ಏಕಾಏಕಿ ಫೇಮಸ್ ಆಗುವ ಹುಚ್ಚಿನಲ್ಲಿ ಜನ ಏನೇನೋ ಗಿಮಿಕ್ಗಳನ್ನು ಮಾಡುತ್ತಿರುತ್ತಾರೆ. ಸೆಲ್ಫಿ, ರೀಲ್ಸ್ ಮಾಡಿ ಸಾಮಾಜಿಕ ಮಾಧ್ಯಮಗಳ (Socail Media) ಮೂಲಕ ಗಮನ ಸೆಳೆಯಲು ಯತ್ನಿಸುತ್ತಿರುತ್ತಾರೆ. ಯುವಕನೊಬ್ಬ ಚಿರತೆ (Cheetah) ಜೊತೆ ಸೆಲ್ಫಿ ತೆಗೆಯುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಟ್ವಿಟ್ಟರ್ಗಳಲ್ಲಿ ವೈರಲ್ ಆಗುತ್ತಿದೆ. ಅನೇಕರು ಸಿಂಹ, ಹುಲಿ ಇತ್ಯಾದಿ ಪ್ರಾಣಿಗಳ ಜೊತೆ ಫೋಟೋ ಕ್ಲಿಕ್ ಮಾಡಲು ಮೃಗಾಲಯಕ್ಕೆ ಹೋದರೆ ಈ ವ್ಯಕ್ತಿ ಬಯಲೊಂದರಲ್ಲಿ ಚಿರತೆಯ ಸಮೀಪದಲ್ಲಿ ನಿಂತುಕೊಂಡು ಸೆಲ್ಫಿ ಕ್ಲಿಕ್ ಮಾಡಿದ್ದಾನೆ.
ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಬಯಲಿನಲ್ಲಿ ನಿಂತುಕೊಂಡು ಚಿರತೆ ಜೊತೆ ಸೆಲ್ಫಿ ತೆಗೆಯುತ್ತಿರುವ ದೃಶ್ಯವಿದೆ. ಆದರೆ ಈ ಚಿರತೆ ಆಲಸ್ಯದಿಂದ ಇದ್ದಂತೆ ಇದೆ. ಅದು ಸಂಪೂರ್ಣ ಆರೋಗ್ಯಕರವಾಗಿ ಇದೆಯೇ ಅಥವಾ ಏನಾದರೂ ಸಮಸ್ಯೆ ಎಂದು ಬಳಲುತ್ತಿದೆಯೇ ಎಂಬುದು ಖಚಿತವಾಗಿಲ್ಲ.
ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದ್ದು, ಶೇರ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನ ಅದನ್ನು ವೀಕ್ಷಿಸಿದ್ದಾರೆ. ಅದು ನಿಜವಾಗಿಯೂ ಚಿರತೆಯೇ ಅಥವಾ ನಾಯಿಗೆ ಬಣ್ಣ ಕೊಡಲಾಗಿದೆಯೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ್ರೆ ನೀವು ಶಾಕ್ ಆಗುವುದಂತೂ ಖಂಡಿತ.
ಇದನ್ನೂ ಓದಿ: ಎಣ್ಣೆಯ ಬದಲಿಗೆ ತಪ್ಪಾಗಿ ಶವರ್ ಜೆಲ್ ಬಳಸಿ ಚಿಕನ್ ಕರಿ ತಯಾರಿಸಿದ ಮಹಿಳೆ
ಅಂದಹಾಗೆ, ಈ ಘಟನೆ ನಡೆದಿರುವುದು ಎಲ್ಲಿ? ಚಿರತೆ ಜೊತೆ ಸೆಲ್ಫಿ ತೆಗೆದ ವ್ಯಕ್ತಿ ಯಾರು? ಇತ್ಯಾದಿ ಯಾವ ವಿವರಗಳನ್ನೂ ವಿಡಿಯೋದ ಜೊತೆ ಹಂಚಿಕೊಳ್ಳಲಾಗಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ