Viral Video : ಸರಪಂಚ್ ಮಹಿಳೆಯ ಇಂಗ್ಲೀಷ್ ಭಾಷಣಕ್ಕೆ ಫಿದಾ ಆದ ಐಎಎಸ್ ಅಧಿಕಾರಿ, ವಿಡಿಯೋ ವೈರಲ್
ಈಗಿನ ಕಾಲದಲ್ಲಿ ಒಬ್ಬ ವ್ಯಕ್ತಿಯು ಧರಿಸುವ ಬಟ್ಟೆಯ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ಅಳೆದುಬಿಡುತ್ತೇವೆ. ಅದರಲ್ಲಿಯು ಹಳ್ಳಿಯ ಜನ ಎಂದರೆ ಅವರಿಗೂ ಏನು ತಿಳಿದಿರುವುದಿಲ್ಲ ಎಂದು ನಿರ್ಲಕ್ಷ್ಯ ಮಾಡುವುದೇ ಹೆಚ್ಚು. ಆದರೆ ಇದಕ್ಕೆ ವ್ಯತಿರಿಕ್ತವೆನಿಸುವ ವಿಡಿಯೋವೊಂದು ವೈರಲ್ ಆಗಿದ್ದು, ಸರಪಂಚ್ ಮಹಿಳೆಯು ಇಂಗ್ಲೀಷ್ ನಲ್ಲಿ ಭಾಷಣ ಮಾಡಿದ್ದು, ಇದನ್ನು ಕಂಡು ಐಎಎಸ್ ಅಧಿಕಾರಿ ಟೀನಾ ದಾಬಿ ಶಾಕ್ ಆಗಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.
ಇಂಗ್ಲಿಷ್ ನಲ್ಲಿ ಮಾತನಾಡುವುದು ಬಹುತೇಕರ ಕನಸಾಗಿರುತ್ತದೆ. ಆದರೆ ಎಲ್ಲರಂತೆ ನಾವು ಕೂಡ ಸರಾಗವಾಗಿ ಇಂಗ್ಲಿಷ್ ಮಾತನಾಡಬೇಕು ಎನ್ನುವುದಿರುತ್ತದೆ. ಹೀಗಾಗಿ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಸೇರಿ ಭಾಷೆಯನ್ನು ಕಲಿಯುತ್ತಾರೆ. ಆದರೆ ಕೆಲವರು ಯಾವುದೇ ತರಬೇತಿಯನ್ನು ಪಡೆಯದೇ ಸಲೀಸಾಗಿ ಇಂಗ್ಲಿಷ್ ಮಾತನಾಡುವುದನ್ನು ನೋಡಿದರೆ ಇದು ಹೇಗೆ ಸಾಧ್ಯ ಎಂದೇನಿಸುತ್ತದೆ. ಅದರಲ್ಲಿಯು ಹಳ್ಳಿಯ ಜನರು ಲೀಲಾಜಾಲವಾಗಿ ಇಂಗ್ಲಿಷ್ ಮಾತನಾಡಿದರೆ ಅದು ಅಚ್ಚರಿಯೇ ಸರಿ. ಇದೀಗ ಹಳ್ಳಿಯ ಮಹಿಳೆಯೊಬ್ಬಳು ಕಾರ್ಯಕ್ರಮವೊಂದರಲ್ಲಿ ಇಂಗ್ಲೀಷ್ ನಲ್ಲೇ ಮಾತನಾಡುವ ಐಎಎಸ್ ಅಧಿಕಾರಿಯನ್ನು ಅಚ್ಚರಿಗೊಳಿಸಿದ್ದಾಳೆ.
ಈ ವಿಡಿಯೋವನ್ನು ಪುನೀತ್ ಸಿಂಗ್ ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ರಾಜಸ್ಥಾನದ ಬರ್ಮಾರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸರಪಂಚ್ ಮಹಿಳೆಯೊಬ್ಬರು ಇಂಗ್ಲೀಷ್ ನಲ್ಲಿ ಸ್ವಾಗತ ಭಾಷಣ ಮಾಡಿದ್ದಾಳೆ. ಹೌದು, ಸರಪಂಚ್ ಸೋನು ಕನ್ವರ್ ಅವರು ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆಯಲ್ಲಿ ವೇದಿಕೆ ಮೇಲೆ ನಿಂತುಕೊಂಡಿದ್ದು, ಮೈಕ್ ಮುಂದೆ ಮಾತು ಆರಂಭಿಸಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
बाड़मेर में IAS टीना डाबी @dabi_tina के सामने जब राजपूती पोशाक और घूँघट में जालीपा महिला सरपंच सोनू कँवर ने जब अपना उद्बोधन अंग्रेज़ी से शुरू किया तो उपस्थित सब लोग चौंक गए और टीना डाबी के चेहरे की मुस्कान बयां कर रही है l.. जिला कलेक्टर खुद को ताली बजाने से नही रोक पाए pic.twitter.com/fLYuo0gqJo
— Kailash Singh Sodha (@KailashSodha_94) September 14, 2024
ಈ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಮೊದಲನೆಯದಾಗಿ ನಮ್ಮ ಕಲೆಕ್ಟರ್ ಟೀನಾ ಮೇಡಮ್ ಅವರನ್ನು ನಾನು ಸ್ವಾಗತಿಸುತ್ತೇನೆ. ಮಹಿಳೆಯಾಗಿ ಟೀನಾ ಮೇಡಮ್ ಅವರನ್ನು ಸ್ವಾಗತಿಸುವುದು ಗೌರವ ಎಂದಿದ್ದಾಳೆ. ತದನಂತರದಲ್ಲಿ ಜಲ ಸಂರಕ್ಷಣೆಯ ಕುರಿತು ಮಾತನಾಡಿದ್ದಾಳೆ ಈ ಸೋನು ಕನ್ವರ್. ಈ ವೇಳೆ ಯಲ್ಲಿ ಐಎಎಸ್ ಅಧಿಕಾರಿ ಟೀನಾ ದಾಬಿ ಸೇರಿದಂತೆ ಸಭೀಕರೆಲ್ಲರಿಗೆ ಆ ಮಹಿಳೆ ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ನೋಡಿ ಶಾಕ್ ಆಗಿದೆ. ಈ ವಿಡಿಯೋ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಮೆಚ್ಚುಗೆಯ ಪ್ರತಿಕ್ರಿಯೆ ಮಾಡಿದ್ದಾರೆ.
ಇದನ್ನೂ ಓದಿ: ಅಜ್ಜಿಯ ಕೊನೆಯ ಆಸೆ ಈಡೇರಿಸುವ ಮೂಲಕ ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡಿಸಿದ ಮೊಮ್ಮಗ, ಆ ಹಿರಿ ಜೀವದ ಖುಷಿ ನೋಡಿ
ಈ ವಿಡಿಯೋಗೆ ನೆಟ್ಟಿಗನೊಬ್ಬರು, ‘ಭಾರತೀಯ ಮಹಿಳೆಯರು ಉತ್ತಮ ಪ್ರತಿಭೆ ಮತ್ತು ಬುದ್ಧಿವಂತಿಕೆಯನ್ನು ಹೊಂದಿದ್ದಾರೆ’ ಎಂದಿದ್ದಾನೆ. ಮತ್ತೊಬ್ಬನು, ‘ನಮ್ಮ ದೇಶಕ್ಕೆ ವಿದ್ಯಾವಂತ ನಾಯಕರ ಅಗತ್ಯವಿದೆ. ನಾವು ವಿದ್ಯಾವಂತ ನಾಯಕರನ್ನು ಹೊಂದಿದ್ದರೆ ದೇಶವು ಪ್ರಗತಿ ಹೊಂದುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಇದು ನಮ್ಮ ಇಂದಿನ ನಮ್ಮ ರಾಷ್ಟ್ರದ ಮಹಿಳೆಯರ ಶಕ್ತಿ’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ