Viral Video: ಎಸ್ಕಲೇಟರೋ, ಜಾರು ಬಂಡಿಯೋ? ಯುವಕನ ಅಪಾಯಕಾರಿ ಸಾಹಸ ನೋಡಿದ್ರೆ ಶಾಕ್ ಆಗ್ತೀರಿ
ಜನರನ್ನು ಬೆಚ್ಚಿ ಬೀಳಿಸುವಂಥ ವ್ಹೀಲಿಂಗ್ಗಳನ್ನು ಪುಂಡರು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮಾಡಿರುವ ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ, ಇಲ್ಲೊಂದು ವಿಡಿಯೋ ಇದೆ. ಅದು, ವ್ಯಕ್ತಿಯೊಬ್ಬ ಎಸ್ಕಲೇಟರ್ನಲ್ಲಿ ಸ್ಟಂಟ್ ಮಾಡಿರುವುದಕ್ಕೆ ಸಂಬಂಧಿಸಿದ್ದು. ಈ ಸ್ಟಂಟ್ ನೋಡಿದರೆ ನೀವು ಒಂದು ಕ್ಷಣ ಬೆಚ್ಚಿ ಬೀಳುವುದು ಖಂಡಿತಾ.

ಇದು ಸ್ಟಂಟ್ ಪ್ರದರ್ಶಿಸಿ ವಿಡಿಯೋ ಮಾಡಿ ರೀಲ್ಸ್ (Reels) ಮಾಡುವ ಕಾಲ. ಬಹುಬೇಗ ಪ್ರಸಿದ್ಧರಾಗಲು ನಾನಾ ರೀತಿಯ ಸಾಹಸಗಳನ್ನು ಮಾಡುವುದನ್ನು ನೋಡುತ್ತಲೇ ಇರುತ್ತೇವೆ. ದ್ವಿಚಕ್ರ ವಾಹನಗಳ ವ್ಹೀಲಿಂಗ್ನಿಂದ (Wheeling) ಹಿಡಿದು ಏನೇನೋ ಅಪಾಯಕಾರಿ ಸಾಹಸ ಮಾಡಿರುವುದ ಬಗ್ಗೆ ವರದಿಗಳನ್ನು ಓದುತ್ತಿರುತ್ತೇವೆ. ವಿಡಿಯೋಗಳನ್ನೂ ನೋಡುತ್ತಿರುತ್ತೇವೆ. ಸಾಮಾಜಿಕ ಮಾಧ್ಯಮಗಳಲ್ಲಂತೂ ತರಹೇವಾರಿ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಯುವಕನೊಬ್ಬ ಸಾರ್ವಜನಿಕ ಪ್ರದೇಶದಲ್ಲಿ ಎಸ್ಕಲೇಟರ್ ಮೇಲೆ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದು, ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ಬೀಳುವ ಭಯದಿಂದ ಜನ ಎಸ್ಕಲೇಟರ್ಗಳಲ್ಲಿ ನಿಲ್ಲುವಾಗ ಬಹಳ ಎಚ್ಚರಿಕೆ ವಹಿಸುತ್ತಾರೆ. ಮೆಟ್ರೋ ಮತ್ತು ವಿಮಾನ ನಿಲ್ದಾಣಗಳಲ್ಲಿ ಜನ ಬಹಳ ಎಚ್ಚರಿಕೆಯಿಂದ ಎಸ್ಕಲೇಟರ್ನಲ್ಲಿ ನಿಲ್ಲುತ್ತಾರೆ. ಆದರೆ, ವ್ಯಕ್ತಿಯೊಬ್ಬ ಎಸ್ಕಲೇಟರ್ ಮೇಲೆಯೇ ಓಡಿ ಬಂದು ಸ್ಟಂಟ್ ಮಾಡುವ ವಿಡಿಯೋವನ್ನು ನೀವಿಲ್ಲಿ ಕಾಣಬಹುದು.
ಎಸ್ಕಲೇಟರ್ನಲ್ಲಿ ವ್ಯಕ್ತಿಯ ಸ್ಟಂಟ್: ವಿಡಿಯೋ ಇಲ್ಲಿ ನೋಡಿ
Wooow smooth!
Would you dare?pic.twitter.com/6Ym8T9pOoI
— Figen (@TheFigen_) March 16, 2024
ವ್ಯಕ್ತಿಯೊಬ್ಬ ಓಡಿ ಬಂದು ಎಸ್ಕಲೇಟರ್ ಏರಿ ಸಂತೋಷದಿಂದ ಜಾರುಬಂಡಿಯಲ್ಲಿ ಜಾರಿಕೊಂಡು ಹೋದಂತೆ ಸ್ಟಂಟ್ ಮಾಡಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಓಡಿ ಬಂದ ವ್ಯಕ್ತಿ ಎಸ್ಕಲೇಟರ್ನ ಬದಿಯಲ್ಲಿ ಜಾರಿಕೊಂಡು ವೇಗವಾಗಿ ಕೆಳಗೆಬರುತ್ತಾನೆ. ಆತನ ಸಾಹಸ ನೋಡಿದ ಯಾರಿಗೇ ಆದರೂ ಒಂದು ಕ್ಷಣ ಉಸಿರು ಬಿಗಿಹಿಡಿದಂತಾಗದೇ ಇರದು. ಅಷ್ಟೊಂದು ಅಪಾಯದ ನಡುವೆಯೂ ಆ ವ್ಯಕ್ತಿ ಅದ್ಭುತವಾಗಿ ಸಾಹಸ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ: ಅಬ್ಬಾ ಧೈರ್ಯವೇ! ಚಿರತೆ ಜೊತೆ ಸೆಲ್ಫಿ ತೆಗೆಯುತ್ತಿರುವ ಯುವಕ, ವಿಡಿಯೋ ವೈರಲ್
ಈ ವೀಡಿಯೊವನ್ನು @TheFigen ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಬಳಕೆದಾರರೊಬ್ಬರು, ‘ಸ್ವಲ್ಪ ಹೆಚ್ಚುಕಡಿಮೆಯಾದರೂ ನಿಮ್ಮ ಕಥೆ ಮುಗಿದಂತೆಯೇ’ ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಅಣ್ಣಾ, ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಪಾಯಕಾರಿ ಸಾಹಸವನ್ನು ಮಾಡುವುದು ಸರಿಯೇ?’ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, ‘ಈ ವ್ಯಕ್ತಿ ಜೀವನವನ್ನು ಪ್ರೀತಿಸುವುದಿಲ್ಲ ಎಂದು ತೋರುತ್ತದೆ’ ಎಂದು ಬರೆದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ