ಬಹಳ ಅಪಾಯಕಾರಿ ರೀತಿಯಲ್ಲಿ ಹಳಿದಾಟುವ ಮಹಿಳೆ ಕೂದಲೆಳೆ ಅಂತರದಿಂದ ಸಾವು ತಪ್ಪಿಸಿಕೊಳ್ಳುತ್ತಾಳೆ! ಮೈ ಜುಮ್ಮೆನಿಸುವ ವೈರಲ್ ವಿಡಿಯೋ

ಐಎಎಸ್ ಅಧಿಕಾರಿ ಅವನೀಶ್ ಶರಣ್ ಶೇರ್ ಮಾಡಿರುವ ಸದರಿ ವಿಡಿಯೋ ವೈರಲ್ ಆಗಿದ್ದು ಒಂದು ಲಕ್ಷಕ್ಕಿಂತ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ವಿಡಿಯೋವನ್ನು ಮಾಡಿರುವ ವ್ಯಕ್ತಿ ಹಳಿ ದಾಟುತ್ತಿರುವವರಿಗೆ ಮತ್ತೊಂದು ಕಡೆಯಿಂದ ಟ್ರೈನ್ ಬರುತ್ತಿರುವ ಬಗ್ಗೆ ಎಚ್ಚರಿಸುತ್ತಾನೆ. ಆಗಲೇ ಅವರೆಲ್ಲ ಗಾಬರಿಗೊಳಗಾಗುತ್ತಾರೆ.

ಕೂದಲೆಳೆ ಅಂತರದಿಂದ ಸಾವು ತಪ್ಪಿಸಿಕೊಂಡ ಮಹಿಳೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 20, 2022 | 12:24 PM

ಸಾವಿನೊಂದಿಗೆ (death) ಚೆಲ್ಲಾಟ ಅಂದರೆ ಇದೇ ಇರಬೇಕು ಮಾರಾಯ್ರೇ. ಈ ವಿಡಿಯೋ ನೋಡಿ, ಮಹಿಳೆಯೊಬ್ಬಳು ಕೂದಲೆಳೆಯ ಅಂತರದಲ್ಲಿ ನಿಶ್ಚಿತ ಸಾವಿನಿಂದ ಪಾರಾಗುತ್ತಾಳೆ. ಮಹಿಳೆಯ ಕುಟುಂಬವಲ್ಲದೆ ಬೇರೆ ಕೆಲವರು ಸಹ ಮತ್ತೊಂದು ಟ್ರ್ಯಾಕ್ ಗಳ (tracks) ಮೇಲೆ ನಿಂತಿರುವ ಟ್ರೈನಿಂದ ಇಳಿದಿದ್ದಾರೆ. ಯಾವುದೇ ಪ್ಲಾಟ್ ಫಾರ್ಮ್ (platform) ಕಾಣಿಸುತ್ತಿಲ್ಲವಾದ್ದರಿಂದ ಇದು ಯಾವ ಊರು ಅಂತ ನಮಗೆ ಗೊತ್ತಿಲ್ಲ. ಪ್ರಾಯಶಃ ಮಹಿಳೆ ಸೇರಿದಂತೆ ರೈಲಿನಿಂದ ಇಳಿದವರಿಗೆ ಅಲ್ಲಿಂದ ಮನೆ ಹತ್ತಿರವಾಗಬಹುದು. ಚಲಿಸದೆ ನಿಂತಿರುವ ಪಕ್ಕದ ಹಳಿಗಳ ಮೇಲೆ ಆ ಕಡೆಯಿಂದ ಮತ್ತೊಂದು ಟ್ರೈನ್ ಬರುತ್ತಿರುವುದು ವಿಡಿಯೋನಲ್ಲಿ ಕಾಣಿಸುತ್ತದೆ. ಅದು ಪಾಸ್ ಆಗುವ ಮೊದಲೇ ಹಳಿ ದಾಟಿದ್ದ ಮಹಿಳೆ ವಾಪಸ್ಸು ಬರುತ್ತಾಳೆ. ಆಗಲೇ ಆ ಕಡೆಯಿಂದ ಟ್ರೈನು ಜೋರಾಗಿ ವಿಶಲ್ ಹಾಕುತ್ತಾ ಬಂದುಬಿಡುತ್ತದೆ. ಚೆನ್ನಾಗಿ ಗಮನಿಸಿ. ಮಹಿಳೆಯಿಂದ ಹಳಿ ದಾಟುವುದು ಕೇವಲ ಒಂದು ಕ್ಷಣ ತಡವಾಗಿದ್ದರೆ ರೈಲಿನಡಿ ಸಿಕ್ಕಿಬಿಡುತ್ತಿದ್ದಳು!

ಐಎಎಸ್ ಅಧಿಕಾರಿ ಅವನೀಶ್ ಶರಣ್ ಶೇರ್ ಮಾಡಿರುವ ಸದರಿ ವಿಡಿಯೋ ವೈರಲ್ ಆಗಿದ್ದು ಒಂದು ಲಕ್ಷಕ್ಕಿಂತ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ವಿಡಿಯೋವನ್ನು ಮಾಡಿರುವ ವ್ಯಕ್ತಿ ಹಳಿ ದಾಟುತ್ತಿರುವವರಿಗೆ ಮತ್ತೊಂದು ಕಡೆಯಿಂದ ಟ್ರೈನ್ ಬರುತ್ತಿರುವ ಬಗ್ಗೆ ಎಚ್ಚರಿಸುತ್ತಾನೆ. ಆಗಲೇ ಅವರೆಲ್ಲ ಗಾಬರಿಗೊಳಗಾಗುತ್ತಾರೆ.

ಅದೇ ಗಾಬರಿಯಲ್ಲಿ ಜನ ತಮ್ಮ ಸಾಮಾನುಗಳನ್ನು ಅತ್ತಿಂದಿತ್ತ ಬಿಸಾಡಲಾರಂಭಿಸುತ್ತಾರೆ. ಅಪಾಯದಿಂದ ಪಾರಾದ ಮಹಿಳೆ ಹಳಿ ದಾಟಲು ಪ್ರಯತ್ನಿಸುವ ಒಬ್ಬ ಹಿರಿಯ ಮಹಿಳೆಯನ್ನು (ಆಕೆಯ ಸಂಬಂಧಿಯಾಗಿರಬಹುದು) ತಡೆಯಲು ಈ ಕಡೆಗೆ ಧಾವಿಸುತ್ತಾಳೆ. ಆಕೆಯನ್ನು ಉಳಿಸುವ ಉದ್ದೇಶದಿಂದ ಆಕೆ ತನ್ನ ಜೀವವನ್ನು ತೀವ್ರ ಸ್ವರೂಪದ ಅಪಾಯಕ್ಕೊಡುತ್ತಾಳೆ. ಆಕೆಯೊಬ್ಬಳೇ ಅಂತಲ್ಲ ಹಳಿ ದಾಟಿದವರು ಕೂಡ ತಮ್ಮ ಜೀವವನ್ನು ರಿಸ್ಕ್​ನಲ್ಲಿ ಹಾಕಿ ಹಾಗೆ ಮಾಡಿದ್ದಾರೆಂದರೆ ತಪ್ಪೆನಿಸದು.

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್

ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ

ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ

ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ

ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ

ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ