Viral Video: ಚಪ್ಪಲಿ ತೆಗೆದು ಬನ್ನಿ ಎಂದ ವೈದ್ಯನಿಗೆ ಥಳಿಸಿದ ರೋಗಿಯ ಕುಟುಂಬಸ್ಥರು; ಶಾಕಿಂಗ್ ವಿಡಿಯೋ ಇಲ್ಲಿದೆ
ಆಸ್ಪತ್ರೆಗೆ ಬಂದಿದ್ದ ರೋಗಿಯ ಕುಟುಂಬಸ್ಥರು ಚಪ್ಪಲಿ ಹಾಕಿಕೊಂಡೇ ಒಳಗೆ ಬಂದಿದ್ದರು. ಹೀಗಾಗಿ, ಸ್ವಚ್ಛತೆಯ ದೃಷ್ಟಿಯಿಂದ ನಿಮ್ಮ ಚಪ್ಪಲಿಯನ್ನು ಹೊರಗೆ ಬಿಚ್ಚಿಟ್ಟು ಬರಬೇಕು ಎಂದು ರೋಗಿಯ ಮನೆಯವರಿಗೆ ವೈದ್ಯರು ಹೇಳಿದ್ದರು. ಇದರಿಂದ ಕೋಪಗೊಂಡ ಅವರು ವೈದ್ಯರಿಗೆ ಥಳಿಸಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಅಹಮದಾಬಾದ್: ಗುಜರಾತ್ನಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದರಲ್ಲಿ, ಗುಜರಾತ್ ಆಸ್ಪತ್ರೆಯ ವೈದ್ಯರು ತಮ್ಮ ಕನ್ಸಲ್ಟೇಷನ್ ರೂಂಗೆ ಬರುವ ಮೊದಲು ಚಪ್ಪಲಿಯನ್ನು ತೆಗೆದು ಹೊರಗೆ ಇಡಬೇಕೆಂದು ರೋಗಿಯ ಕುಟುಂಬದ ಸದಸ್ಯರಿಗೆ ಸೂಚಿಸಿದ್ದರು. ಇದರಿಂದ ಕೆರಳಿದ ಕುಟುಂಬಸ್ಥರು ಆ ವೈದ್ಯರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಘಾತ ಉಂಟುಮಾಡಿದೆ.
ಗುಜರಾತ್ನ ಭಾವನಗರದ ಸಿಹೋರ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ತಲೆಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ರೋಗಿಯ ಕುಟುಂಬಸ್ಥರು ಮಹಿಳೆಯನ್ನು ಆಸ್ಪತ್ರೆಗೆ ಕರೆತಂದಿದ್ದರು.
Young Doctor assaulted at Sihor hospital in #Bhavnagar district;
Altercation erupts over removing shoes. A verbal altercation turned violent when relatives of a female patient were instructed to remove their footwear before entering the emergency ward.”#MedTwitter @JPNadda pic.twitter.com/b91PU6eECD
— Indian Doctor🇮🇳 (@Indian__doctor) September 16, 2024
ಸಿಸಿಟಿವಿ ದೃಶ್ಯಗಳ ಪ್ರಕಾರ, ಎಮರ್ಜೆನ್ಸಿ ರೂಂ ಒಳಗಿನ ಹಾಸಿಗೆಯ ಮೇಲೆ ಮಹಿಳೆಯ ಪಕ್ಕದಲ್ಲಿ ಕೆಲವು ಪುರುಷರು ನಿಂತಿರುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ನಂತರ, ಡಾ. ಜೈದೀಪ್‌ಸಿನ್ಹ್ ಗೋಹಿಲ್ ಆ ರೂಂಗೆ ಪ್ರವೇಶಿಸಿದರು. ಆಗ ಅಲ್ಲಿದ್ದವರಿಗೆ ನಿಮ್ಮ ಚಪ್ಪಲಿಗಳನ್ನು ಹೊರಗೆ ಕಳಚಿಟ್ಟು ಒಳಗೆ ಬನ್ನಿ ಎಂದು ಸೂಚಿಸಿದರು.
ಇದನ್ನೂ ಓದಿ: ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಇದರಿಂದ ವೈದ್ಯರು ಹಾಗೂ ರೋಗಿಯ ಕುಟುಂಬದವರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪುರುಷರ ಗುಂಪು ವೈದ್ಯರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿತು ಮತ್ತು ಮಹಿಳೆ ಹಾಸಿಗೆಯ ಮೇಲೆ ಮಲಗಿದ್ದರೂ ಸಹ ವೈದ್ಯರನ್ನು ಥಳಿಸಿತು. ಎನ್‌ಡಿಟಿವಿ ಪ್ರಕಾರ, ಈ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ