕಳಿಸುತ್ತಿದ್ದರಿಂದ ಇಲ್ಲಿನ ಶೌಚಾಲಯಗಳು ಗಲೀಜಾಗಿದ್ದವು. ಶೌಚಾಲಯ ಸರಿಯಾದ ನಿರ್ವಹಣೆ ಮಾಡದೇ ದರ್ವಾಸನೆ ಬೀರುತ್ತಿದ್ದವು. ಜೊತೆಗೆ, ಅನೇಕ ಫ್ಲಶ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇವೆಲ್ಲಾ ನನಗೆ ಬಹಳ ಆಶ್ಚರ್ಯವನ್ನುಂಟು ಮಾಡಿತು. ನೆಲಮಹಡಿಯಲ್ಲಿದ್ದ ಮಾದರಿಯಲ್ಲಿಯೇ ಇತರ ವಿಶ್ರಾಂತಿ ಕೊಠಡಿಗಳನ್ನು ಏಕೆ ಇರಿಸಿಕೊಂಡಿಲ್ಲ ಎಂದು ನನಗೆ ಕೋಪವು ಬಂದಿತು.”

“ಯಾರಿಗಾದರೂ ತುರ್ತಾಗಿ ಶೌಚಾಲಯಕ್ಕೆ ಹೋಗಬೇಕಾದಾಗ ಮತ್ತೊಂದು ಮಹಡಿಗೆ ಹೋಗಿ ಎಂದು ಹೇಳಿದಾಗ ಒತ್ತಡ ಉಂಟಾಗಬಹುದು. ಈ ಶಾಪಿಂಗ್ ಮಾಲ್‌ನವರಿಗೆ ವಿಐಪಿ ರೆಸ್ಟ್ ರೂಂ ಒಂದು ವಿಷಯವಾಗಿದ್ದರೂ, ಇತರ ಸೌಲಭ್ಯಗಳನ್ನು ನಿರ್ಲಕ್ಷಿಸಿರುವುದನ್ನು ಯಾರಿಗಾದರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಬೆಂಗಳೂರಿನ ಯಾವುದೇ ಮಾಲ್‌ನಲ್ಲಿ ಅಥವಾ ನಮ್ಮ ದೇಶದ ಬೇರೆ ಯಾವುದೇ ನಗರದಲ್ಲಿ ಇಂತಹ ನಿಯಮಗಳನ್ನು ಮಾಡಿರುವುದನ್ನು ಅಥವಾ ಪಾಲಿಸಿಕೊಂಡು ಬಂದಿರುವುದನ್ನು ನಾನು ಕೇಳಿಲ್ಲ.ಈ ಶಾಪಿಂಗ್ ಮಾಲ್‌ ನಲ್ಲಿ ಮಾಡಿರುವ ನಿಯಮದಿಂದ ಜನರಿಗೆ ತುಂಬಾ ತೊಂದಯಾಗುತ್ತಿದೆ. ಇಲ್ಲಿಯೂ ಕೂಡ ಅನಗತ್ಯವಾಗಿ ಸಾಮಾಜಿಕ ವರ್ಗಗಳ ವಿಭಜನೆ ಮಾಡಲು ಮುಂದಾಗುತ್ತಿದೆ ಎಂಬ ಭಾವನೆ ಮೂಡಿದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡ ಮಾತನಾಡೋಲ್ಲ ಎಂದಿದ್ದಕ್ಕೆ ಟೋಲ್ ಸಿಬ್ಬಂದಿ ಮೇಲೆ ಗರಂ ಆದ ಕನ್ನಡಿಗ, ವಿಡಿಯೋ ವೈರಲ್

ಅಲ್ಲದೆ ಅವರು ಮಾಲ್‌ ನಲ್ಲಿ ಆಗಿರುವ ಈ ಅನುಭವವನ್ನು ವಿವಿರವಾಗಿ ಹಂಚಿಕೊಂಡಿದ್ದು ಈ ವಿಷಯವಾಗಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಜೊತೆಗೆ “ಈ ಸಮಸ್ಯೆಯನ್ನು ನೀವು ಅನುಭವಿಸಿದ್ದೀರಾ?” ಎಂದು ಪ್ರಶ್ನೆ ಮಾಡಿದ್ದು “ಮಾಲ್‌ನಲ್ಲಿ ಮಾಡಿರುವ ಈ ರೀತಿಯ ನಿಯಮ ಬದಲಾಗದ ಹೊರತು, ನಾನು ಮತ್ತೆ ಆ ಮಾಲ್‌ಗೆ ಭೇಟಿ ನೀಡುವುದಿಲ್ಲ” ಎಂದು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್​​​ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Wed, 18 September 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ