ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರೆ ಖಂಡಿತ ಈ ಅನುಭವಗಳು ಆಗಿರಬಹುದು, ಇಲ್ಲದಿದ್ದರೆ ನೀವು ಕೂಡ ಚಿಕ್ಕ ವಯಸ್ಸಿನಲ್ಲಿ ಶಾಲೆ ಅಥವಾ ನಿಮಗೆ ಕಷ್ಟವಾಗಿರುವ ತರಬೇತಿಗಳಿಗೆ ಅಂದರೆ ಕರಾಟೆ,ನೃತ್ಯ, ಚಿತ್ರಕಲೆ, ಕ್ರೀಡೆಗೆ ಹೋಗುವುದಕ್ಕೆ ನಿರಾಸಕ್ತಿ ಮಾಡಿರಬಹುದು. ಏಕೆಂದರೆ ನಿಮಗೆ ಅದು ಇಷ್ಟ ಇಲ್ಲದೆ ಇರಬಹುದು, ಮನೆಯವರ ಒತ್ತಡಕ್ಕೆ ನೀವು ಹೋಗುತ್ತಿರಬಹುದು, ಇಂತಹದೇ ಒಂದು ಪ್ರಸಂಗ ಇಲ್ಲಿದೆ ನೋಡಿ, ಆ ಮಗುವನ್ನು ನೋಡುವಾಗ ನಗುವು ಬರುತ್ತದೆ ಜೊತೆಗೆ ಪಾಪ ಎಂದು ಆನ್ನಿಸುವುದು ಖಂಡಿತ. ಈ ವಿಡಿಯೋವು ಇದೀಗ ಸಖತ್ ವೈರಲ್ ಆಗುತ್ತಿದೆ. ತುಂಬಾ ನೋವಿನಿಂದ ಆ ಹುಡುಗ ಬಾಕ್ಸಿಂಗ್ ಮಡುತ್ತಿರುವುದನ್ನು ಈ ವಿಡಿಯೋದಲ್ಲಿ ನೀವು ನೋಡುತ್ತಿರಬಹುದು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತುಂಬಾ ಭಾವನತ್ಮಾಕವಾಗಿ ಕಮೆಂಟ್ ಕೂಡ ಮಾಡಿದ್ದಾರೆ. ಈ ವಿಡಿಯೋವನ್ನು Figen ಎನ್ನುವ ಖಾತೆಯಿಂದ ಈ ವಿಡಿಯೋ ವೈರಲ್ ಆಗಿದೆ.
When your parents force you to do something.
ಇದನ್ನೂ ಓದಿ— Figen (@TheFigen) July 13, 2022
ಈ ವಿಡಿಯೋದಲ್ಲಿ ನೀವು ನೋಡಿದಂತೆ ಕಿಕ್‌ಬಾಕ್ಸಿಂಗ್ ತರಗತಿಯಲ್ಲಿ ಒಬ್ಬ ಹುಡುಗ ತುಂಬಾ ಖುಷಿಯಿಂದ ಕಿಕ್‌ಬಾಕ್ಸಿಂಗ್ ಮಾಡುತ್ತಾನೆ. ಮತ್ತೊಬ್ಬ ಹುಡುಗ ಕಣ್ಣೀರು ಹಾಕುತ್ತಾ ಕಿಕ್‌ಬಾಕ್ಸಿಂಗ್ ಮಾಡುತ್ತಾನೆ . ಇದರ ಜೊತೆಗೆ ಅವನು ಕಿಕ್‌ಬಾಕ್ಸಿಂಗ್ ತುಂಬಾ ಮೃದುವಾಗಿ ಮಾಡುತ್ತಾನೆ. ಪೋಷಕರು ಹೇಳಿದಂತೆ ಮಾಡಲು ಒಪ್ಪದಾಗ ಮಕ್ಕಳು ಈ ರೀತಿ ಮಾಡುತ್ತಾರೆ. ಈ ವೀಡಿಯೊವನ್ನು 592k ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವಿಡಿಯೋವನ್ನು ನೋಡಿ ಅನೇಕರು ನಗು ತಡೆಯಲು ಆಗುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಆತನಿಗೆ ಮನೆಯಲ್ಲಿ ಎಷ್ಟು ಒತ್ತಡ ಇರಬಹುದು ಎಂದು ಹೇಳಿಕೊಂಡಿದ್ದಾರೆ.
Published On - 1:33 pm, Wed, 20 July 22