AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಕನ್ನಡ ಮಾತನಾಡೋಲ್ಲ ಎಂದಿದ್ದಕ್ಕೆ ಟೋಲ್ ಸಿಬ್ಬಂದಿ ಮೇಲೆ ಗರಂ ಆದ ಕನ್ನಡಿಗ, ವಿಡಿಯೋ ವೈರಲ್

ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕೆನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಆಗಾಗ ಜಗಳಗಳು, ಗಲಾಟೆಗಳು ನಡೆಯುತ್ತಲೇ ಇರುತ್ತದೆ. ಇದೀಗ ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗಿದ್ದು, ಟೋಲ್ ಸಿಬ್ಬಂದಿಯನ್ನು ಕನ್ನಡದಲ್ಲಿ ಮಾತನಾಡಬೇಕೆಂದು ಚಾಲಕ ಒತ್ತಾಯಿಸಲಾಗಿದೆ. ಆದರೆ ಸಿಬ್ಬಂದಿ ಮಾತ್ರ ಹಿಂದಿ ರಾಷ್ಟ್ರ ಭಾಷೆ, ಹಾಗಾಗಿ ನಾನು ಹಿಂದಿಯಲ್ಲಿ ಮಾತನಾಡುತ್ತೇನೆ ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Video : ಕನ್ನಡ ಮಾತನಾಡೋಲ್ಲ ಎಂದಿದ್ದಕ್ಕೆ ಟೋಲ್ ಸಿಬ್ಬಂದಿ ಮೇಲೆ ಗರಂ ಆದ ಕನ್ನಡಿಗ, ವಿಡಿಯೋ ವೈರಲ್
ವೈರಲ್​​ ವಿಡಿಯೋ
ಸಾಯಿನಂದಾ
| Edited By: |

Updated on: Sep 18, 2024 | 12:48 PM

Share

ಕರ್ನಾಟಕದಲ್ಲಿ ಕನ್ನಡ ಮಾತಾನಾಡುವವರ ಸಂಖ್ಯೆಯು ಕಡಿಮೆಯಾಗುತ್ತಿದೆ. ಈಗಿನ ಯುವಕ ಯುವತಿಯರಂತೂ ಕನ್ನಡ ಗೊತ್ತಿದ್ದರೂ ಮಾತನಾಡದೇ, ಇಂಗ್ಲಿಷ್ ಸೇರಿದಂತೆ ಬೇರೆ ಭಾಷೆಯ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಹೀಗಾಗಿ ಕನ್ನಡ ಭಾಷೆ ಉಳಿಸಿ ಬೆಳೆಸಿ ಎನ್ನುವ ಕೂಗುಗಳು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹಿಂದಿ ಮಾತನಾಡುತ್ತಿರುವ ಟೋಲ್ ಸಿಬ್ಬಂದಿಯ ವಿರುದ್ಧ ಕನ್ನಡಿಗನೊಬ್ಬನು ಗರಂ ಆಗಿದ್ದಾನೆ. ಈ ವೇಳೆಯಲ್ಲೂ ಕನ್ನಡ ಭಾಷೆ ಮಾತನಾಡುವಂತೆ ಹೇಳುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಪೂಜಾ ಶರ್ಮಾ ಹೆಸರಿನ ಸೋಶಿಯಲ್ ಮೀಡಿಯಾ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಉತ್ತರ ಭಾರತೀಯರನ್ನು ಕನ್ನಡ ಮಾತನಾಡುವಂತೆ ಹೇಗೆ ಒತ್ತಾಯಿಸಲಾಗುತ್ತದೆ ಎಂಬುದನ್ನು ನೋಡಿ ಎಂದು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಟೋಲ್ ಸಿಬ್ಬಂದಿಯನ್ನು ಕನ್ನಡದಲ್ಲಿ ಮಾತನಾಡುವಂತೆ ಹೇಳುವುದನ್ನು ಕಾಣಬಹುದು. ಕಾರಿನಲ್ಲಿದ್ದ ವ್ಯಕ್ತಿ ಕೇಳಿದ ಪ್ರಶ್ನೆಗೆ ಟೋಲ್ ಸಿಬ್ಬಂದಿ ಕನ್ನಡ ಮಾತನಾಡುವುದಿಲ್ಲ.

ವೈರಲ್​​ ವಿಡಿಯೋ  ಇಲ್ಲಿದೆ ನೋಡಿ:

ಈತನು ತನ್ನ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದು, ಭಾರತದ ಭಾಷೆ ಹಿಂದಿ ಅದನ್ನೇ ಮಾತನಾಡುತ್ತೇನೆ. ಇದು ಕೇಂದ್ರದ ಟೋಲ್, ಮಹಾರಾಷ್ಟ್ರದಲ್ಲಿ ಮರಾಠಿ, ತಮಿಳುನಾಡಿನಲ್ಲಿ ತಮಿಳು, ಕರ್ನಾಟಕದಲ್ಲಿ ಕನ್ನಡ ಈ ರೀತಿ ಮಾತನಾಡಲು ಆಗುವುದಿಲ್ಲ,. ಹಿಂದಿಯಷ್ಟೆ ಮಾತನಾಡುತ್ತೇನೆ ಎಂದು ಹೇಳುತ್ತಾನೆ. ಸಿಬ್ಬಂದಿಯು ಹೀಗೆನ್ನುತ್ತಿದ್ದಂತೆ ಕಾರಿನಲ್ಲಿದ್ದ ವ್ಯಕ್ತಿಯು ಕೋಪಗೊಂಡು, ಕರ್ನಾಟಕದಲ್ಲಿ ಇದ್ದು ಕನ್ನಡ ಮಾತನಾಡೋದಿಲ್ಲ ಅಂತೀಯಾ ಎಂದು ಪ್ರಶ್ನಿಸಿದ್ದಾನೆ.

ಸಿಬ್ಬಂದಿಯ ಜೊತೆಗೆ ಇದ್ದ ಮತ್ತೊಬ್ಬರು ಕನ್ನಡ ಬರುವುದಿಲ್ಲ ಎನ್ನುತ್ತಿದ್ದಾರೆ ಅಲ್ವಾ ಎಂದು ಹಿಂದಿಯಲ್ಲಿ ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಕಾರಿನಲ್ಲಿದ್ದ ವ್ಯಕ್ತಿಯು ಸಿಬ್ಬಂದಿಯು ಕನ್ನಡ ಬರುವುದಿಲ್ಲ ಎಂದು ಹೇಳುತ್ತಿಲ್ಲ, ಕನ್ನಡ ಮಾತನಾಡೋದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದಾನೆ. ಈ ವಿಡಿಯೋದಲ್ಲಿ ಟೋಲ್ ಸಿಬ್ಬಂದಿಯು ಕಾರಿನಲ್ಲಿದ್ದ ವ್ಯಕ್ತಿಯ ಜೊತೆಗೆ ಜಗಳಕ್ಕೆ ಸಿದ್ಧವಾಗಿರುವಂತಿದೆ. ಈ ಘಟನೆಯು ಕರ್ನಾಟಕ-ಮಹಾರಾಷ್ಟ್ರ ಗಡಿಯ ಟೋಲ್ ಬೂತ್‌ನಲ್ಲಿ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಪ್ರಾಧ್ಯಾಪಕರಿಗೆ ಪ್ರಾಂಕ್ ಮಾಡಿದ ಬೆಂಗಳೂರು ವಿದ್ಯಾರ್ಥಿಗಳು, ಪ್ರೊಫೆಸರ್‌ ರಿಯಾಕ್ಷನ್ ಹೇಗಿತ್ತು ನೋಡಿ

ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ 89 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ನೆಟ್ಟಿಗರೊಬ್ಬರು, ಅವರು ಕನ್ನಡ ಮಾತನಾಡಬೇಕು ಇಲ್ಲದಿದ್ದರೆ ಅವರು ತಮ್ಮ ರಾಜ್ಯಗಳಿಗೆ ಹೋಗಿ ಅಲ್ಲಿ ವಾಸಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಕನ್ನಡ ಮಾತನಾಡಲು ಬಲವಂತ ಪಡಿಸುವುದು ಎಂದು ಸ್ಪಷ್ಟವಾಗಿದೆ ತಿಳಿಯುತ್ತದೆ. ಟೋಲ್ ನಿರ್ವಾಹಕರು ಕನ್ನಡದಲ್ಲಿ ಮಾತನಾಡಲು ಸಿದ್ಧರಿಲ್ಲ ಎಂದು ಸ್ಪಷ್ಟವಾಗಿ ಹೇಳಿದಾಗ, ಕನ್ನಡಿಗನು ಸಂಭಾಷಣೆಯನ್ನು ಕೈಬಿಟ್ಟು ಮುಂದೆ ಹೋಗಬೇಕು. ಟೋಲ್ ನಿರ್ವಾಹಕರನ್ನು ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸುವುದು ಸ್ವೀಕಾರಾರ್ಹವಲ್ಲ. ಟೋಲ್ ಆಪರೇಟರ್ ಕನ್ನಡಿಗನ ವಿರುದ್ಧ ಎಫ್ಐಆರ್ ದಾಖಲಿಸಬೇಕು’ ಎಂದಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​