AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೆದರ್ ಲ್ಯಾಂಡ್ ಚಲನಚಿತ್ರ ನಿರ್ಮಾಪಕರಿಗೆ ಅಭಯ ನೀಡಿದ ಜುಮಾದಿ ದೈವ

ಕಾಂತಾರ ಚಿತ್ರದ ಬಳಿಕ ಭೂತ ಕೋಲ ಆಚರಣೆ ಜಗತ್ ಪ್ರಸಿದ್ಧಿಯಾಗಿದೆ. ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಕಾಂತಾರ ಚಿತ್ರ ವೀಕ್ಷಿಸಿದ ಜನರು ಭೂತ ಕೋಲ ಆಚರಣೆಯ ಕುರಿತು ಮಾತುಗಳನ್ನಾಡುತ್ತಿದ್ದಾರೆ. ಇದೀಗ ನೆದರ್ಲ್ಯಾಂಡಿನ ಚಲನಚಿತ್ರ ನಿರ್ಮಾಪಕರಾದ ಡೆನ್ನಿಸ್ ವ್ಯಾನ್ ಓಯೆನ್ ಮತ್ತು ಸೆಮ್ ಜೋನ್ಸ್ ಎಂಬವರು ಕೋಲೋತ್ಸವಕ್ಕೆ ಬಂದು ದೈವ ದೇವರ ಕೃಪೆಗೆ ಪಾತ್ರರಾಗಿದ್ದಾರೆ.  ಈ ಕುರಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

Viral Video: ನೆದರ್ ಲ್ಯಾಂಡ್ ಚಲನಚಿತ್ರ ನಿರ್ಮಾಪಕರಿಗೆ ಅಭಯ ನೀಡಿದ ಜುಮಾದಿ ದೈವ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Apr 08, 2024 | 3:20 PM

Share

ತುಳುನಾಡಿನಲ್ಲಿ ದೇವರ ಮಹಿಮೆಗಿಂತ ದೈವದ ಕಾರಣಿಕಕ್ಕೆ ಜನರು ಹೆಚ್ಚು ಮಣಿಯುತ್ತಾರೆ. ಹೌದು ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ದೈವಾರಾಧನೆಯನ್ನು ಇಲ್ಲಿನ ಜನರು ಶ್ರದ್ಧೆ, ಭಯ, ಭಕ್ತಿಯಿಂದ ಆರಾಧನೆ ಮಾಡುತ್ತಾರೆ. ಕಾಂತಾರ ಚಿತ್ರದ ಬಳಿಕ ಭೂತ ಕೋಲ ಆಚರಣೆ ಜಗತ್ ಪ್ರಸಿದ್ಧಿಯಾಗಿದ್ದು, ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ದೈವ ದೇವರ ಆಶಿರ್ವಾದವನ್ನು ಪಡೆಯಲು ಜನರು ಇಲ್ಲಿಗೆ ಬರುವುದುಂಟು. ಇದೀಗ ನೆದರ್ ಲ್ಯಾಂಡಿನ ಚಲನಚಿತ್ರ ನಿರ್ಮಾಪಕರಾದ ಡೆನ್ನಿಸ್ ವ್ಯಾನ್ ಓಯೆನ್ ಮತ್ತು ಜೋನ್ಸ್ ಎಂಬವರು ಕೋಲೋತ್ಸವವನ್ನು ವೀಕ್ಷಿಸಿಲು  ಬಂದಿದ್ದು, ಈ ಕುರಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋವನ್ನು ಸಮ್ಮಿಲನ್ ಶೆಟ್ಟಿ (@sammilan_shetty) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು,  “ಅವರಾಳುವಿನ ಜುಮಾದಿ ದೈವವು ನೆದರ್ಲ್ಯಾಂಡಿನ ಚಲನಚಿತ್ರ ನಿರ್ಮಾಪಕರಾದ ಡೆನ್ನಿಸ್ ವ್ಯಾನ್ ಓಯೆನ್ ಮತ್ತು ಸೆಮ್ ಜೋನ್ಸ್ ಅವರಿಗೆ ಅಭಯ ನೀಡಿದೆ; ಇದು ಆಧ್ಯಾತ್ಮಿಕತೆ ಮತ್ತು  ಸಂಸ್ಕೃತಿಯ ಮಿನಿಮಯ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೆಡವಿದ ಹಕ್ಕಿ ಗೂಡಿನ ಪುನರ್ ನಿರ್ಮಾಣ, ಇದಕ್ಕೆ ಸೋಷಿಯಲ್ ಮೀಡಿಯಾವೇ ಕಾರಣ 

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಉಡುಪಿ ಜಿಲ್ಲೆಯ ಅವರಾಳುವಿನಲ್ಲಿ ನಡೆದ ಜುಮಾದಿ ದೈವದ ನೇಮೋತ್ಸವದಲ್ಲಿ ದೂರದ ನೆದರ್ ಲ್ಯಾಂಡ್ ದೇಶದ ಚಲನಚಿತ್ರ ನಿರ್ಮಾಪಕರಾದ ಡೆನ್ನಿಸ್ ವ್ಯಾನ್ ಓಯೆನ್ ಮತ್ತು ಸೆಮ್ ಜೋನ್ಸ್ ಭಾಗಿಯಾಗಿ ದೈವ ದೇವರ ಕೃಪೆಗೆ ಪಾತ್ರರಾಗಿರುವ ದೃಶ್ಯವನ್ನು ಕಾಣಬಹುದು.   ಈ ಸುಂದರ ವಿಡಿಯೋ ಇದೀಗ ನೆಟ್ಟಿಗರ ಮನ ಗೆದ್ದಿದೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ