Viral Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ; ಅಚ್ಚರಿಯಂತೆ ಬಚಾವಾದ ವಿಡಿಯೋ ವೈರಲ್

ಛತ್ತೀಸ್‌ಗಢದ ರಾಯ್‌ಪುರ ನಿಲ್ದಾಣಕ್ಕೆ ರೈಲು ಪ್ರವೇಶಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ಲಾಟ್​ಫಾರ್ಮ್​ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ ದೃಶ್ಯಾವಳಿ ಸೆರೆಯಾಗಿದೆ.

Viral Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ; ಅಚ್ಚರಿಯಂತೆ ಬಚಾವಾದ ವಿಡಿಯೋ ವೈರಲ್
Image Credit source: Twitter
Edited By:

Updated on: Jun 02, 2022 | 8:42 AM

ನವದೆಹಲಿ: ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ ಕಾಲು ಮುರಿದುಕೊಂಡವರು, ಗಾಯ ಮಾಡಿಕೊಂಡವರು, ಪ್ರಾಣವನ್ನೇ ಕಳೆದುಕೊಂಡವರ ಸುದ್ದಿಗಳು ಆಗಾಗ ವೈರಲ್ (Video Viral) ಆಗುತ್ತಿರುತ್ತದೆ. ಇದೀಗ ರೈಲ್ವೆ ಇಲಾಖೆ ತನ್ನ ಟ್ವಿಟ್ಟರ್​ (Twitter) ಪೇಜಿನಲ್ಲಿ ಇದೇ ರೀತಿಯ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಓಡಿಕೊಂಡು ಚಲಿಸುವ ರೈಲನ್ನು ಹತ್ತಲು ಹೋದ ಮಹಿಳೆಯನ್ನು ಪೊಲೀಸ್ ಯಾವ ರೀತಿ ಕಾಪಾಡಿದ ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಭಾರತದಲ್ಲಿನ ರೈಲ್ವೆ ಸಚಿವಾಲಯವು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆಯನ್ನೂ ನೀಡಿದೆ. ಓಡುತ್ತಿರುವ ರೈಲಿನ ಬಳಿ ಮಹಿಳೆಯೊಬ್ಬರು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸದೆ ಆ ರೈಲನ್ನು ಹತ್ತಲು ಪ್ರಯತ್ನಿಸಿದ್ದಾರೆ. ಆ ರೈಲು ನಿಲ್ಲುವವರೆಗೂ ಕಾಯದೆ ಪ್ಲಾಟ್​ಫಾರ್ಮ್​ಗೆ ಬರುತ್ತಿದ್ದ ರೈಲನ್ನು ಹತ್ತಲು ಹೋದ ಆಕೆ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.

ಇದನ್ನೂ ಓದಿ
Viral Video: ಅಮ್ಮನೊಂದಿಗೆ ವರ್ಕ್​ಔಟ್ ಮಾಡಿದ 5 ತಿಂಗಳ ಮಗು; ತಮಾಷೆಯ ವಿಡಿಯೋ ವೈರಲ್
Viral Video: ಮರ ಹತ್ತಿ ಕೋತಿಯನ್ನು ಬೇಟೆಯಾಡಿ ಕೊಂದ ಚಿರತೆ; ವಿಡಿಯೋ ವೈರಲ್
Viral Video: ಚಿಕ್ಕ ಹುಡುಗಿಯನ್ನು ಯಾಮಾರಿಸಿ ಲಾಲಿಪಾಪ್ ಕಚ್ಚಿಕೊಂಡು ಓಡಿದ ನಾಯಿಮರಿ; ವಿಡಿಯೋ ವೈರಲ್

ಸ್ವಲ್ಪ ಹೆಚ್ಚೂಕಡಿಮೆಯಾಗಿದ್ದರೂ ಆಕೆಯ ಜೀವವೇ ಹೋಗುತ್ತಿತ್ತು. ಆದರೆ, ಪೊಲೀಸ್ ಸಿಬ್ಬಂದಿಯ ಮುನ್ನೆಚ್ಚರಿಕೆಯಿಂದ ಆಕೆ ಬಚಾವಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ರೈಲ್ವೆ ಸ್ಟೇಷನ್​ನಲ್ಲಿ ಜನರು ಯಾವ ರೀತಿ ವರ್ತಿಸಬಾರದು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.

ಇದನ್ನೂ ಓದಿ: Viral Video: ಮರ ಹತ್ತಿ ಕೋತಿಯನ್ನು ಬೇಟೆಯಾಡಿ ಕೊಂದ ಚಿರತೆ; ವಿಡಿಯೋ ವೈರಲ್

ಭಾರತದ ಛತ್ತೀಸ್‌ಗಢದ ರಾಯ್‌ಪುರ ನಿಲ್ದಾಣಕ್ಕೆ ರೈಲು ಪ್ರವೇಶಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ಲಾಟ್​ಫಾರ್ಮ್​ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ ದೃಶ್ಯಾವಳಿ ಸೆರೆಯಾಗಿದೆ. ರೈಲು ಓಡುತ್ತಿರುವಾಗಲೇ ಮಹಿಳೆಯೊಬ್ಬರು ಅದರ ಬಳಿ ಓಡಿಹೋಗಿ, ಅದನ್ನು ಏರಲು ಹೇಗೆ ಪ್ರಯತ್ನಿಸುತ್ತಾರೆ ಎಂಬುದನ್ನು ಇದರಲ್ಲಿ ನೋಡಬಹುದು. ಅದಾದ ಕೆಲವೇ ಸೆಕೆಂಡುಗಳಲ್ಲಿ ಆಕೆ ಅತ್ಯಂತ ಅಪಾಯಕಾರಿ ರೀತಿಯಲ್ಲಿ ರೈಲಿನ ಕೆಳಗೆ ಜಾರುತ್ತಾರೆ.

ಆದರೆ, ರೈಲ್ವೆ ಉದ್ಯೋಗಿಯ ಜಾಗರೂಕತೆ ಆ ಮಹಿಳೆಯ ಜೀವವನ್ನು ಉಳಿಸಿದೆ. ಛತ್ತೀಸ್‌ಗಢದ ರಾಯ್‌ಪುರ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲು ಹತ್ತುವಾಗ ಮಹಿಳೆಯೊಬ್ಬರು ಏಕಾಏಕಿ ಕೆಳಗೆ ಬಿದ್ದಿದ್ದಾರೆ. ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಸಿಬ್ಬಂದಿ ಕೂಡಲೇ ಆಕೆಯ ಪ್ರಾಣ ಉಳಿಸಿದ್ದಾರೆ. ಚಲಿಸುವ ರೈಲಿನಲ್ಲಿ ಹತ್ತಬೇಡಿ ಅಥವಾ ಇಳಿಯಬೇಡಿ, ಅದು ಮಾರಣಾಂತಿಕವಾಗಬಹುದು ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ. ಮೇ 31ರಂದು ರೈಲ್ವೇ ಸಚಿವಾಲಯವು ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಾಗಿನಿಂದ 400ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ