Viral Video: ಕೆಡವಿದ ಹಕ್ಕಿ ಗೂಡಿನ ಪುನರ್ ನಿರ್ಮಾಣ, ಇದಕ್ಕೆ ಸೋಷಿಯಲ್ ಮೀಡಿಯಾವೇ ಕಾರಣ
ಇತ್ತೀಚಿಗೆ ವಿದ್ಯುತ್ ಕಂಬದ ಮೇಲಿದ್ದ ಹಕ್ಕಿ ಗೂಡನ್ನು ಕೆಡವಿದಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ವೀಡಿಯೋದಲ್ಲಿ ಸೂರನ್ನು ಕಳೆದುಕೊಂಡ ಹಕ್ಕಿಯ ಆಕ್ರಂದನವನ್ನು ಕಂಡು ನೆಟ್ಟಿಗರು ಮರುಕ ವ್ಯಕ್ತಪಡಿಸಿದ್ದರು. ಇದೀಗ ಸೋಷಿಯಲ್ ಮೀಡಿಯಾದ ಕಾರಣದಿಂದಲೇ ಮತ್ತೆ ಅದೇ ಜಾಗದಲ್ಲಿ ಹಕ್ಕಿಗೆ ಹೊಸ ಗೂಡನ್ನು ನಿರ್ಮಿಸಲಾಗಿದೆ.

ಕೆಲ ದಿನಗಳ ಹಿಂದೆ ವಿದ್ಯುತ್ ಕಂಬದ ಮೇಲೆ ಹಕ್ಕಿಯೊಂದು ಕಟ್ಟಿದ್ದಂತಹ ಸುಂದರ ಗೂಡೊಂದನ್ನು ಲೈನ್ ಮ್ಯಾನ್ ಗಳು ಕೆಡವುವಂತಹ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ತನ್ನ ಸೂರು ದ್ವಂಸವಾಗಿದೆ ಎಂಬ ಅರಿವೇ ಇಲ್ಲದ ಹಕ್ಕಿಯೊಂದು ಗೂಡನ್ನು ಇನ್ನಷ್ಟು ಗಟ್ಟಿಗೊಳಿಸಲು ಪುಟ್ಟ ಮರದ ತುಂಡನ್ನೊಂದು ಬಾಯಲ್ಲಿ ಹಿಡಿದುಕೊಂಡು ವಿದ್ಯುತ್ ಕಂಬದ ಬಳಿ ಬಂದು, ಅಲ್ಲಿ ಗೂಡು ಮತ್ತು ತನ್ನವರು ಇಲ್ಲದ್ದನ್ನು ಕಂಡು ಆ ಹಕ್ಕಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಈ ದೃಶ್ಯ ಎಂತಹ ಕಲ್ಲು ಮನಸ್ಸನ್ನು ಕೂಡಾ ಕರಗಿಸುವಂತಿತ್ತು. ಹಕ್ಕಿ ಗೂಡನ್ನು ಕೆಡವಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಇದೀಗ ಅದೇ ಜಾಗದಲ್ಲಿ ಹೊಸ ಗೂಡನ್ನು ನಿರ್ಮಿಸಲಾಗಿದೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
@official_hindu_sangathan1 ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾದ ಈ ವೈರಲ್ ವಿಡಿಯೋದಲ್ಲಿ ಲೈನ್ ಮ್ಯಾನ್ಗಳು ವಿದ್ಯುತ್ ಕಂಬದ ಮೇಲೆ ಹೊಸ ಗೂಡನ್ನು ನಿರ್ಮಿಸಿರುವ ದೃಶ್ಯವನ್ನು ಕಾಣಬಹುದು. ನಂತರ ನಮಗೆ ಒಂದೊಳ್ಳೆ ಸೂರು ಸಿಕ್ಕಿತೆಂದು ಖುಷಿಯಿಂದ ಜೋಡಿ ಹಕ್ಕಿಗಳೆರಡು ನೆಮ್ಮದಿಯಾಗಿ ಗೂಡಿನೊಳಗೆ ಕುಳಿತಿರುವ ಸುಂದರ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅಬ್ಬಾ ಧೈರ್ಯವೇ! ಚಿರತೆ ಜೊತೆ ಸೆಲ್ಫಿ ತೆಗೆಯುತ್ತಿರುವ ಯುವಕ, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಡವಿದ ಗೂಡನ್ನು ಪುನರ್ ನಿರ್ಮಾಣ ಮಾಡಿದ ದೃಶ್ಯವನ್ನು ಕಂಡು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ